ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯಸು೦ದರಿ ಅಥವಾ ದೀರ್ಘ ಪ್ರಯತ್ನ. mManannAnAnon೧೧೧nv\nr\nnonNA/ nAnnnnnewಮ ವಿನಾ:-( ( ಆಶ್ಚರ್ಯಚಕಿತನಾಗಿ ಈ ಬ್ಯಾಂಕಿನ ಚಾಲಕರು ಯಾರಿದ್ದಾರೆ? ವಸಂತ:- ( ದೊಡ್ಡ ಸ್ವರದಿಂದ ) ಚಾಲಕರಿಬ್ಬರಿದ್ದು ಅವರು ಪಂಜಾಬ ದೊಳಗಿನ ಜಮೀನದಾರರಿರುತ್ತಾರೆ. ಒಬ್ಬನ ಹೆಸರು ಲಾಲಾ ಜಸವಂತಸಿಂಹಜೆ. ಇನ್ನೊಬ್ಬನ ಹೆಸರು ಲಾಲಾ ಬದ್ರಿನಾಥ. ಇಬ್ಬರೂ ಕೋಟ್ಯಧೀಶರಾಗಿದ್ದು, ವ್ಯಾಪಾ ರದ ಧೋರಣದಲ್ಲಿ ವಿಲಕ್ಷಣ ಜ್ಞಾನಸಂಪಾದನ ಮಾಡಿರುತ್ತಾರೆ. ಈಗ ಮುಂಬಯಿಯ ಪೇಟೆಯ ಸೂತ್ರವು ಇವರಿಬ್ಬರ ಕೈಯೊಳಗೇ ಇರುತ್ತದೆಂದರೆ ಅತಿಶಯೋಕ್ತಿಯಾಗ ಲಿಕ್ಕಿಲ್ಲ. ಮೊದಲು ಈ ಬ್ಯಾಂಕಿನ ಡಿರೆಕ್ಟರರು ಪಂಜಾಬಿಯವರೇ ಇದ್ದರು; ಆದರೆ ಮುಂಬಯಿಯ ವರ್ತಕರು ವಿಶ್ವ ಪ್ರಯತ್ನ ಮಾಡಿ ಎಲ್ಲ ಡಿರೆಕ್ಟರರನ್ನು ಮುಂಬಯಿಯವ ರನ್ನೇ ಮಾಡಿರುತ್ತಾರೆ. ಅದರಲ್ಲಿ ಅಭಿಮಾನದ ಸಂಗತಿಯೇನಂದರೆ-ರಾಜಾಬಹಾ ದೂರ ಚಿಂತಾಮಣಿರಾಯರು ಈ ಬ್ಯಾಂಕಿನ ಡಿರೆಕ್ಟರರಾಗಿರುತ್ತಾರೆ. ? ಈ ಪ್ರಕಾರ ಈರ್ವರ ಸಂಭಾಷಣವು ನಡೆಯುತ್ತ ಹೋಗುವಷ್ಟರಲ್ಲಿ ಚರ್ಚೆ ಗೇಟದ ಸ್ಟೇಶನ್ನು ಬಂದಿತು. ಆ ಕೂಡಲೆ ಇಬ್ಬರೂ ಗಾಡಿಯಿಂದ ಇಳಿದು ಬ್ಯಾಂಕಿನ ಕಡೆಗೆ ಹೋದರು. ವಸಂತನು ವಿನಾಯಕನಿಗೆ ಮೇಲೆ ಹೇಳಿದ ಪ್ರಕಾರ ಬ್ಯಾಂಕಿನ ಸಂಬಂಧವಾಗಿ ತೋರಿಸಿದ ರಮ್ಯಚಿತ್ರವು ನಿಜವಿದ್ದಷ್ಟು ತೊಟ್ಟಿಯಿದ್ದಿತು. ಈ ಬ್ಯಾಂಕು ಪ್ರಾರಂಭವಾದದ್ದೂ ನಿಜ; ಮತ್ತು ಸ್ವಲ್ಪ ದಿವಸದಲ್ಲಿ ಅದು ಇಡೀ ಮುಂಬಯಿ ಇಲಾಖೆಯಲ್ಲಿ ಪ್ರಸಾರವಾದದ್ದೂ ನಿಜ, ಆದರೆ ಆ ಸಂಸ್ಥೆಯನ್ನು ಇಬ್ಬರು ಪಂಜಾಬದವರು ತೆಗೆದಿರುತ್ತಾರೆಂಬ ಸಂಗತಿಯು ತೀರ ಅಸತ್ಯವಾದದ್ದಿದ್ದು, ಅದರ ಬೆಳವಣಿಗೆಯ ಸ್ಥಿತಿಯು ಕೂಡ ಮೋಸತರಹದ್ದಿದ್ದಿತು. ಆ ಬ್ಯಾಂಕಿನ ಚಾಲಕರು, ಒಳ್ಳೇ ನಾ, ನಾ ಎಂಬುವ ಚತುರ ವರ್ತಕರಿಗೆ ಒತ್ತಟ್ಟಿಗಿರಲಿ, ಅತ್ಯಂತ ತೈಲಬುದ್ದಿ ಯವರೆಂದೆನಿಸಿಕೊಳ್ಳುವ ಗುಪ್ತ ಪೋಲೀಸರ ಕಣ್ಣೂಳಗೆ ಮಣ್ಣು ಹಾಕಿ ತಮ್ಮ ಅಕಟೋವಿಕಟಕಾರ್ಯವನ್ನು ಪ್ರಚಂಡವಾಗಿ ನಡಿಸಿದ್ದರು. ವಸಂತನು ಯಾವ ಇಬ್ಬರು ಪಂಜಾಬೀ ಗೃಹಸ್ಥರನ್ನು ಮಿತಿಮೀರಿ ವರ್ಣನಮಾಡಿದನೋ ಆ ಇಬ್ಬರು ಗೃಹಸ್ಥರು ನಿಜವಾಗಿ ಯಾರಿದ್ದಾರೆಂಬುವದು ನಮ್ಮ ವಾಚಕರಿಗೆ ತಿಳಿದದ್ದಾದರೆ, ಇಂಥ ನೀಚಮನುಷ್ಯರು ಕೂಡ ಮುಂಬಯಿಯಂಥ ಪಟ್ಟಣದಲ್ಲಿ ನಿರ್ಭೀತಿಯಿಂದ ತಮ್ಮ ವ್ಯವಸಾಯ ಮಾಡುತ್ತಾರೆಂಬುವದನ್ನು ನೋಡಿ ಆಶ್ಚರ್ಯವಾಗದಿರದು. ಬ್ಯಾಂಕಿನ ಇಬ್ಬರು ಚಾಲಕರು ಎರಡನೆಯವರು ಯಾರೂ ಅಲ್ಲವಾಗಿದ್ದು, ನಮ್ಮ ವಾಚಕರಿಗೆ ಈ ಪೂರ್ವದಲ್ಲಿಯೇ ಪರಿಚಯವುಳ್ಳ ಶಾಮರಾಯ-ಗೋಪಾಳರಾಯ ರಾಗಿದ್ದರು. ಆ ಇಬ್ಬರು ತಮ್ಮ ಗಡ್ಡಗಳನ್ನು ಉದ್ದವಾಗಿ ಬೆಳಿಸಿ, ತಲೆಯ ಮೇಲೆ ದೊಡ್ಡ ದೊಡ್ಡ ಪಂಜಾಬದ ಪಟಕಗಳನ್ನು ಸುತ್ತುತ್ತಿದ್ದರು. ಅವರು ತಮ್ಮ ಬ್ಯಾಂಕ ನ್ನು ಸರಕಾರದಲ್ಲಿ ನೊಂದುಮಾಡಿ .ದಿವಸದಿವಸಕ್ಕೆ ಮುಂಬಯಿಯನ್ನು ಲೂಟು