ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ. MMonno ಗೊಡಲಿಕ್ಕಿಲ್ಲವೆಂದು ಅವಳಿಗೆ ನಂಬಿಗೆಯಿದ್ದರೂ, ಅವಳು ವಿನಾಯಕನೊಡನೇ ಲಗ್ನವಾಗಬೇಕೆಂದು ನಿಶ್ಚಯಿಸಿದಳು. ರಾಮಪುರದಲ್ಲಿ ದಿವ್ಯಸುಂದರಿಯು ಇರುವಾಗ ಅವಳು ತನ್ನ ಕೂಡ ನಡಕೊಂಡ ವರ್ತನದ ಮೇಲಿಂದ ವಿನಾಯಕನ ಮನಸ್ಸಿನಲ್ಲಿ ಯೂ ಅವಳ ಬಗ್ಗೆ ಬೇರೊಂದು ಪರಿಣಾಮವಾಯಿತು. ದಿವ್ಯಸುಂದರಿಯು ತನ್ನ ಮನ ಸೃನ್ನು ಆಕರ್ಷಣಮಾಡಿಕೊಂಡದ್ದರಿಂದಲೋ ಅಥವಾ ಮತ್ತೇನೋ ತನ್ನ ಅಂತಃ ಕರಣದಲ್ಲಿ ದಿವ್ಯಸುಂದರಿಯ ಪ್ರವೇಶವಾಯಿತೆಂದು ಅವನು ಭಾವಿಸಿದನು; ಆದರೂ ದಿವ್ಯಸುಂದರಿಗಿಂತ ಅವನ ಮನಸ್ಸು ಖಂಬೀರವಾಗಿದ್ದದ್ದರಿಂದ ದಿವ್ಯಸುಂದರಿಯು ಮಾತಾಡುವಾಗ ನಾಚುವಂತೆ ಅವನು ನಾಚುತ್ತಿದ್ದಿಲ್ಲ. ಅವನ ಮನಸ್ಸು ನಿರ್ವಿಕಾರ ವಾಗಿದ್ದಿತೆಂದು ಹೇಳಲಿಕ್ಕೆ ಬಾರದಿದ್ದರೂ ಅವನು ತನ್ನ ಮನೋದಯವನ್ನು ಹೊರಗೆ ಯಾರಿಗೂ ತಿಳಿಯಗೊಡಲಿಲ್ಲ. ಹತ್ತು ಹನ್ನೆರಡು ದಿವಸವಾದ ಮೇಲೆ ರಾಮರಾಯನು ಊರಿಗೆ ಹೋಗಲಿಕ್ಕೆ ಹೊರಟನು. ಆಗ ದಿವ್ಯಸುಂದರಿಯು ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡು ವಿನಾಯಕನ ನಿರೋಪಬೇಡಿದ ಕೂಡಲೆ ನಿರುಪಾಯನಾಗಿ, ಆಗ. ಮಾತ್ರ ಅವನು ಕಣ್ಣೀರು ಹಾಕಿದನು. ದಿವ್ಯಸುಂದರಿ ಮೊದಲಾದವರನ್ನು ಕಳಿಸಿ ಕೊಡುವದಕ್ಕಾಗಿ ಅವನು ಬಸರಾಬಾದದ ತನಕ ಹೋಗಿದ್ದನು, ಅಲ್ಲಿಗೆ ಹೋಗಿ ಒಂದು ಸುಂದರವಾದ ಸಣ್ಣ ಬೋಟಿನಲ್ಲಿ ಅವರನ್ನು ಕೂಡ್ರಿಸಿ ಅವನು ಹಿಂದಿರುಗಿ ದನು, ಅವನು ಹಿಂದಕ್ಕೆ ತಿರುಗಿದರೂ, ಬೋಟು ಕಾಣಿಸುವ ತನಕ ಅವನ ದೃಷ್ಟಿ ಯೆಲ್ಲ ಆ ಕಡೆಗೇ ಇದ್ದಿತು. ದಿವ್ಯಸುಂದರಿಯು ದೃಷ್ಟಿ ಸೀಮೆಯನ್ನು ದಾಟಿಹೋದ ಮೇಲೆ ಅವನೂ ತನ್ನ ದೃಷ್ಟಿಯನ್ನು ಜುಲುಮೆಯಿಂದ ಹಿಂದಕ್ಕೆ ತಕ್ಕೊಂಡು, ಕಟ್ಟಿದ್ದ ಕುದುರೆಯನ್ನು ಬಿಚ್ಚಿ ಅದರ ಮೇಲೆ ಹತ್ತಿಕೊಂಡು, ಇನ್ನು ಓಡಿಸಬೇ ಕೆಂಬುವಷ್ಟರಲ್ಲಿ ಇಂದಿರೆಯು ತನ್ನ ಕಡೆಗೆ ಸಹಾಸ್ಯವದನದಿಂದ ನೋಡುತ್ತಿರುವದು ಅವನ ದೃಷ್ಟಿಗೆ ಬಿದ್ದಿತು. ಈ ತರುಣಿಯು ಹೀಗೆ ಅಕಸ್ಮಾತ್‌ ಮೇಲಿಂದ ಮೇಲೆ ನನ್ನ ದೃಷ್ಟಿಗೆ ಯಾಕೆ ಬೀಳುತ್ತಿರಬಹುದೆಂಬ ಬಗ್ಗೆ ಅವನ ಮನಸ್ಸಿನಲ್ಲಿ ಒಳ್ಳೆ ವಿಚಾರವು ಹುಟ್ಟಿತು. ಈಗ ಈ ಸಂಬಂಧವಾಗಿ ಅವಳಿಗೆ ಕೇಳಿಯೇ ಬಿಡಬೇಕೆಂದು ಅವನು ಯೋಚಿಸಿ, ಅವಳಿದ್ದ ಕಡೆಗೆ ಕುದುರೆಯನ್ನು ತಿರುವಿದನು; ಆದರೆ ಇಂದಿ ರೆಗೆ ಏನು ತಿಳಿಯಿತೋ ಏನೋ ಯಾರಿಗೆ ಗೊತ್ತು! ತನ್ನ ಕಡೆಗೆ ವಿನಾಯಕನು ಬರುವದನ್ನು ನೋಡಿ ಅವಳು ಕೂಡಲೆ ಬಸರಾಬಾದಗ್ರಾಮದಲ್ಲಿ ಹೊಕ್ಕಳು. ಇದನ್ನು ನೋಡಿ ವಿನಾಯಕನು ಆಶ್ಚರ್ಯಚಕಿತನಾಗಿ, ಆ ಸಂಬಂಧವಾಗಿ ವಿಚಾರಿ ಸುತ್ತ ತಿರುಗಿ ರಾಮಪುರಮಾರ್ಗವಾಗಿ ಕುದುರೆಯನ್ನು ಹೊಡೆದು ಕಾರಖಾನೆಗೆ ಬಂದನು. ಮೇಲೆ ಹೇಳಿದ ಮಾತಿಗೆ ಒಂದು ವರ್ಷವಾದ ಮೇಲೆ ವಿನಾಯಕನ ಕಾರ ಖಾನೆಯು ಮತ್ತಿಷ್ಟು ಮೂರ್ತಸ್ವರೂಪವನ್ನು ಹೊಂದಿತು. ಕಾರಖಾನೆಯಲ್ಲಿ ಶುದ್ಧ