ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ನೆಯ ಪ್ರಕರಣವನದೇವತ! •wwwvvvvvvvvvvvvvvvvvv ( ಶಾಮರಾಯ, ನೀವು ನನ್ನನ್ನು ಕೊಲ್ಲಲಿಕ್ಕೆ ನಾನು ಮಾಡಿದ ಅಪರಾಧವಾದರೂ ಯಾವದು ?” ಎಂದನು, ವಿನಾಯಕನ ಈ ಪ್ರಶ್ನೆಗೆ ಶಾಮರಾಯನಿಂದ ಏನೂ ಉತ್ತ. ರವು ದೊರೆಯಲಿಲ್ಲ ಆಗ ವಿನಾಯಕನು ಪುನಃ:-ಶಾಮರಾಯ, ನೀವು ಬೇಕಾ ದಷ್ಟು ಪ್ರಯತ್ನ ಮಾಡಿದರೂ ನೀಲಕಂಠರಾಯನ ಒಂದು ಕವಡಿ ಸಹ ನಿಮಗೆ ಸಿಗ ಲಾರದು, ಯಾಕಂದರೆ, ದೇವರ ಇಚ್ಛೆಯು ಹಾಗಿಲ್ಲ. ಸುಮ್ಮನೆ ಇ೦ಥ ಪಾಪಕೃತ್ಯ ದಿಂದ ಜನೋಪಹಾಸಕ್ಕೆ ಮಾತ್ರ ಪಾತ್ರರಾಗುತ್ತೀರಿ.” ಎಂದನು. ವಿನಾಯಕನ ಈ ಶಬ್ದವನ್ನು ಕೇಳಿ ಶಾಮರಾಯನ ಬಾಯಿಯೊಳಗಿನ ನೀರು ಹೇಳದೆ ಕೇಳದೆ ಓಡಿ ಹೋದವು, ತನ್ನನ್ನು ಹಿಡಿದು ವಿನಾಯಕನು ಪೋಲೀಸರ ಸ್ವಾಧೀನ ಮಾಡಿದರೆ ತನ್ನ ವಿಳಂಬನಕ್ಕೆ ಮೇರೆಯಿಲ್ಲವಾಗುತ್ತದೆಂದು ಆಲೋಚಿಸಿ ಅವನು ಅತ್ಯಂತ ನಮ್ರತೆ ಯಿಂದ ವಿನಾಯಕನನ್ನು ಕುರಿತು:- ವಿನಾಯಕರಾಯ, ಇದೊಂದು ಸಾರೆ ನನ್ನನ್ನು ಕ್ಷಮಿಸಿರಿ. ಈ ಮುಂದೆ ತಿಲಾಂಶವಾದರೂ ನಿಮಗೆ ತ್ರಾಸು ಕೊಡುವದಿಲ್ಲ. ಇದರ ಮೇಲೆಯೂ ಕೊಟ್ಟರೆ ನೀವು ಬೇಕಾದ ಶಿಕ್ಷೆ ಮಾಡಿರಿ.” ಎನ್ನಲು ಆಗ ವಿನಾಯ ಕು:-( ಶಾಮರಾಯ, ನಿಮಗೆ ಕ್ಷಮಿಸುವದೂ, ವಿಪಾರೀ ಸರ್ಪಕ್ಕೆ ಹಾಲು ಕುಡಿ ಯಲಿಕ್ಕೆ ಹಾಕುವದೂ ಒಂದೇ ಆದರೂ ನಾನು ಈಗ ನಿಮ್ಮ ತಪ್ಪಿಗೆ ಕ್ಷಮಿಸುತ್ತೇನೆ. ನಿಮಗೆ ಹೇಳುವದಿಷ್ಟೇ, ಈ ಮುಂದೆ ನಿಮ್ಮ ಕಲ್ಯಾಣಕ್ಕಾದರೂ ಸನ್ಮಾರ್ಗದಿಂದ ನಡೆ ಯಿರಿ.” ಎಂದನು. ವಿನಾಯಕನ ಕ್ಷಮಾವಾಕ್ಯವು ಕಿವಿಯಲ್ಲಿ ಬೀಳುತ್ತಲೇ ಶಾಮ-ಗೋಪಾಳರು ಮೆಲ್ಲನೆ ಅರಣ್ಯವನ್ನು ಹೊಕ್ಕು ಓಡಿಹೋದರು. ಅವರು ಹೋದ ಮೇಲೆ ವಿನಾಯ ಕನೂ, ಅವನ ಸ್ನೇಹಿತನೂ ಒಂದೊಂದು ಬಂದೂಕು ಹಿಡಿದುಕೊಂಡು, ಬಂದ ಹಾದಿ ಯಿಂದ ಹಿಂದಿರುಗಿ ಬಂದು ಗಿಡದ ಕೆಳಗಿನ ಕುದುರೆಗಳನ್ನು ಬಿಚ್ಚಹತ್ತಿದರು. ಅಷ್ಯ ರಲ್ಲಿ ಇಂದಿರೆಯು ಬಂದು ವಿನಾಯಕನ ಮುಂದೆ ನಿಲ್ಲಲು ವಿನಾಯಕನು:-( ನೀವು ಇನ್ನೂ ಇಲ್ಲಿಯೇ ಇರುವಿರೋ ? ನೀವು ಹೋಗಿರಬಹುದೆಂದು ಭಾವಿಸಿದ್ದೆನು ! ನಾನು ಶಾಮರಾಯನಿಗೆ ಕ್ಷಮಿಸಿ ಬಂದಿದ್ದೇನೆ, ಮುಖ್ಯವಾಗಿ ಇಂದು ನನ್ನ ಪ್ರಾಣವು | ನಿಮ್ಮಿಂದಲೇ ಉಳಿಯಿತು. ಆ ಸಂಬಂಧವಾಗಿ ನಿಮ್ಮ ಉಪಕಾರವನ್ನು ಹೊಗಳಲಿಕ್ಕೆ ನನ್ನದೊಂದು ನಾಲಿಗೆಯಿಂದಾಗದು. ಈ ಉಪಕಾರ-ಋಣದೊಳಗಿನ ಕೆಲವಂಶವನ್ನಾ ದರೂ ತೀರಿಸಲಿಕ್ಕೆ ನನಗೆ ಯಾವದಾದರೊಂದು ಕೆಲಸವನ್ನು ಹೇಳಿದರೆ, ಅದನ್ನು ನಾನು ಒಳ್ಳೆ ಆನಂದದಿಂದ ಮಾಡುವೆನು.” ಎಂದನ್ನಲು ಇಂದಿರೆಯು ಸ್ವಲ್ಪ ನಕ್ಕು:- (“ ನೀವು ತೀರ ಅನುಚಿತೋಕ್ತಿಯನ್ನು ಆಡಿದಿರಿ, ನನ್ನ ತಂದೆಯು ನಿಮಗೆ ಅನಂತ ಅಪರಾಧಗಳನ್ನು ಮಾಡಿದರೂ, ನೀವು ಮತ್ತೂ ಆತನನ್ನು ಕ್ಷಮಿಸಿದಿರಿ, ಕಾರಣ ಈ ನಿಮ್ಮ ಮಹದುಪಕಾರದ ಸಲುವಾಗಿ ನಾನು ನಿಮ್ಮ ಆಜನ್ಮ ಋಣಿಯಾಗಿದೇನೆ.