ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, Mohoooohoooohnolowy ೧೧೦೦೦೧oon ದಲ್ಲಿಯೇ ಇದ್ದ ಒಂದು ಝರಿಯ ಕಡೆಗೆ ಗಾಡಿಗಳನ್ನು ಹೊಡೆದರು. ಆ ಕೂಡಲೆ ಗೋಪಾಳ-ಶಾಮರಾಯರು ಹಾದಿಯ ಕಡೆಗೇ ನೋಡುತ್ತ ಕುಳಿತರು. ಇಷ್ಟರಲ್ಲಿ ವಿನಾಯಕನು ತನ್ನ ಸ್ನೇಹಿತನೊಡನೆ ತೀರ ಅವರ ಸಮೀಪಕ್ಕೆ ಬಂದಿದ್ದನು. ಈ ಪ್ರಕಾರ ಸಮೀಪಕ್ಕೆ ಬಂದರೂ ಅವರ ಲಕ್ಷವೆಲ್ಲ ಗಾಡಿಗಳ ಕಡೆಗೇ ಇದ್ದದ್ದರಿಂದ, ಅವರಿಗೆ ತಮ್ಮ ಹಿಂದೆ ಯಾರು ಬಂದಿದ್ದಾರೆಂಬುವದು ತಿಳಿಯಲಿಲ್ಲ. ವಿನಾಯಕ ಮತ್ತು ಅವನ ಸ್ನೇಹಿತ ಇವರ ಹತ್ತರ ಆಯುಧಗಳೇನೂ ಇದ್ದಿಲ್ಲ, ಅರ್ಥಾತ್ ಅವರಿಗೆ ತಮ್ಮ ಕಾರ್ಯಭಾಗವನ್ನು ಒಳ್ಳೆಯುಕ್ತಿಯಿಂದ ಸಾಧಿಸಿಕೊಳ್ಳಬೇಕಾಗಿದ್ದಿತು. ವಿನಾಯಕನು ಆ ಯುಕ್ತಿಯನ್ನು ಯೋಚಿಸಿಯೂ ಇಟ್ಟಿದ್ದನು. ಗೋಪಾಳನೂ, ಶಾಮರಾಯನೂ ಚಿತ್ರದಂತೆ ಕುಳಿತು ಹಾದಿಯ ಕಡೆಗೆ ನೋಡುತ್ತಿದ್ದದ್ದನ್ನು ಕಂಡು ವಿನಾಯಕನೂ, ಅವನ ಸ್ನೇಹಿತನೂ ಅವರ ಹತ್ತರ ಅತ್ಯಂತ ತ್ವರೆಯಿಂದ ಹೋಗಿ ಅವರು ಪ್ರತೀಕಾರ ಮಾಡುವಷ್ಟರಲ್ಲಿಯೇ ವಿನಾಯಕನು ಶಾಮರಾಯ-ಗೋಪಾಳರ ಬೆನ್ನು ಗಳ ಮೇಲೆ ಒಂದೊಂದು ಹೊಡತವನ್ನು ಹೊಡೆದು ಕಲ್ಲಿನ ಮೇಲಿಂದ ಅವರನ್ನು ಕೆಳಗೆ ದೂಡಿ ದನು, ಅಕಸ್ಮಾತ್ತಾಗಿ ತಗಲಿದ ವಿಲಕ್ಷಣಪ್ರಹಾರದಿಂದ ಇಬ್ಬರೂ ಬಳ್ಳಬರಲೆ ನೆಲಕ್ಕೆ ಬಿದ್ದರು, ಇಬ್ಬರ ಬಂದೂಕುಗಳು ಮಸಿಯಿಂದ ತುಂಬಿದ್ದವು, ಅವುಗಳಲ್ಲಿ ಗೋಪಾಳನ ಬಂದೂಕು ಹಾರಲಿಲ್ಲ; ಆದರೆ ಶಾಮರಾಯನ ಬಂದೂಕಿನ ಕುದುರೆಗೆ ಆಘಾತವಾಗಿ ಅದು ಕೂಡಲೆ ಹಾರಿದ್ದರಿಂದ, ಗುಂಡು ಶಾಮರಾಯನ ಎಡಗೈಗೆ ತಗಲಿತು, ವಿನಾ ಯಕನು ಕೂಡಲೆ ಅವರಿಬ್ಬರ ಬಂದೂಕುಗಳನ್ನು ಕಸಕೊಂಡು ಅವರನ್ನು ಎಬ್ಬಿಸಿ ಕೂಡ್ರಿಸಿದನು, ಮತ್ತು ಅವರಿಗೆ ಎಲ್ಲೆಲ್ಲಿ ಪೆಟ್ಟು ತಗಲಿರುತ್ತದೆಂದು ವಿಚಾರಿಸಿದನು. ಶಾಮರಾಯನು ವಿನಾಯಕನ ಧ್ವನಿಯನ್ನು ಕೂಡಲೆ ಗುರ್ತುಹಿಡಿದಿದ್ದನು; ಆದರೂ ಗುಂಡಿನ ಹೊಡತದಿಂದ ಬೋಳೆ ಬಂದದ್ದರಿಂದ ಅವನು “ ಅಯ್ಯೋ ನನ್ನ ಕೈಯೇ ?” ಎಂದನ್ನುತ್ತ ಕೈಯನ್ನು ಮೇಲಕ್ಕೆ ಮಾಡಿ ಅವ್ವಾ ಅವ್ವಾ, ದೇವಾ ದೇವಾ' ಎಂದು ಕೂಗಿದನು. ಕೂಡಲೆ ವಿನಾಯಕನು ಕಿಸೆಯೊಳಗಿಂದ ಕರವಸ್ತ್ರವನ್ನು ತೆಗೆದು ಶಾಮ ರಾಯನ ಗಾಯಕ್ಕೆ ಚನ್ನಾಗಿ ಕಟ್ಟಿ ಶಾಮರಾಯನನ್ನು ಕುರಿತು:-( ಶಾಮರಾಯ, ನನ್ನನ್ನು ಕೊಲ್ಲಲಿಕ್ಕೆ ಪ್ರಯತ್ನ ಮಾಡಿದ ನಿಮಗೆ ದೇವರೇ ಈ ಸ್ಥಿತಿಯನ್ನು ತಂದಿರು ವನು.” ಎಂಬದಾಗಿ ನುಡಿದನು. ಈಗ ಶಾಮರಾಯನು ಪೂರ್ಣ ಜಾಗೃತಾವಸ್ಥೆಗೆ ಬಂದಿದ್ದನು; ಆದರೂ ಅವನಿಗೆ ಮರಣಪ್ರಾಯ ಲಜ್ಞೆಯಾದದ್ದರಿಂದ ಅವನು ಮೋರೆ ಕೆಳಗೆ ಮಾಡಿಕೊಂಡು ಸ್ವಸ್ಥ ವಾಗಿ ಕುಳಿತಿದ್ದನು. ಗೋಪಾಳನಂತೂ ಗೊಲ್ಲನೇ ಆಗಿದ್ದನು. ಅವನ ಅರ್ಧಜೀವವೇ ಹೋಗಿದ್ದಿತು. ವಿನಾಯಕನು ಮುಂದೇನು ಮಾಡುತ್ತಾನೆಂಬ ಬಗ್ಗೆ ಅವರಿಬ್ಬರಿಗೆ ಒಳ್ಳೇ ದಿಗಿಲು ಬಿದ್ದಿತು. ಇಬ್ಬರೂ ಏನೂ ಮಾತಾಡದ್ದನ್ನು ನೋಡಿ ವಿನಾಯಕನು