ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ನೆಯ ಪ್ರಕರಣ- ದೀ ಕಾಮರ್ಸ ಬ್ಯಾ೦ಕ ಆಫ ಇಂಡಿಯಾ ! ಆಕ್ ಆt TvvvvvvvvvvMMMMMMMM ಅನೇಕ ವಿಚಾರಗಳು ಹುಟ್ಟಿದವು. ಆ ವಿಷಯವಾಗಿ ವಿಚಾರಮಾಡುತ್ತಿರುವಾಗ ಅವನು ತನ್ನ ಮನಸ್ಸಿಗೆ ಹೇಳಿದ್ದೇನಂದರೆ:- ಎಲೈ ಮನಸ್ಸೇ, ದಿವ್ಯಸುಂದರಿಯ ದರ್ಶನದ ಸಲುವಾಗಿ ನಿನಗಿಷ್ಟು ಉತ್ಸುಕತೆಯು ಯಾಕೆ? ಅವಳು ನಿನಗೆ ದರ್ಶನಗೊಡಲಿಕ್ಕೇ ಬೇಕೆಂಬುವದಕ್ಕೆ ಅವಳ ಮೇಲೆ ನಿನ್ನ ಹಕ್ಕಾದರೂ ಎಲ್ಲಿಯದು? ಅವಳ ದರ್ಶನ ವಾಗಲಿಲ್ಲೆಂದು ನಿನಗಿಷ್ಟು ಹಳಹಳಿಯು ಯಾಕೆ ? ಮನಸ್ಸೇ, ನೀನು ಸಂಪೂರ್ಣ ನಿಗ್ರಹಿಯಾಗಲಿಕ್ಕೆ ಬೇಕು. ನೀನು, ವಿನಾಯಕನಂಥ ಸತ್ಯಾಗ್ರಹೀಮನುಷ್ಯನ ಹೃದಯದಲ್ಲಿ ವಾಸಮಾಡಿರುತ್ತೀಯೆಂಬುವದನ್ನು ಲಕ್ಷದಲ್ಲಿಡು. ದಿವ್ಯಸುಂದರಿಯು ಸುಂದರಿಯಿದ್ದಾಳೆ ! ಇರಲಿ, ಅವಳನ್ನು ನೋಡುವ ಅಧಿಕಾರವು ನಿನಗಿಲ್ಲ. ದಿವ್ಯ ಸುಂದರಿಯು ಸದ್ದು ೯ಣಿಯಿದ್ದಾಳೆ ! ಇರಲಿ, ಅವಳ ಗುಣಾನುಕರಣಮಾಡಲಿಕ್ಕೆ ನಿನಗೆ ನಿಸರ್ಗಸಿದ್ದವಾದ ಹಕ್ಕು ಅದೆ; ಆದರೆ ಅಷ್ಟಕ್ಕೆ ಅವಳ ಮೇಲೆ ಲುಬ್ಬಳಾಗುವ ಹಕ್ಕು ನಿನಗಿಲ್ಲ. ಆದ್ದರಿಂದ ನೀನು ಯಾವನೊಬ್ಬ ಕಾಮುಕನಂತೆ ದಿವ್ಯಸುಂದರಿಯ ವಿಷ ಯವಾಗಿ ವಿಚಾರಮಾಡಬೇಡ. ” ಎಂದನು. ಈ ಪ್ರಕಾರ ಅವನು ತನ್ನ ಮನಸ್ಸಿಗೆ ಖಂಡಿತವಾಗಿ ಹೇಳಿದನೇನೋ ನಿಜ; ಆದರೆ ಹೋಗುಹೋಗುತ್ತ ಅವನ ಮನಸ್ಸು ಒಮ್ಮೆಲೆ ಹಕ್ಕಿಯಂತೆ ಹಾರಿ ವಿದ್ಯು ದ್ವೇಗದಿಂದ ಚಿಂತಾಮಣಿರಾಯನ ಬಂಗಲೆಯನ್ನು ಹೊಕ್ಕಿತು, ಮತ್ತು ಅದು ದಿವ್ಯ ಸುಂದರಿಯ ಸಂಗಡ ಮಾತಾಡುತ್ತಿದ್ದ ಗತವಚನದ ದರ್ಶನಪಟವನ್ನು ಅಲ್ಲಿಂದ ಕದ್ದು ತಂದು ಅವನಿಗೆ ತೋರಿಸಿತು. ಆಪೂರ್ವದ ರಮ್ಯಚಿತ್ರವನ್ನು ನೋಡಿನೋಡಿದಂತ ಮನಸ್ಸಿನ ನಿಶ್ಚಯದ ಒಡ್ಡು ಒಡೆದು ಚೂರಾಗಹತ್ತಿತು. ಯಾವಳು ನಿನ್ನ ಮೇಲೆ ಪ್ರೇಮಮಾಡುತ್ತಾಳೋ ಅವಳ ಮೇಲೆ ನೀನು ಪ್ರೇಮವನ್ನು ಯಾಕೆ ಮಾಡಬಾರದು ? ಎಂಬದಾಗಿ ಮನಸ್ಸು ಪ್ರಶ್ನೆ ಮಾಡಲು ಅವನು ಪುನಃ ದಿವ್ಯಸುಂದರಿಯ ವಿಚಾರದಲ್ಲಿ ಮಗ್ನನಾದನು. ಆ ಸ್ಥಿತಿಯಲ್ಲಿ ಅವನು ಮಾರ್ಗಕ್ರಮಣ ಮಾಡುತ್ತಿರುವಾಗ ತಾನು ಎಲ್ಲಿಗೆ ಹೋಗಬೇಕು, ಎಷ್ಟು ವೇಳೆಯಾಗಿದೆ, ಎಂಬದನ್ನು ಕೂಡ ಮರೆತನು. ಒಬ್ಬ ಅಮಲೇರಿದ ಮನುಷ್ಯನಂತೆ ಶೂನ್ಯ ದೃಷ್ಟಿಯಿಂದ ಕೆಳಗೆ ನೋಡುತ್ತ ಹೋಗು ಹತ್ತಿದನು. ಕೆಲಹೊತ್ತಿನ ಮೇಲೆ ಅವನ ಮನಸ್ಸಿನ ಈ ಸ್ಥಿತಿಯು ಬದಲಾಯಿಸಲು ಆಗ ಅವನಿಗೆ ಸ್ವಲ್ಪ ನಾಚಿಕೆಯೆನಿಸಿತು. ಆ ವೇಳೆಯಲ್ಲಿ ಮನಸ್ಸು ಚಂಚಲವಾಗ ಬಾರದೆಂದು ಅವನು ಅದರ ಮೇಲೆ ನಿಗ್ರಹದ ಬಹುಭಾರವನ್ನು ಹಾಕಲು ಅದು ಕೂಡಲೆ ಪೂರ್ವಸ್ಥಿತಿಗೆ ಬಂದು ದಿವ್ಯಸುಂದರಿಯನ್ನು ಮರೆತುಬಿಟ್ಟಿತು. ಆಗ ಅವನು ತನ್ನ ಕಾರ್ಯದ ವಿಚಾರಮಾಡಿ, ಹೊತ್ತು ಬಹಳವಾದದ್ದರಿಂದ ಲಗುಲಗು ಹೆಜೆ ಹಾಕುತ್ತ ಮಹಾಲಕ್ಷ್ಮಿಯ ಸ್ಟೇಶನಕ್ಕೆ ಬಂದು ಕುಲಾಬದ ಕಡೆಗೆ ಹೋಗುವ ಗಾಡಿ ಯನ್ನು ಹತ್ತಿದನು. ಗಾಡಿಯು ಹೋಗಹತ್ತಿದ ಕೂಡಲೆ ಅವನ ಬಾಯಿಯ ಮುಂದೆ ಒಂದು ತೆಕ್ಕೆಗಡುತರ ಹೊಗೆಯು ಹಾಯಿತು, ಮತ್ತು ಅವನ ಕೈಯನ್ನು ಯಾವನೋ 12