ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ನೆಯ ಪ್ರಕರಣ-ದೀ ಕಾಮರ್ಸ ಬ್ಯಾಂಕ್ ಆಫ್ ಇಂಡಿಯಾ! ಆ೬ MMummmmmmmmmmm. ಧಾತುವು ಸಿದ್ದವಾಗಹತ್ತಿದ ಕೂಡಲೆ ವಿನಾಯಕನು ಆ ಧಾತುವಿನ ಅನೇಕ ವಸ್ತುಗೆ ಳನ್ನು ಮಾಡಲಿಕ್ಕೆ ಪ್ರಾರಂಭಿಸಿದನು, ಅದರಲ್ಲಿಯೂ ಅವನಿಗೆ ಯಶಸ್ಸು ಸಿಗಹತ್ತಿತು. ಈ ಪ್ರಕಾರ ತನ್ನ ಕಾರಖಾನೆಯು ಪ್ರಸಿದ್ಧಿಗೆ ಬಂದಕೂಡಲೆ ಅವನ ಮನಸ್ಸಿನಲ್ಲಿ ವ್ಯಾಪಾರದೃಷ್ಟಿಯಿಂದ ಸರಕನ್ನು ತೀವ್ರವಾಗಿ ಸ್ವಲ್ಪ ಖರ್ಚಿನಿಂದ ಪೇಟೆಗೆ ಹೇಗೆ ಕಳಿಸಬೇಕೆಂಬ ಬಗ್ಗೆ ಆಲೋಚನೆಯು ಹುಟ್ಟಿತು. ರಾಮಪುರದಿಂದ ಮಧ್ಯಪ್ರಾಂತ ದೊಳಗಿನ ಚಾಂದಾ ಪಟ್ಟಣದ ತನಕ ಒಂದು ಚಕ್ಕಡಿಯ ಹಾದಿಯಿದ್ದಿತು. ಈ ಹಾದಿಯಲ್ಲಿ ಆಗಗಾಡಿಯ ಮಾರ್ಗವನ್ನು ಮಾಡಬೇಕೆಂದು ವಿನಾಯಕನಿಗೆ ತೋರ ಹತ್ತಿತು. ಆಗ ಅವನು ಅದರ ಪರವಾನಗಿಯ ಸಲುವಾಗಿ ಸರಕಾರದಲ್ಲಿ ಬಹು ಪ್ರಯತ್ನ ಮಾಡಿದನು, ಆದರೆ ಆ ಕೆಲಸದಲ್ಲಿ ಅವನಿಗೆ ಯಶಸ್ಸು ದೊರೆಯಲಿಲ್ಲ. ಬಸರಾಬಾದದಲ್ಲಿ ದೊಡ್ಡ ಬೋಟುಗಳು ನಿಲ್ಲಲಿಕ್ಕೆ ಆಸ್ಪದವಿಲ್ಲದ್ದರಿಂದ ಅಲ್ಲಿಯೂ ಸರಕು ಹೆಚ್ಚು ಒಯ್ಯಲಿಕ್ಕೆ ಅನುಕೂಲವಾಗಲಿಲ್ಲ. ಆಗ ವಿನಾಯಕನು ಬೇಜವಾ ಡದ ಸಮೀಪದಲ್ಲಿ ಗೋದಾವರಿ ನದಿಯ ದಂಡೆಯ ಮೇಲಿರುವ ವಜಿರಾಬಾದದ ತನಕ ಮಾರ್ಗವನ್ನು ಮಾಡಬೇಕೆಂದು ನಿಶ್ಚಯಿಸಿದನು, ಮತ್ತು ಆ ಬಗ್ಗೆ ನಿಜಾಮ ಸರಕಾರದಿಂದ ಪರವಾನಗಿ ದೊರಕಿಸಿದನಲ್ಲದೆ, ಆ ಸರಕಾರದಿಂದ ಮಾರ್ಗಸ್ಥಾಪನೆ ಗಾಗಿ ದುಡ್ಡಿನ ಸಹಾಯವನ್ನೂ ಮಾಡಿಕೊಂಡನು. ಈ ರೀತಿಯಿಂದ ಸಹಾಯವು ಸಿಕ್ಕಮೇಲೆ ವಿನಾಯಕನು ಆ ಕೆಲಸವನ್ನು ಒಳ್ಳೇ ಒತ್ತರದಿಂದ ಮಾಡಿಸಹತ್ತಿದನು. ಹಾದಿಗೆ ಹಾಕತಕ್ಕ ಗಾಡಿಯ ಹಳಿ ಮೊದಲುಮಾಡಿಕೊಂಡು ಗಾಡಿಯ ಡಬ್ಬಿ, ಎಂಜನ ಮೊದಲಾದ ಎಲ್ಲ ಸಾಮಾನುಗಳನ್ನು ತನ್ನ ಕಾರಖಾನೆಯಲ್ಲಿಯೇ ಸಿದ್ಧ ಪಡಿಸಿ ದನು, ರಾಮಪುರದಿಂದ ವಜಿರಾಬಾದವು ಹದಿನೆಂಟು ಮೈಲಿದ್ದು, ಆ ರೇಲ್ವೆಯನ್ನು ಪ್ರಾರಂಭಿಸಲಿಕ್ಕೆ ಸ್ವತಃ ನಿಜಾಮಸರಕಾರದ ಬಾದಶಹನೇ ಬಂದನು. ಆ ಪೂರ್ಣ ಸ್ವದೇಶೀ ಗಾಡಿಯನ್ನು ಚಾಲೂಮಾಡುವಾಗ ನಿಜಾಮನು ಅತ್ಯಂತ ಸಂತೋಷ ಪ್ರದ ರ್ಶನಮಾಡಿದನು, ಮತ್ತು ಅವನು ವಿನಾಯಕನ ಬೆನ್ನು ಚಪ್ಪರಿಸಿ ಅವನಿಗೆ ಒಳ್ಳೆ ಪಾರಿತೋಷಕವನ್ನು ಕೊಟ್ಟನು. ಆ ಸಮಾರಂಭವನ್ನು ನೋಡುತ್ತಿರುವಾಗ ಎಷ್ಟೋ ಜನರ ಕಣ್ಣುಗಳಲ್ಲಿ ಆನಂದಾಶ್ರುಗಳು ತುಂಬಿಬಂದವು, ಎಷ್ಟೋ ಜನರು ವಿನಾಯಕ ನನ್ನು ಅಪ್ಪಿಕೊಂಡು ಅವನಿಗೆ ಯಥೋಚಿತ ಗೌರವ ಮಾಡಿದರು. ಗಾಡಿಯಾದ ಮೇಲೆ ವಿನಾಯಕನ ಸಾಮಾನುಗಳು ಎಷ್ಟೊ ಪೇಟೆಗಳಿಗೆ ಸ್ವಲ್ಪ ಖರ್ಚಿನಿಂದ ತೀವ್ರ ವಾಗಿ ಹೋಗಹತ್ತಿದವು, ಅದರಿಂದ ಅವನ ಕಾರಖಾನೆಯ ಬೆಳಕು ದಿಗ್ದಶವನ್ನಲ್ಲ ವ್ಯಾಪಿಸಿತು. ಕಾರಖಾನೆಯ ಬೆಳವಣಿಗೆಯ ಸಂಗಡ ವಿನಾಯಕ-ದಿವ್ಯಸುಂದರಿಯರ ಪ್ರೇಮ ಭಾವವೂ ಬೆಳೆಯುತ್ತ ನಡೆಯಿತು, ಆ ಅವಧಿಯಲ್ಲಿ ವಿನಾಯಕನು ನಾದು ಸಾರ ಮುಂಬಯಿಗೆ ಏನೋ ಕೆಲಸದ ನಿಮಿತ್ತ ಹೋಗಿದ್ದನು. ಹೋದ ಕಾಲಕ್ಕೆ ದಿವ್ಯ