ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ನೆಯು ಪ್ರಕರಣ-ವಿವಾಹ. ೧೦೩ ತYYY YYYv Ph, vvvy CA ರಷ್ಯ ? ರಾಜಾಸಾಹೇಬರು ಎಲ್ಲಿರುವರು?” ಎಂದು ಕೇಳಿದ ಕೂಡಲೆ ಕಾವು ರಾಯನು:- ಸರ್ವರೂ ಕುಶಲರಾಗಿದ್ದಾರೆ. ಬಿ, ತಮ್ಮನ್ನು ರಾಜಾಸಾಹೇಬರ ಕಡೆಗೆ ಕರಕೊಂಡು ಹೋಗುತ್ತೇನೆ. ” ಎಂದನ್ನು ಮುಂದಕ್ಕೆ ಹೋಗಹತ್ತಿದನು. ಅವನ ಹಿಂದೆ ವಿನಾಯಕನು ಹೋಗಹತ್ತಿದನು. ಪೂರ್ವದ ಪದ್ಧತಿಯಿಂದ ಕಟ್ಟಿದ ಆ ಹಳೇವಾಡೆಯ ಈ ಚೌಕಿನಿಂದ ಆ ಚೌಕಿಗೆ ಆ ಚೌಕಿನಿಂದ ಈ ಚೌಕಿಗೆ ಹೋಗು ಹೋಗುತ್ತ ಅವರಿಬ್ಬರು ವಾಡೆಯ ಹಿಂಭಾಗದ ಬಾಗಿಲಿನ ಹಿಂದೆ ಇದ್ದ ವಿಶಾಲ ವಾದ ತೋಟವನ್ನು ಹೊಕ್ಕು ಎದುರಿಗೆ ಕಾಣಿಸುತ್ತಿದ್ದ ಶಿವಾಲಯದಲ್ಲಿ ಹೋದರು. ಶಿವಾಲಯವು ಸಣ್ಣದಾದರೂ ಬಹು ಸುಂದರವಾಗಿದ್ದಿತು. ಆ ಶಿವಾಲಯದ ಒಂದು ಮೂಲೆಯಲ್ಲಿ ಚಿಂತಾಮಣಿರಾಯನು ಕುಳಿತಿದ್ದನು. ಅವನು ಮೈಮೇಲೆ ಶುಭ್ರವಾದ ಮಡಿಯ ವಸ್ತ್ರಗಳನ್ನು ಧಾರಣಮಾಡಿದ್ದನು. ತಲೆಯ ಮೇಲಿನ ಕೂದಲುಗಳೂ, ಗಡ್ಡವೂ ಬಹಳವಾಗಿ ಬೆಳೆದಿದ್ದವು. ಅವನ ಹತ್ತರ ಐದಾರು ಅಧ್ಯಾತ್ಮ ವಿಷಯದ ಪುಸ್ತಕಗಳು ಬಿದ್ದಿದ್ದವ, ಇಂಥ ಶಾಂತ-ಗಂಭೀರಾವಸ್ಥೆಗಳಲ್ಲಿದ್ದ ಚಿಂತಾಮಣಿರಾಯ ನನ್ನು ನೋಡಿ ವಿನಾಯಕನ ಕಣ್ಣುಗಳು ಅಶ್ರುಗಳಿಂದ ತುಂಬಿಬಂದವ, ಅವನು ಚಿಂತಾಮಣಿರಾಯನಿಗೆ ಸಾಷ್ಟಾಂಗನಮಸ್ಕಾರವನ್ನು ಮಾಡಿ ಅವನ ಬಳಿಯಲ್ಲಿ ಹೋ ದನು. ಈ ವೇಳೆಯಲ್ಲಿ ದಿವ್ಯಸುಂದರಿ-ಮಧುರೆಯರು ಅಲ್ಲಿಯೇ ಕುಳಿತಿದ್ದರು. ವಿನಾ ಯಕನು ಸುಮ್ಮನೆ ಕುಳಿತದ್ದನ್ನು ನೋಡಿ ಚಿಂತಾಮಣಿರಾಯನು ವಿನಾಯಕನನ್ನು ಉದ್ದೇಶಿಸಿ: ನಮ್ಮ ಭೆಟ್ಟಿಗಾಗಿ ನೀವಿಷ್ಟು ದೂರ ಬಂದದ್ದ ಕ್ಕಾಗಿ ನಮ್ಮೆಲ್ಲರಿಗೆ ಪರಮಾನಂದವಾಯಿತು, ನಿಮ್ಮ ಕಾರಖಾನೆಯ ಕೆಲಸವು ಚನ್ನಾಗಿದೆಯಷ್ಟೆ? ? ಎಂದು ಕೇಳಲು ವಿನಾಯಕನು ನನ್ನವಾಗಿ:-( ಹೌದು ರಾಜಾಸಾಹೇಬ, ಕಾರ ಖಾನೆಯ ಕೆಲಸವು ಚನ್ನಾಗಿ ನಡೆದದೆಯೆಂದು ಮೇಲೆ ಪತ್ರ ಬರುತ್ತವೆ. ನಾನು ಸ್ವತಃ ಇನ್ನೂ ಕಾರಖಾನೆಗೆ ಹೋಗಿಲ್ಲ. ನಾನು ಇಷ್ಟು ದಿವಸ ಮುಂಬಯಿ ಮೊದ ಉಾದ ಸ್ಥಳಗಳಲ್ಲಿ ಇದ್ದೆನು, ನಾನು ತಮಗೊಂದು ಆನಂದದ ಸಂಗತಿಯನ್ನು ಹೇಳ ಲಿಕ್ಕೆ ಬಂದಿದ್ದೇನೆ.” ಎಂದನ್ನಲು ಚಿಂತಾಮಣಿರಾಯನು:- ಈಗ ನನಗೆ ಆನಂದದ ಸಂಗತಿಯೂ ಬೇಕಾಗಿಲ್ಲ, ದುಃಖದ ಸಂಗತಿಯೂ ಬೇಕಾಗಿಲ್ಲ; ಎರಡೂ ಅಷ್ಟೇ, ನಾನು ಮುಂಬಯಿಯನ್ನು ಬಿಡುವಾಗ ನೀವೂ, ಕೃಷ್ಣರಾಯನೂ, ಮಾಧವರಾಯನ ಕೂಡಿ ಬ್ಯಾಂಕಿನ ಸಂಬಂಧವಾಗಿ ಶೋಧನಡಿಸಿರುವಿರೆಂದು ಕೇಳಿದ್ದೆನು, ಆ ಕಾರ್ಯ ದಲ್ಲಿ ನೀವು ಯಶಸ್ವಿಗಳಾದಿರಷ್ಟೆ? ?” ಎಂದನ್ನಲು ವಿನಾಯಕನು:- ಪರಮೇಶ್ವರನ ಕೃಪೆಯಿಂದ ಪೂರ್ಣ ಯಶಸ್ವಿಯಾದೆವೆಂದನ್ನಲಿಕ್ಕೆ ಏನೂ ಅಡ್ಡಿಯಿಲ್ಲ. ಹೋಲೀ ಸರು ಆರಂಭದಲ್ಲಿ ಚೌಕಸಿಮಾಡುವದಕ್ಕೆ ಒಳ್ಳೆ ಆತುರಮಾಡಿದರು, ಆದರೆ ಏನಾ ಯಿತೋ ಯಾರಿಗೆ ಗೊತ್ತು, ಆ ಚೌಕಸಿಯು ತಣ್ಣಗಾಗಹತ್ತಿತು. ನನಗೆ ಸಹಾಯಕ ನಾಗಿದ ಪೋಲೀಸ ಇನಸ್ಪೆಕ್ಟರನು ಬಹು ಹುಷಾರ ಮನುಷ್ಯನಾಗಿದ್ದನು. ಈ ಚೌಕ