ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿ ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. MAAAAAAAAAAAANAMMys೧ AAAAAAAAAAAAMMommM ಹಿಡಿದು ' ಗುಡ್‌ಮಾರ್ನಿಂಗ ಮಿಸ್ತರ ವಿನಾಯಕರಾಯ ' ಎಂಬದಾಗಿ ಉಚ್ಚರಿಸಿದನು. ಬಾಯಿಯ ಮುಂದಿನ ಹೊಗೆಯನ್ನು ವಿನಾಯಕನು ಕೈಯಿಂದ ಹೊಡೆದು ನೋಡು ತಾನೆ ಎದುರಿಗೆ ವಸಂತರಾಯ! ಸ್ವಾರಿಯು ಪೂರ್ಣ ಯುರೋಪಿಯನ್ ಪೋಷಾಕು ಹಾಕಿಕೊಂಡು ಭತ್ತದ ಗೊಳಲು ಹಾಕಿದ ಕಮ್ಮಾರನ ಕುಲುಮೆಯಂತೆ ಹೊಗೆ ಯನ್ನು ಬಿಡುತ್ತ ವಿರಾಜಮಾನವಾಗಿ ಕುಳಿತದೆ. ವಿನಾಯಕನು ವಸಂತನಿಗೆ ತಿರುಗಿ ನಮಸ್ಕಾರಮಾಡಿದನು. ಆಗ ವಸಂತನು:- ವಸಂತ: ಇಂದು ತಮ್ಮ ಭೆಟ್ಟಿಯಾದದ್ದೆಂದರೆ ಆನಂದಕಾರಕ ಸಂಗತಿಯೇ ಸರಿ, ತಾವು ಚಿಂತಾಮಣಿರಾಯರ ಭೆಟ್ಟಿಗೆ ಹೋದಂತೆ ಕಾಣಿಸುತ್ತದೆ. ಆಯಿತೇನು ಅವರ ಬೆಟ್ಟ ? ” ವಿನಾ:- ( ಸ್ವಲ್ಪ ನಕ್ಕು ) ಹೋ, ಆಯಿತು, ಇಷ್ಟು ಗಂಟೆಗೆ ಭೆಟ್ಟಿಗೆ ಬರಿ ಯೆಂದು ಅವರು ಮೊದಲೇ ನನಗೆ ತಿಳಿಸಿದ್ದರಿಂದ ಅವರ ಭೆಟ್ಟಿಯಾಗಲಿಕ್ಕೆ ಎಷ್ಟೂ ತೊಂದರೆಯಾಗಲಿಲ್ಲ. " ವಸಂತ:- ( ವ್ಯಂಗಸ್ವರದಿಂದ ) ಆದರೆ ನಿಮ್ಮ ಮೋರೆಯು ಸಪ್ಪಗಾಗಿರುವ ದರಿಂದ ಎಲ್ಲರ ಭೆಟ್ಟಿಯಾದಂತೆ ಕಾಣಿಸುವದಿಲ್ಲ ? ೨೨ ವಿನಾ:- ( ವಸಂತನ ಮಾತಿನ ಅಭಿಪ್ರಾಯವು ತಿಳಿದರೂ ನಗುತ್ತ) ನನಗೆ ಕೇವಲ ಚಿಂತಾಮಣಿರಾಯರ ಭಟ್ಟಿಯು ಬೇಕಾಗಿದ್ದಿತು. ಆ ಪ್ರಕಾರ ಅವರ ಬೆಟ್ಟ ಯಾಯಿತಲ್ಲದೆ ಕೆಲಸವೂ ಆಯಿತು. ? ವಸಂತ:- ನಿಮ್ಮ ಕಲ್ಪನೆಯಂತೆ ನಿಮ್ಮ ಕೆಲಸವಾದರೂ ಅದು ಪೂರ್ಣ ವಾಗಿರಲಿಕ್ಕಿಲ್ಲ. ದಿವ್ಯಸುಂದರಿಬಾಯಿಸಾಹೇಬರ ಭೆಟ್ಟಿಯಾಗಿರಲಿಕ್ಕಿಲ್ಲ. ಅವರು ಏನೋ ಕೆಲಸದ ಸಲುವಾಗಿ ಹೈದರಾಬಾದಕ್ಕೆ ಹೋಗಿದ್ದಾರೆಂದು ಕೇಳಿದ್ದೇನೆ. " ವಿನಾ:- ಅವರು ಹೈದರಾಬಾದಕ್ಕೇ ಹೋಗಲಿ, ಮತ್ತೆಲ್ಲಿಗಾದರೂ ಹೋಗ ಲಿ, ಅವರ ಸಂಬಂಧ ವಿಚಾರಮಾಡಲಿಕ್ಕೆ ನಿಮಗೂ, ನನಗೂ ಕೂಡೇ ಕಾರಣವಿಲ್ಲ. " ವಸಂತ:- ( ಗಟ್ಟಿಯಾಗಿ ನಕ್ಕು) ವಿನಾಯಕರಾಯ, ದಿವ್ಯಸುಂದರಿಯ ಸಂಬಂಧವಾದ ಸಂಗತಿಯನ್ನು ತಿಳಿಯಲಿಕ್ಕೆ ನಿಮಗೆ ಎಷ್ಟೂ ಉತ್ಸುಕತೆಯಿಲ್ಲವೇ ? " ವಿನಾ:- ಇದು ನಿಮಗೆ ಯಾತರಿಂದ ತಿಳಿಯುತ್ತದೆ ? ” ವಸಂತ:- (ನಗುತ್ತ) ನೀವು ಚಿಂತಾಮಣಿರಾಯನ ಬಂಗಲೆಯನ್ನು ಪ್ರವೇಶ ಮಾಡಿದಂದಿನಿಂದ ದಿವ್ಯಸುಂದರಿಯ ವಿಷಯವಾಗಿ ತೋರಿಸುತ್ತಿರುವ ನಿಮ್ಮ ಆಚರಣೆ ಯೇ ವಿಲಕ್ಷಣವಾಗಿರುತ್ತದೆಂದು ಒಮ್ಮೆ ನನಗೆ ಚಿಂತಾಮಣಿರಾಯ-ರಾಮರಾಯರು ಹೇಳಿದ್ದರಿಂದ, "