ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳಿ; mM ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. mmmmmmmmmmmmonwoo. ನಿಮ್ಮ ಕಡೆಗೆ ನನ್ನದೊಂದು ಕೆಲಸವದೆ, ಆದರೆ ಅದನ್ನು ನೀವು ಪಾಲಿಸುತ್ತೀರೋ ಇಲ್ಲೋ ಎಂಬುವದು ಸಂಶಯಾಸ್ಪದವಾಗಿದೆ.” ಎಂದನ್ನಲು ಆಗ ವಿನಾಯಕನು:-( ಅಗತ್ಯವಾಗಿ ಹೇಳಿರಿ, ಶಕ್ತಿಯಿದ್ದಷ್ಟು ಪ್ರಯತ್ನ ಮಾಡುವೆನು.” ಎಂದನ್ನಲು ನಾಚಿಕೆಯೂ ಕೂಡಲೆ ಸುವಿಚಾರವೂ ಹುಟ್ಟಿ ಇಂದಿರೆಯು:-( ಆ ನನ್ನ ಕೆಲಸವನ್ನು ಮುಂದೆ ಎಂದಾದರೂ ನಿಮಗೆ ಹೇಳುವೆನು. ಮೊದಲೇ ನಾನು ಪ್ರಯತ್ನ ಮಾಡಿ ನೋಡುವೆನು, ನನ್ನಿಂದಾ ಗದಿದ್ದರೆ ನಿಮಗೆ ಹೇಳುವೆನು.” ಎಂದಳು. ವಿನಾಯಕನಿಗೆ ಇಂದಿರೆಯ ಈ ಗೂಢ ವಿಚಾರವು ತಿಳಿಯಲಿಲ್ಲ, ಅಲ್ಲದೆ ಅವನ ಲಕ್ಷವಾದರೂ ಆಗ ಹಾದಿಯ ಮೇಲಿರುವ ಗಾಡಿಗಳಕಡೆಗಿದ್ದಿತು. ಆಗ ಅವನು:-( ನೀವು ನಿಮ್ಮ ಇಚ್ಛೆಯಂತೆ ನಿಮ್ಮ ಕೆಲಸದ ಬಗ್ಗೆ ಅಪ್ಪಣೆ ಮಾಡಿದಾಗ ಅದನ್ನು ನಾನು ಶಿರಸಾವಹಿಸಿ ಮಾಡಲಿಕ್ಕೆ ಸಿದ್ಧನಿದ್ದೇನೆ; ಆದರೆ ಇಂಥ ರಾತ್ರಿಯಲ್ಲಿ ನೀವು ಎಲ್ಲಿಗೆ ಹೋಗುವದು ? ನಮ್ಮ ಗಾಡಿಯೊಳಗೆ ಕುಳಿತು ನಮ್ಮ ಕಾರಖಾನೆಗೆ ಬರಿ, ಮುಂಜಾನೆ ನೀವು ಹೋಗಬೇಕಾದ ಸ್ಥಳಕ್ಕೆ ಕಳಿಸಿಕೊಡುವೆನು.” ಎನ್ನಲು ಇಂದಿರೆಯು ನಗುತ್ತ:-( ನನಗೆ ರಾತ್ರಿಯಲ್ಲಿ ಭೀತಿ ಯಾಗುವದಿಲ್ಲ, ನೀವು ಹೇಗೆ ವಿಪದ-ಸಂಪದಗಳನ್ನು ಈಶ್ವರಸ್ವಾಧೀನಮಾಡಿ ಅವನ ಮೇಲೆ ವಿಶ್ವಾಸವಿಟ್ಟು ನಡೆಯುತ್ತೀರೋ, ಹಾಗೆಯೇ ನಾನೂ ಸರ್ವಭಾರವನ್ನು ಈಶ್ವ ರನ ಮೇಲೆ ಹಾಕಿರುತ್ತೇನೆ, ಆ ದಯಾಘನನೇ ನನ್ನ ಸಂರಕ್ಷಕನಾಗಿರುವನು. ” ಎಂದನ್ನುತ್ತ ಅಡವಿಯಲ್ಲಿ ಹೊರಟುಹೋದಳು. ವಿನಾಯಕನೂ, ಅವನ ಸ್ನೇಹಿ ತನೂ ಅವಳ ವಿಷಯವಾಗಿ ಆಶ್ಚರ್ಯಬಡುತ್ತ ಗಾಡಿಗಳ ಹತ್ತಿರ ಬಂದರು. ಅವ ರಿಬ್ಬರು ಬಂದಕೂಡಲೆ ಗಾಡಿಗಳು ಭರದಿಂದ ರಾಮಪುರದ ಮಾರ್ಗವನ್ನು ಆಕ್ರಮಣ ಮಾಡಹತ್ತಿದವು. S&:: :: :: -+