ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MAAAAMMAM ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. wwwMMwwws ಸ್ಥಳವನ್ನು ಬಿಟ್ಟು ಮೇಲಕ್ಕೆದ್ದು, ಮೆಲ್ಲಗೆ ಚಿಂತಾಮಣಿರಾಯನ ಹತ್ತಿರ ಹೋದನು. ನಡುರಾತ್ರಿಯಲ್ಲಿ ಚಿಂತಾಕ್ರಾಂತನಾಗಿ ಬಂದ ಮಾಧವರಾಯನನ್ನು ನೋಡಿದ ಕೂಡಲೆ ಚಿಂತಾಮಣಿರಾಯನ ಎದೆಯು ಧಸಕ್ಕೆಂದಿತು. ಅವನು ಗಾಬರಿಷ್ಕರದಿಂದ:- << ಮಾಧವರಾಯ, ನೀವು ಏನೋ ನನಗೆ ಒಂದು ಚಿ೦ತಾದಾಯಕಸಂಗತಿಯನ್ನು ಹೇಳಲಿಕ್ಕೆ ಬಂದಂತೆ ಕಾಣಿಸುತ್ತದೆ. ಎಂದನ್ನಲು ಮಾಧವರಾಯನು ಸ್ವಲ್ಪ ಹೊತ್ತು ಸುಮ್ಮನೆ ನಿಂತು:- ಒಂದು ಅಶುಭವಾರ್ತೆಯು ನನ್ನ ಕಿವಿಗೆ ತಾಕಿದೆ, ಅದನ್ನು ಹೇಳುವದಕ್ಕಾಗಿ ನಾನು ಬಂದಿದ್ದೇನೆ.” ಎಂದನ್ನುತ್ತ ತಿರುಗಿ ಸುಮ್ಮನೆ ನಿಂತನು, ಮತ್ತೆ ಕೆಲಹೊತ್ತಿನ ಮೇಲೆ ಅವನು ಯಾವದೋ ಸಂಗತಿಯನ್ನು ಚಿಂತಾಮಣಿರಾಯನ ಕಿವಿಯಲ್ಲಿ ಹೇಳಿದನು. ಆ ಸಂಗತಿಯು ಚಿಂತಾಮಣಿರಾಯನ ಕಿವಿಯಲ್ಲಿ ಬಿದ್ದ ಕೂಡಲೆ | ಅವನು ನಿಮಿಷ ಮಾತ್ರ ಕಲ್ಲಿನ ಗೊಂಬೆಯಂತೆ ನಿಂತು ನಂತರ ಗಟ್ಟಿಯಾಗಿ “ ಹಾಯ ಹಾಯ ?” ಎನ್ನುತ್ತ ನೆಲದ ಮೇಲೆ ಹೊತ್ತುಕೊಂಡು ಬಿದ್ದು, ಚಿಂತಾಮಣಿರಾಯ ನೊಡನೆ ಏನಾದರೂ ಮಾಧವರಾಯನ ಗುಪ್ತಾಲೋಚನೆಯು ಇರಬಹುದೆಂದು ತಿಳಿದು ದಿವ್ಯಸುಂದರಿ-ವಿನಾಯಕರು ದೂರದಲ್ಲಿದ್ದರು; ಆದರೆ ಚಿಂತಾಮಣರಾಯನ (ಹಾಯ ಹಾಯ' ಶಬ್ದವನ್ನು ಕೇಳುತ್ತಲೇ ಇಬ್ಬರೂ ವಿದ್ಯುದ್ವೇಗದಿಂದ ಓಡಿಬಂದು, ಚಿಂತಾ ಮಣಿರಾಯನ ಮಸ್ತಕದ ಹತ್ತಿರ ಕುಳಿತು ಅವನಿಗೆ ಗಾಳಿಯನ್ನು ಹಾಕಹತ್ತಿದರು. ಒಮ್ಮೆಲೇ ಆದ ತಂದೆಯ ಚಮತ್ಕಾರಿಕ ಸ್ಥಿತಿಯನ್ನು ನೋಡಿ, ದಿವ್ಯಸುಂದರಿಯ ಕಣೋಳಗಿಂದ ಅಶ್ರುಧಾರೆಗಳು ಹರಿಯಹತ್ತಿದವು. ಅವಳು ತಂದೆಯ ಹೃದಯದ ಮೇಲೆ ಮಸ್ತಕವನ್ನಿಟ್ಟು ಗಟ್ಟಿಯಾಗಿ ಅಳಹತ್ತಿದಳು. ಅದನ್ನು ಕೇಳಿ ರಾಮರಾಯ, ಮಧುರೆ ಇವರೂ ತ್ವರೆಯಿಂದ ಓಡಿಬಂದರು, ಮೂರ್ಛಾಗತನಾಗಿ ಬಿದ್ದ ಚಿಂತಾಮಣಿ ರಾಯನನ್ನು ನೋಡಿ ಸರ್ವರೂ ಗಾಬರಿಯಾದರು. ಕೆಲವರು ಡಾಕ್ಟರರನ್ನು ಕರೆಯ ಲಿಕ್ಕೆ ಹೋದರು. ಅವರ ನಿತ್ಯದ ಡಾಕ್ಟರನು ಕೂಡಲೆ ಬಂದನು. ಅವನು ಯೋಗ್ಯೂ ಪಚಾರಮಾಡಿ ಚಿಂತಾಮಣಿರಾಯನ ಮೂರ್ಲೆಯನ್ನು ದೂರಮಾಡಿದನು. ಮೂರ್ಛ ಯು ತಿಳಿದ ಕೂಡಲೆ ಚಿಂತಾಮಣಿರಾಯನು ತನ್ನ ದೃಷ್ಟಿಯನ್ನು ರಾಮರಾಯನ ಕಡೆಗೆ ತಿರುಗಿಸಿ, ಅವನಕಡೆಗೆ ಚಮತ್ಕಾರಿಕ ದೃಷ್ಟಿಯಿಂದ ನೋಡಹತ್ತಿದನು. ತಂದೆಯ ಈ ವಿಲಕ್ಷಣವಾದ ನೋಟವು ರಾಮರಾಯನಿಗೆ ತಿಳಿಯಲಿಲ್ಲ. ಅವನು:- (( ಅಪ್ಪಾ, ಈಗ ನಿಮಗೆ ಹೇಗಿರುವದು? ” ಎಂದನು. ಚಿಂತಾಮಣಿರಾಯನು ಏನೂ ಮಾತಾಡಲಿಲ್ಲ. ಅವನು ಪೂರ್ವವತ್ ಚಮತ್ಕಾರಿಕ ದೃಷ್ಟಿಯಿಂದ ಒಮ್ಮೆ ರಾಮ ರಾಯನ ಕಡೆಗೆ, ಒಮ್ಮೆ ದಿವ್ಯಸುಂದರಿಯ ಕಡೆಗೆ ನೋಡುತ್ತಿದ್ದನು. ದಿವ್ಯಸುಂದರಿಯು ಕಣ್ಣೀರು ಒರಿಸಿಕೊಳ್ಳುತ್ತೆ:- ಅಪ್ಪಾ, ನಾವೆಲ್ಲರೂ ಗಾಬರಿಯಾಗಿದ್ದೇವೆ, ನಿಮಗೆ ಈಗ ಗುಣವದೆಯೇ ಹೇಗೆ ? ?” ಎಂದಳು. ದಿವ್ಯಸುಂದರಿಯ ಮಾತಿನಿಂದ ಚಿಂತಾಮಣಿ ರಾಯನಿಗೆ ಸುಮ್ಮನೆ ಇರುವದಾಗಲಿಲ್ಲ. ಅವನು ಒಮ್ಮೆ ಕೈಯಿಂದ ಹಣೆಗೆ ಹೊಡ