ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fಆ ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. ಇ-v * * * \ \ * * * * * * * \'# \ \ \ \• : \ * * 11 \ Y 1 #1

  • \ \r\ \r\ \ \ \'\ \ \ANA (/

ತಂದೆಗೆ ಕ್ಷೇಮವಾಗಬೇಕೆಂದು ಅವಳು ಆತನಿಗೆ ಗಾಳಿಯನ್ನು ಹೊಡೆಯುತ್ತಿದ್ದಳು; ಅನೇಕ ಧೈರ್ಯವಚನಗಳನ್ನು ಹೇಳುತ್ತಿದ್ದಳು, ಒಮ್ಮೊಮ್ಮೆ ಅಸ್ಥಿರವಸ್ತುವಿನ ಬಗ್ಗೆ ಶೋಕಮಾಡಬಾರದೆಂದು ವೇದಾಂತವನ್ನೂ ಹೇಳುತ್ತಿದ್ದಳು. ಚಿಂತಾಮಣಿರಾಯನಿಗೆ ಆ ರಾತ್ರಿಯು ಭಯಪ್ರದಸ್ಥಿತಿಯಲ್ಲಿಯೇ ಕಳೆಯಿತು. ಅವನು ಕ್ಷಣದಲ್ಲಿ ಅಳಹತ್ತಿದನೆಂದರೆ, ಕ್ಷಣದಲ್ಲಿ ಮೂರ್ಛಿಯನ್ನು ಹೊಂದುತ್ತಿದ್ದನು. ಒಮ್ಮೆ ಹುಚ್ಚನಂತೆ ಹೊರಳಾಡಹತ್ತಿದರೆ, ಮತ್ತೊಮ್ಮೆ ಎಲ್ಲ ಜಗತ್ತಿನ ಮೇಲೆ ಕ್ರುದ್ದ ನಾಗುತ್ತಿದ್ದನು. ವಿನಾಯಕ-ಮಾಧವರಾಯರು ಬೆಳತನಕ ಚಿಂತಾಮಣಿರಾಯನ ಸಮೀಪದಲ್ಲಿಯೇ ಕುಳಿತಿದ್ದರು. ಬೆಳಗಿನ ಶೀತಲವಾಯುವಿನಿಂದ ಚಿಂತಾಮಣಿರಾಯ ನಿಗೆ ಸ್ವಲ್ಪ ನಿದ್ರೆ ಹತ್ತಿತು. ಅದರಿಂದ ಎಲ್ಲರೂ ಗುಣವಾಯಿತೆಂದು ತಿಳಿದುಕೊಂಡರು; ಆದರೆ ಬೆಳಗಾದ ಮೇಲೆ ನೋಡಲು ಚಿಂತಾಮಣಿರಾಯನ ಮುಖಮುದ್ರೆಯ ಮೇಲೆ ವಿಲಕ್ಷಣ ರೂಪಾಂತರವಾಗಿದ್ದಿತು. ಕಣ್ಣು ಒಳಗೆ ಹೋಗಿದ್ದವು; ಮುಖವು ಕಪ್ಪಾ ಗಿದ್ದಿತು; ಧ್ವನಿಯು ಕುಗ್ಗಿದ್ದಿತು. ಈ ಸ್ಥಿತಿಯನ್ನು ನೋಡಿ ವಿನಾಯಕ ಮಾಧವರಾಯ ರಿಗೆ ಸಾಂಪತ್ತಿಕ ಚಮತ್ಕಾರಿಕ ಶಕ್ತಿಯ ಸಲುವಾಗಿ ಆಶ್ಚರ್ಯವಾಯಿತು, ಚಿಂತಾಮಣಿ ರಾಯನಿಗೆ ಚಡಾ ತಕ್ಕೊಳ್ಳಲಿಕ್ಕೆ ಅಪೇಕ್ಷೆಯಿಲ್ಲದಿದ್ದರೂ, ಡಾಕ್ಟರರ ವಿಶೇಷಾಗ್ರಹ ದಿಂದ ಅವನು ಮೊದಲು ಸ್ವಲ್ಪ ಉಪಹಾರ ತಕ್ಕೊಂಡು ಚಹಾವನ್ನು ಕುಡಿದನು. ಆ ಮೇಲೆ ಅವನಿಗೆ ಸ್ವಲ್ಪ ಶಕ್ತಿಯು ಬಂದಂತಾಗಲು ಅವನು ಮಾಧವರಾಯನಿಗೆ ಹತ್ತರ ಕರೆದು:-( ನೀವು ಮೊದಲು ಮನುಷ್ಯನನ್ನು ಕಳಿಸಿ ವಸಂತರಾಯನನ್ನು ಕರಿಸಿರಿ. ಅವನಿಗೆ ಆ ಬ್ಯಾಂಕಿನ ಬಗ್ಗೆ ಎಲ್ಲ ಪರಿಚಯವದೆ. ” ಎಂದನ್ನಲು ಮಾಧವರಾಯನು ಸಿಟ್ಟಿನಿಂದ:- ರಾಜಾಸಾಹೇಬ, ಆ ವಸಂತನೇ ನಿಮ್ಮ ಎಲ್ಲ ಸಂಪತ್ತನ್ನು ಮುಳುಗಿ ಸಿದನು, ಆ ನೀಚ ಶಿಕ್ಷಿತ ತರುಣನಲ್ಲಿ ನೀವಷ್ಟು ವಿಶ್ವಾಸವಿಡಬಾರದೆಂದು ನಾನು ನಿಮಗೆ ಎಷ್ಟೋಸಾರೆ ಹೇಳಿದರೂ, ನೀವು ಕೇಳಲಿಲ್ಲ. “ ವಿದ್ಯಾಸಮನ್ವಿತನಾದ ದು ನನ್ನು ತ್ಯಜೀಕರಿಸಬೇಕು, ” ಎಂಬದಾಗಿ ವಚನವದೆ. ಇತ್ತ ಕಡೆಗೆ ನಮ್ಮ ಸಮಾ ಜದಲ್ಲಿ ಈ ವಚನದ ಕಡೆಗೆ ಲಕ್ಷವಿಲ್ಲದ್ದರಿಂದ ವಿದ್ಯಾಸಮನ್ವಿತ ದುಷ್ಟರಿಂದ ಎಲ್ಲ ಸಮಾಜವ ದುರ್ದಶಾವಸ್ಥೆಯನ್ನು ಹೊಂದಹತ್ತಿದೆ. ” ಎಂದಂದನು. ಆಗ ಚಿಂತಾ ಮಣಿರಾಯನು ಸ್ವಲ್ಪ ಹೊತ್ತು ಸುಮ್ಮನಿದ್ದು ಅನಂತರ “ ಈ ವಿಷಯವಾಗಿ ವಸಂತನ ಅಂಗವೇನಿರುವದು? ” ಎಂದು ಕೇಳಲು ಮಾಧವನು ಮತ್ತಷ್ಟು ಸಿಟ್ಟಿನಿಂದ ( ಅವನೇ ಈ ನಾಟಕದ ಸೂತ್ರಧಾರನು. ಶಾಮರಾಯ, ಗೋಪಾಳರಾಯ ಎಂಟೀರ್ವರು ಅವನ ಜೀವದ ಗೆಳೆಯರು, ಅವರಿಬ್ಬರೂ ಪಂಜಾಬೀವೇಷ ಧಾರಣಮಾಡಿಕೊಂಡು ಈ ಬ್ಯಾಂಕು ಸ್ಥಾಪಿಸಿದರು. ಕಡೆಗೆ ನಿಮ್ಮಂತೆ ಸಾವಿರಾರು ಜನರ ಧನವನ್ನು ಅಪಹಾರ ಮಾಡಿದರು. ” ಎಂದಂದು, ಬ್ಯಾಂಕಿನ ಉತ್ಪಾದಕರಲ್ಲಿ ಶಾಮರಾಯ, ಗೋಪಾಳ ರಾಯರು ಸಮಾವೇಶರಾಗಿರುತ್ತಾರೆಂಬದನ್ನು ಕೇಳಿ ನಿನಾಯಕನಿಗೆ ಪರಮಾಶ್ಚರ್ಯ