ವಿಷಯಕ್ಕೆ ಹೋಗು

ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ, ಇಇಆ೩೧. ಜಿ ೭ನೆಯ ಪ್ರಕರಣ, ಇ (A$) ವಿವಾಹ.. ಊಹOYAHiHARL ಕು:ASAHIL RHHDC HHBR 12187841 ನುಷ್ಯನ ಬುದ್ದಿಯು ದೈವಾಧೀನವಾಗಿರುವದರಿಂದ ಎಷ್ಟೋ ಜಾಣರೆಂದೆನ್ನಿಸಿಕೊಳ್ಳುವ ಜನರು ಕೂಡ ಒಮ್ಮೊಮ್ಮೆ ಅಜ್ಞಾನ ಸಾಗರದಲ್ಲಿ ಹೊತ್ತುಕೊಂಡು ಬೀಳಬೇಕಾಗುತ್ತದೆ. ಆ ಪ್ರಕಾರ ಚಿಂತಾಮಣಿರಾಯನಂಥ ಧೋರಣದ ಮನುಷ್ಯನು ಕೇವಲ ದುರ್ದೈವದಿಂದ ಜಾರಿಬಿದ್ದದ್ದರಲ್ಲಿ ಆಶ್ಚರ್ಯವಿಲ್ಲ. ತನ್ನೆಲ್ಲ ದುಡ್ಡು ಬ್ಯಾಂಕಿನಲ್ಲಿ ಮುಳುಗಿದರೂ ಅವನಿಗೆ ಇಷ್ಟು ದುಃಖವಾಗುತ್ತಿದ್ದಿಲ್ಲ; ಆದರೆ ಅವನು ಡಿರೆಕ್ಟರರಲ್ಲಿ ಒಬ್ಬನಾಗಿದ್ದದ್ದರಿಂದ ಎರಡನೆಯವರಿಗೆ ಕೊಡುವ ಹಣದ ಸಲುವಾಗಿ ಅವನಿಗೆ ಬಹಳ ಚಿ೦ತೆಯು ಬಂದಿತು. ಕಡೆಗೆ ಅವನು ಮುಂಬಯಿಯಲ್ಲಿರುವ ತನ್ನ ಸುಂದರಭವನವೆಂಬ ರಾಜವಾಡೆಯನ್ನೂ, ಅದರ ಹತ್ತರ ಇದ್ದ ನೂತನ ಪದ್ಧತಿಯಿಂದ ಕಟ್ಟಿಸಿದ ಬಾವಿಯನ್ನೂ ಮಾರಿ ಹದಿಮೂರು ಲಕ್ಷ ರೂಪಾಯಿಗಳನ್ನು ಕೋರ್ಟಿನಲ್ಲಿ ಕಟ್ಟಿದನು, ಈ ಪ್ರಕಾರ ಕೈಯೊಳಗಿನ ದುಡ್ಡೆಲ್ಲ ಹೋಗಿ ಜೋಗಿಯಾದ ಮೇಲೆ ಅವನಿಗೆ ಮುಂದೆ ಹೇಗೆ ಮಾಡಬೇಕೆಂಬ ಬಗ್ಗೆ ದೊಡ್ಡ ವಿಚಾರವು ಬಿದ್ದಿತು. ಈ ವೇಳೆ ಯಲ್ಲಿ ಅನೇಕ ಜನರು ಅನೇಕ ತರದ ಯುಕ್ತಿ ಪ್ರಯುಕ್ತಿಯನ್ನು ಹೇಳಿದರು. ಅದರಲ್ಲಿ ದಿವ್ಯಸುಂದರಿಯ ವಿಚಾರವೇ ಚಿ೦ತಾಮಣಿರಾಯನಿಗೆ ಸರಿಬಿದ್ದಿತು. ದಿವ್ಯಸುಂದರಿಯು ಹೇಳಿದ್ದೇನಂದರೆ:- ಅಪ್ಪಾ, ನಿಮಗೆ ಇಂಥ ಶಿಕ್ಷೆ ಮಾಡುವದರಲ್ಲಿ ಪರಮೇಶ್ವರನ ಏನಾದರೂ ಸದುದ್ದೇಶವಿರಲಿಕ್ಕೆ ಬೇಕು, ನಿಮಗೆ ಈಗ ಸಾಧಾರಣ ವೃದ್ದಾಪ್ಯ ಕಾಲವು ಪ್ರಾಪ್ತವಾಗಿದ್ದರೂ ಇನ್ನೂ ನೀವು ವೈಭವಲೋಲುಪರಾದದ್ದನ್ನು ನೋಡಿ, ದೇವರು ನಿಮ್ಮ ಕಣ್ಣಿನಲ್ಲಿ ಅಂಜನ ಹಾಕಿದಂತೆ ಕಾಣುತ್ತದೆ. ಪೂರ್ವದಲ್ಲಿ ದೊಡ್ಡ ದೊಡ್ಡ ರಾಜರು ಕೂಡ ಆಶ್ರಮಚತುಷ್ಟಯದಂತೆ ನಡೆದರು, ವೃದ್ದಾಪ್ಯ ಕಾಲದಲ್ಲಿ ವಾನ ಪ್ರಸ್ಥಾಶ್ರಮವನ್ನು ಗ್ರಹಣಮಾಡಿ ಅಧ್ಯಾತ್ಮವಿಚಾರದಲ್ಲಿ ಸರ್ವ ಕಾಲವನ್ನು ಕಳೆದರು. ಆ ಪರಂಪರೆಯನ್ನು ಲೋಪಮಾಡಿದ್ದರಿಂದಲೇ ನಮ್ಮ ದೇಶಕ್ಕೆ ಹೀಗೆ ಹೀನಸ್ಥಿತಿಯು ಪ್ರಾಪ್ತವಾಯಿತು, ಮನುಷ್ಯನಿಗೆ ಯಾವಾಗಲೂ ಈ ಸಂಪತ್ತಿನ ಸಲುವಾಗಿ 'ನಿರಿಕ್ಷೆ ಯಿರಲಿಕ್ಕೆ ಬೇಕು, ಹುಟ್ಟಿದಾಗ ಯಾರೂ ಸಂಪತ್ತು ತಂದಿರುವದಿಲ್ಲ. ಮೃತ್ಯುವಿನೆ ನಿಮಂತ್ರಣಬಂದಾಗ ಯಾರೂ ಸಂಗಡ ದುಡ್ಡು ತಕ್ಕೊಂಡು ಹೋಗುವದಿಲ್ಲ. ಸುಕೃತ