ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ ನೆಯ ಪ್ರಕರಣ-ವಿವಾಹ. hch 44 vs v/ 47 v/ 14 # \ \ \/ y v * * * * * * * * * * *# # # # # # # # # vsy 1* * \ \ # # # # # # # s4 /s v \r\, ಅಥವಾ ದುಷ್ಯತ ಸಂಚಯವೇ ಆತ್ಮದ ಚಿರ ಸಹಚರವಾಗಿರುತ್ತದೆ, ಕಾರಣ ನಾವೆ ಲ್ಲರೂ ವಿನಾಶಕಾಲದಲ್ಲಿ ನಮ್ಮ ಮೂಲಗ್ರಾಮವಾದ ಕಿಸನಗಡ ಗ್ರಾಮಕ್ಕೆ ಹೋಗಿ ರೋಣ. ಈಗಿನ ನಿಮ್ಮ ವಿಪತ್ಕಾಲದಲ್ಲಿ ನಿಮ್ಮ ದೊಡ್ಡ ದೊಡ್ಡ ಮುಂಬಯಿ ಸ್ನೇಹಿ ತರು ನಿಮ್ಮನ್ನು ಮಾತಾಡಿಸುವದಿಲ್ಲ; ಅವರಿಂದ ನಿಮಗೆ ಯಾವತರದ ಸಹಾಯವೂ ಆಗುವದಿಲ್ಲ. ಅಂದಮೇಲೆ ನಿಮಗೆ ಇಲ್ಲಿರುವದರಿಂದ ಯಾವ ತರದ ಲಾಭವೂ ಇಲ್ಲ. ನಿಮ್ಮ ಜಹಾಗೀರು ಇನ್ನೂ ಸ್ಥಿರವಾಗಿದೆ. ಕಿಸನಗಡದಲ್ಲಿ ಭವ್ಯವಾದ ವಾಡೆಯೂ ಅದೆ. ಅಲ್ಲಿ ನೀವು ಇದ್ದು ದೇವರ ಧ್ಯಾನದಲ್ಲಿಯೇ ಕಾಲಕಳೆಯಿರಿ. ರಾಮರಾಯನು ಸಕಲ ಜಹಾಗೀರಿನ ವ್ಯವಸ್ಥೆ ಮಾಡಲಿ. ಇದೇ ಈಗಿನ ಪವಿತ್ರ ಕರ್ತವ್ಯಕರ್ಮವು. ಈ ಕರ್ತವ್ಯವನ್ನು ನೀವು ಮರೆತದ್ದರಿಂದಲೇ ಈಶ್ವರನು ನಿಮಗೆ ಇಂಥ ಮಹಾ ಶಿಕ್ಷೆ ಯನ್ನು ಕೊಟ್ಟಿರುವನು. ” ಎಂದಳು. - ದಿವಸುಂದರಿಯ ಈ ಬೋಧವು ಚಿಂತಾಮಣಿರಾಯನಿಗೆ ಸರಿದೋರಿತು. ಇಲ್ಲಿಯವರೆಗೆ ಕಿಸನಗಡವೆಂದರೆ ಚಿಂತಾಮಣಿರಾಯನು ಸೊಟ್ಟ ಮುಸುಡಿಯನ್ನು ಮಾಡುತ್ತಿದ್ದನು. ಅದೇ ಈಗ ಅವನಿಗೆ ತನ್ನ ಕರ್ತವ್ಯಭೂಮಿಯು ಮುಂಬಯಿಯಲ್ಲ ದಿದ್ದು, ಕಿಸನಗಡವೆಂಬುವದು ಸ್ಮರಣವಾಯಿತು, ಮತ್ತು ಅವನಿಗೆ ಮಾತೃಭೂಮಿಯ ಅವಲೋಕನ ಮಾಡದ ಬಗ್ಗೆ ಅತ್ಯಂತ ಅನುತಾಪವಾಯಿತು. ರಾಮರಾಯನು ಬೇಕಾದಷ್ಟು ಶಿಕ್ಷಣಸಂಪಾದನ ಮಾಡಿದವನಾಗಿದ್ದರೂ, ಈ ಪ್ರಸಂಗದಲ್ಲಿ ಅವನ ಬುದ್ದಿಯು ಕುಂಠಿತವಾಗಿದ್ದಿತು. ಮುಂದೇನು ಮಾಡಬೇಕೆಂಬ ಆಲೋಚನೆಯಲ್ಲಿಯೇ ಅವನೂ ಮಗ್ನನಾಗಿದ್ದನು. ಆದರೆ ದಿವ್ಯಸುಂದರಿಯ ಭಾಷಣವನ್ನು ಕೇಳಿ ಒಮ್ಮೆಲೆ ಅವನ ಮನಸೂ ಕಿಸನಗಡದ ಕಡೆಗೆ ಹೊರಳಿತು. ತಂದೆಮಕ್ಕಳಿಗೆ ದಿವ್ಯಸುಂದರಿಯ ಅಭಿಪ್ರಾಯವು ಯೋಗ್ಯವಾಗಿ ಕಾಣುತ್ತಲೇ ಅವರು ಎರಡನೇ ದಿವಸ ಮುಂಬಯಿ ಯನ್ನು ಬಿಟ್ಟು ಕಿಸನಗಡಕ್ಕೆ ಬಂದರು. ಕಿಸನಗಡದ ಆ ಸಭ್ಯ ವರ್ತನದ ಪ್ರೇಮಲ ಮನುಷ್ಯರನ್ನು ನೋಡಿ ಚಿಂತಾಮಣಿರಾಯನ ಕಣ್ಣಿನ ಮುಂದೆ ಮುಂಬಯಿಯ ಸುಧಾರಿಸಿದ ಮನುಷ್ಯರ ಕೃತ್ರಿಮ ಸಭ್ಯತೆಯು ಮೂರ್ತಿಮಂತವಾಗಿ ನಿಂತಿತು. ಹರಕು ಧೋತರವನ್ನು ತ್ವಂಥ, ಅಲ್ಲಲ್ಲಿಗೆ ಗಂಟುಹಾಕಿದ ಮುಂಡಾಸಗಳನ್ನು ಸುತ್ತಿಕೊಂಡಂಥ, ಚಣ್ಣದ ಅರಿವೆಯ ಅಂಗಿಯನ್ನು ಹಾಕಿಕೊಂಡಂಥ ಕಿಸನಗಡದ ಜನರ ಬಾಯಿಯೊ ಳಗಿಂದ ಮೇಲೆ ಹೊರಡುತ್ತಿದ್ದ ಧನಿಯರು ” ಎಂಬ ಶಬ್ದವನ್ನು ಕೇಳಿ ಅವನ ಕಣ್ಣುಗಳಲ್ಲಿ ಕಣ್ಣೀರುಗಳು ಉದುರಹತ್ತಿದವು, ಈ ಭಾರತಭೂಮಿಯ ನಿಜವಾದ ಮಕ್ಕಳನ್ನು ಬಿಟ್ಟು-ಇವರ ಉಪೇಕ್ಷೆಯನ್ನು ಮಾಡಿ, ಆ ಪಟ್ಟಣದೊಳಗಿನ ಲೋಲು ಗಾರರ ಅದರ ಸತ್ಕಾರ ಮಾಡಿದ ಬಗ್ಗೆ ಅವನಿಗೆ ಪೂರ್ಣ ಖೇದವಾಯಿತು. ರಾಮರಾ ಯನ ಸ್ಥಿತಿಯಾದರೂ ಹಾಗೇ ಆಯಿತು. ' ಸಣ್ಣ ಧನಿಯರು ' ಎಂದನ್ನುತ್ತ ಪುನ: ಪುನಃ ನಮಸ್ಕಾರ ಮಾಡಹತ್ತಿದ ಕೂಡಲೆ ರಾಮರಾಯನ ಮನಸ್ಸಿನಲ್ಲಿ ಕಲ್ಪನಾತೀ