ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yಆ. ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, vvMMMwwwMMMಯ ಸುಂದರಿಯ ಮುಖದರ್ಶನವಾಗುತ್ತಿದ್ದುದರಿಂದ ವಿನಾಯಕನ ಮೂರ್ತಿಯು ದಿವ್ಯ ಸುಂದರಿಯ ಅಂತಃಕರಣವನ್ನೆಲ್ಲ ಪೂರ್ಣವಾಗಿ ವ್ಯಾಪಿಸಿತು. ವಿನಾಯಕನಂತೆ ದಿವ್ಯ ಸುಂದರಿಯೂ ಮತ್ತೊಂದು ಸಾರೆ ಮಧುರೆಯೊಡನೆ ರಾಮಪುರಕ್ಕೆ ಹೋಗಿ, ಅಲ್ಲಿ ಹತ್ತು ಹನ್ನೆರಡು ದಿವಸವಿದ್ದು ಮುಂಬಯಿಗೆ ತಿರುಗಿ ಬಂದಿದ್ದಳು. ಈ ರೀತಿಯಿಂದ ಉಭಯತರ ಪ್ರೇಮಭಾವವು ಬೆಳೆಯುತ್ತ ಹೋದದ್ದನ್ನು ನೋಡಿ, ವಸಂತನ ಸೇಡು ತೀರಿಸಿಕೊಳ್ಳುವ ಬುದ್ದಿಯು ಪ್ರಜ್ವಲಿತವಾದದ್ದು ಸಾಹಜಿಕವಾಗಿದೆ. ಅವನು ಈ ಸಂಬಂಧವಾಗಿ ಎಲ್ಲರಿಗೂ ಒಳ್ಳೆ ಶಾಸನಮಾಡಬೇಕೆಂದು ಕೃತನಿಶ್ಚಯಮಾಡಿದನು. ಯಾವ ದಿವಸ ದಿವ್ಯಸುಂದರಿಯು ವಸಂತನ ಅಪಮಾನಮಾಡಿ ವಿನಾಯಕನ ಸನ್ಮಾನ ಮಾಡಿದಳೋ, ಆ ದಿವಸದಿಂದಲೇ ವಸಂತನು ವಿನಾಯಕ ಮೊದಲಾದವರ ಮೇಲೆ ಹಲ್ಲು ಮಸೆಯಹತ್ತಿದನು. ಅವನಿಗೆ ಶಕ್ಯವಿದ್ದಷ್ಟು ಸಹಾಯಮಾಡಲಿಕ್ಕೆ ಶಾಮರಾಯ ಗೋಪಾಳರಾಯರಂಥ ಧೂರ್ತ ಸ್ನೇಹಿತರೇ ಕೂಡಿದ್ದರು. ಆದ್ದರಿಂದ ವಿನಾಯಕನ ಕಾರಖಾನೆಯಂತೆ ಅವನ ಉದ್ಯೋಗವಾದರೂ ಭರಭರಾಟಿಗೆ ಬಂದದ್ದರಲ್ಲಿ ಆಶ್ಚರ್ಯ ವೇನೂ ಇಲ್ಲ.. ಒಂದು ಸಾರೆ ವಿನಾಯಕನು ಏನೋ ಕೆಲಸದ ಸಲುವಾಗಿ ಮುಂಬಯಿಗೆ ಹೋದಾಗ ನಿತ್ಯದಂತೆ ಚಿಂತಾಮಣಿರಾಯನ ಬೆಟ್ಟಯ ಸಲುವಾಗಿ ಅವನ ಬಂಗಲೆಗೆ ಹೋದನು. ಎಷ್ಟೋ ಹೊತ್ತು ಚಿಂತಾಮಣಿರಾಯನೊಡನೆ ವಿನಾಯಕನು ಮಾತಾ ಡುತ್ತ ನಿಂತರೂ ರಾಮರಾಯ, ದಿವ್ಯಸುಂದರಿ, ಮಧುರೆ ಮೊದಲಾದವರು ಯಾರೂ ಹೊರಗೆ ಬಾರದ್ದರಿಂದ ಇಲ್ಲಿಯವರೆಗೆ ಶಾಂತವಿದ್ದ ಅವನ ಮನಸ್ಸು ಚಂಚಲವಾಯಿತು. ತಾನು ಇಲ್ಲಿ ಬಂದು ನಿಂತು ಎಷ್ಟೋ ಹೊತ್ತಾದರೂ ದಿವ್ಯಸುಂದರಿಯು ಇನ್ನೂ ಯಾಕೆ ನನಗೆ ಭೆಟ್ಟಿಯಾಗಿರಲಿಕ್ಕಿಲ್ಲವೆಂಬ ಬಗ್ಗೆ ಅವನ ಮನಸ್ಸಿನಲ್ಲಿ ವಿಚಾರವು ಹುಟ್ಟಿತು. ಅವನು ಒಮ್ಮೆ ದಿವ್ಯಸುಂದರಿಯು ಎಲ್ಲಿ ಹೋಗಿದ್ದಾಳೆಂದು ಚಿಂತಾಮಣಿರಾಯನಿಗೆ ಕೇಳಬೇಕೆಂದು ಹವಣಿಸುತ್ತಿದ್ದನು, ಕೂಡಲೆ ದಿವ್ಯಸುಂದರಿಯ ಸಂಬಂಧವಾಗಿ ಚಿಂತಾಮಣಿರಾಯನಲ್ಲಿ ಚರ್ಚೆ ಮಾಡಿದರೆ ಅವನ ಮನಸ್ಸಿನಲ್ಲಿ ಬೇರೊಂದು ಸಂಶಯವು ಬರುತ್ತದೆಯೋ ಏನೋ ಎಂದು ನೆನಿಸಿ ಅಷ್ಟಕ್ಕೆ ನಿರಾಶನಾಗುತ್ತಿದ್ದನು. ಈ ಪ್ರಕಾರ ಅವನ ಮನಸ್ಸಿನ ಸ್ಥಿತಿಯಾದ ಮೇಲೆ ಅವನಿಗೆ ಅಲ್ಲಿ ನಿಲ್ಲುವಂತಾಗಲಿಲ್ಲ. ಕೂಡಲೆ ಅವನು ಚಿಂತಾಮಣಿರಾಯನ ಅಪ್ಪಣೆಯನ್ನು ತಕ್ಕೊಂಡು ಬಂಗಲೆಯಿಂದ ಹೊರಬಿದ್ದು ಹಾದಿಯನ್ನು ಹಿಡಿದನು. ಚಿಂತಾಮಣಿರಾಯನ ಬಂಗಲೆಯಲ್ಲಿ ಹೋದ ಕೂಡಲೆ ನಿತ್ಯದಂತೆ ದಿವ್ಯಸುಂದರಿಯ ಭೆಟ್ಟಿಯಾಗುವದರಲ್ಲಿ ಸಂದೇಹವಿಲ್ಲವೆಂಬ ತನ್ನ ತಿಳುವಳಿ ಕೆಯು ಸುಳ್ಳಾಗುವತನಕ ಅವನ ಮನಸ್ಸಿನಲ್ಲಿ ವಿಶೇಷ ವಿಚಾರಗಳೇನೂ ಬಂದಿದ್ದಿಲ್ಲ; ಆದರೆ ದಿವ್ಯಸುಂದರಿಯ ಭೆಟ್ಟಿಯಾಗದೆ ಅವನು ಯಾವಾಗ ಬಂಗಲೆಯಿಂದ ಹೊರ ಬಿದ್ದನೋ ಆಗಲೇ ಅವಳ ವಿಷಯವಾಗಿ ಅವನ ಮನಸ್ಸಿನಲ್ಲಿ ಸ್ವಾಭಾವಿಕವಾಗಿ