ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ನೆಯ ಪ್ರಕರಣದೀ ಕಾಮರ್ಸ ಬ್ಯಾಂಕ್ ಆಫ್ ಇಂಡಿಯಾ! th ಇmmmmmmonwoodwworrrrrow•••. ವಸಂತನ ಈ ಮಾತುಗಳೆಲ್ಲ ಬೊಡ್ಡಿಯಿಂದ ತುದಿಯ ತನಕ ಸುಳ್ಳಿದ್ದವು. ವಸಂತನ ಈ ಮಾತುಗಳನ್ನು ಕೇಳಿ ವಿನಾಯಕನಿಗೆ ಮೊದಲು ಭೀತಿಯೆನಿಸಿತು. ಅಷ್ಟ ರಲ್ಲಿ `ಅವನ ಸಾತ್ವಿಕ ಮನೋವೃತ್ತಿಯು ತಪ್ತವಾಗಲು ಅವನು ಸ್ವಲ್ಪ ಸಿಟ್ಟಿನಿಂದ ಮಾತಾಡಹತ್ತಿದನು. ಏನಾ:-( ಆ ಇಬ್ಬರು ತಂದೆಮಕ್ಕಳು ಇಂಥ ಕ್ಷುದ್ರಬುದ್ಧಿಯವರಿರುವದಿಲ್ಲ. ಒಂದು ವೇಳೆ ಅವರು ಹಾಗೆ ಅಂದಾಗ್ತಾದರೂ ಆ ಬಗ್ಗೆ ನನಗೆ ಸ್ವಲ್ಪಾದರೂ ಹೆದರಿಕೆ ಯಿಲ್ಲ; ಯಾಕಂದರೆ ದಿವ್ಯಸುಂದರಿಯ ಸಂಬಂಧವಾಗಿ ವಿಚಾರಮಾಡಲಿಕ್ಕೆ ನನಗೆ ಏನೂ ಅಧಿಕಾರವಿಲ್ಲವೆಂಬುವದನ್ನು ನಾನು ಮೊದಲಿನಿಂದಲೇ ತಿಳಿದಿರುತ್ತೇನೆ, ನೀವಾ ದರೂ ಹೀಗೆ ಮನಬಂದಂತೆ ಕುಲೀನ ಸ್ತ್ರೀಯರ ಸಲುವಾಗಿ ಚರ್ಚೆ ಮಾಡಬಾರ ದಾಗಿ ನನ್ನ ವಿನಂತಿಯದೆ. " ವಸಂತ:- ( ಸ್ವಲ್ಪ ಮೆತ್ತಗಾಗಿ) ಆ ಬಂಗಲೆಯೊಳಗಿನ ಚರ್ಚೆಯ ಸಲು ವಾಗಿ ನೀವು ಹೆದರುವ ಕಾರಣವಿಲ್ಲ. ಯಾಕಂದರೆ, ದಕ್ಷಿಣಮಹಾರಾಷ್ಟ್ರದೊಳಗಿನ ಒಬ್ಬ ಸಂಸ್ಥಾನಿಕನ ಸಂಗಡ ದಿವ್ಯಸುಂದರಿಯ ಲಗ್ನವಾಗುವದು ನಿಶ್ಚಯವಾಗಿರುತ್ತ ದೆಂದು ಕೇಳಿರುತ್ತೇನೆ, ಈಗ ಸಂಸ್ಥಾನಿಕನು ವಿಲಾಯತಿಗೆ ಹೋಗಿರುವದರಿಂದ ಲಗ್ನ ಕಾರ್ಯವು ನಿಂತಿರುತ್ತದೆ. ?? ವಿನಾ:- “ ( ಮುಖಮುದ್ರೆಯಲ್ಲಿ ಸ್ವಲ್ಪಾದರೂ ಹೆಚ್ಚು ಕಡಿಮೆ ಮಾಡದೆ ) ಏನೇ ಇರಲಿ, ಆ ಲಗ್ನದ ವಿಷಯವಾದರೂ ನಮಗೇತಕ್ಕೆ?” ವಸಂತ:-( ನೀವು ಕೋರ್ಟಿಗೆ ಹೋಗುವದಾಗಿ ಕಾಣಿಸುತ್ತದೆ ? ೨ ವಿನಾ:-« ದಿ ಕಾಮರ್ಸ ಬ್ಯಾಂಕ ಆಫ್ ಇಂಡಿಯಾ ಬ್ಯಾಂಕಿಗೆ ನಾನು ಹೋಗುತ್ತೇನೆ, ವರ್ತಕರು ಕೊಟ್ಟ ಇಪ್ಪತ್ತಾರುಸಾವಿರ ರೂಪಾಯಿಗಳನ್ನು ಈ ಬ್ಯಾಂಕಿನಲ್ಲಿ ಇಡಬೇಕಾಗಿದೆ. ಈ ಬ್ಯಾಂಕು ಮೊನ್ನೆ ಮೊನ್ನೆ ಸ್ಥಾಪನವಾಗಿರುತ್ತ ದಂತೆ. ಇದರ ಸ್ಥಿತಿಗತಿಯು ನನಗೆ ಗೊತ್ತಿಲ್ಲ. ನಿಮಗೇನಾದರೂ ಗೊತ್ತಿದ್ದರೆ ತಿಳಿಸಬೇಕು, ೨೨ ವಸಂತ:- ( ಗಾಂಭೀರ್ಯದಿಂದ ) ಹೋ, ಈ ಬ್ಯಾಂಕು ಒಳ್ಳೇ ರೀತಿ ಯಿಂದ ನಡೆದಿದ್ದು, ಮುಂಬಯಿ ವರ್ತಕರ ವರ್ಗದಿಂದ ಅದಕ್ಕೆ ಹೆಚ್ಚು ಮಾನ್ಯವು ಪ್ರಾಪ್ತವಾಗಿರುವದು, ಇಲ್ಲಿಯವರೆಗೆ ಚಿಂತಾಮಣಿರಾಯರ ದುಡ್ಡು ಬೇರೆ ಬೇರೆ ಬ್ಯಾಂಕಿನಲ್ಲಿದ್ದಿತು; ಆದರೆ, ಈ ಬ್ಯಾಂಕಿನ ಉಚ್ಛಸ್ಥಿತಿಯನ್ನು ನೋಡಿ ಅವರು ತಮ್ಮ ದುಡ್ಡನ್ನೆಲ್ಲ ಇದೇ ಬ್ಯಾಂಕಿನಲ್ಲಿ ಇಟ್ಟಿರುವರು. ಈ ಬ್ಯಾಂಕಿನ ಪ್ರತಿಯೊಂದು ಭಾಗವು ಒಂದು ಸಾವಿರ ರೂಪಾಯಿಯದು ಇರುತ್ತದೆ. ಈಗ ಮಾತ್ರ ಪೇಟೆಯ ಭಾವವು ಹದಿನೈದು ನೂರು ರೂಪಾಯಿಯಾಗಿದೆ. "