ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, •••••••••••••MM

  • , * Yory ,

.مهم هم مي صمه جي - *A*? ••••••••• ಸಿಯು ತಣ್ಣಗಾಗುತ್ತ ಹೋದಂತೆ ಅವನ ಉತ್ಸುಕತೆಯು ಹೆಚ್ಚಾಯಿತು. ಅವನು ಬೇರೊಂದು ಮಾರ್ಗದಿಂದ ಶೋಧಿಸಲಿಕ್ಕೆ ಆರಂಭಿಸಿದನು. ನಾನಿಷ್ಟು ದಿವಸ ಒಂದೇ ಸವನೆ ಅವನ ಸಂಗಡಲೇ ಇದ್ದೆನು, ಶೋಧ ಮಾಡುಮಾಡುತ್ತ ಕಡೆಗೆ ನಮ್ಮಿಬ್ಬರಿಗೆ ಆಸಾಮದೊಳಗಿನ ಚೇರಾಪುಂಜಿ ಗ್ರಾಮದಲ್ಲಿ ಎಲ್ಲ ಸಂಪತ್ತು ಸಿಕ್ಕಿತು. ಶಾಮ ರಾಯ ಗೋಸಾಳರಾಯ, ವಸಂತ ಮೊದಲಾಗಿ ಇಪ್ಪತ್ತು ನಾಲ್ಕು ಜನರ ಒಂದು ಟೋಳಿಯಿದ್ದು, ಅದರಲ್ಲಿ ಚೇರಾಪುಂಜಿಯ ಒಬ್ಬ ಜಮೀನದಾರನೂ ಸಮಾವೇಶ ವಾಗಿರುತ್ತಾನೆ, ಅವರಲ್ಲಿ ಬಂಗಾಲಿ, ಪಂಜಾಬಿ ಮೊದಲಾದ ಸರ್ವ ಜಾತಿಯವರಿದ್ದು ಎಷ್ಟೊ ವಿಶ್ವವಿದ್ಯಾಲಯದೊಳಗಿ ಸುಶಿಕ್ಷಿತರೂ ಸಮಾವೇಶವಾಗಿರುತ್ತಾರೆ. ಆ ಜಮೀ ನದಾರನ ಮನೆಯಲ್ಲಿ ಎಲ್ಲ ಕಾಗದಪತ್ರಗಳೂ, ಸಂಪತ್ತೂ ಸಿಕ್ಕಿರುತ್ತದೆ. ಮೂಲ ಸಂಪತ್ತಿನಲ್ಲಿ ಸ್ವಲ್ಪಾಂಶ ಮಾತ್ರ ನಷ್ಟವಾದಂತೆ ಕಾಣಿಸುತ್ತದೆ. ಈ ಪ್ರಕಾರ ಬ್ಯಾಂಕಿನ ಶೋಧವಾದದ್ದರಿಂದ ಮುಂಬಯಿಯೊಳಗಿನ ನೂರಾರು ಜನರು ಪೋಲೀಸ ಇನಸ್ಪೆಕ್ಷ ರನ ಸ್ತುತಿ ಮಾಡುತ್ತಿರುತ್ತಾರೆ. ಈ ಶೋಧದಲ್ಲಿ ಸ್ವಲ್ಪ ಜನರು ಮಾತ್ರ ಸಿಕ್ಕಿರುತ್ತಾರೆ. ಶಾಮರಾಯ, ಗೋಪಾಳರಾಯ, ವಸಂತ ಇವರ ಶೋಧವಾಗಿಲ್ಲ. ಈಗ ಆ ಚೌಕಸಿಗೆ ವಿಶೇಷಸ್ವರೂಪವು ಬಂದದ್ದರಿಂದ ಬೇಗನೆ ಎಲ್ಲರ ಶೋಧವಾಗಲಿಕ್ಕೆ ಅಡ್ಡಿಯಿಲ್ಲ. ಆ ಜಮೀನದಾರನಲ್ಲಿ ಯಾರ ಯಾರ ದುಡ್ಡು ಎಷ್ಟೇ ಹೈಂಬ ಬಗ್ಗೆ ಬರೆದಿಟ್ಟ ಪ್ರಾಮಾ ಣಿಕತನದ ಜಮಾಖರ್ಚಿನ ಬುಕ್ಕೂ ಸಿಕ್ಕಿರುತ್ತದೆ. ಆದದ್ದರಿಂದ ಕಳಕೊಂಡವರ ದುಡ್ಡು ಬೇಗನೆ ಪೋಲೀಸರಿಂದ ಸಿಗುವದು. ” ಎಂದನು. ವಿನಾಯಕನು ಬ್ಯಾಂಕಿನ ವಾರ್ತೆಯನ್ನು ಸವಿಸ್ತಾರವಾಗಿ ಹೇಳಿದರೂ ನಾವು ಅದನ್ನು ಸಂಕ್ಷೇಪಿಸಿ ಬರೆದಿರುತ್ತೇವೆ. ವಿನಾಯಕನ ಹೇಳುವದು ಮುಗಿದ ಮೇಲೆ ಚಿಂತಾಮಣಿರಾಯನು:- ವಿನಾಯಕರಾಯ, ನಿಮ್ಮ ಉಪಕಾರವು ನಮ್ಮ ಮೇಲೆ ಬಹಳವಾಯಿತು, ಆ ಬಗ್ಗೆ ನಿಮ್ಮ ಉಪಕಾರವನ್ನು ನಾನು ಮನ್ನಿಸದಿದ್ದರೂ ರಾಮರಾ ಯನು ಮನ್ನಿಸುವನು. ಯಾಕಂದರೆ, ಈಗ ನಾನು ಆ ಸಂಪತ್ತಿನಿಂದ .ಅಲಿಪ್ತನಾಗಿರು ವೆನು, ನಿಮ್ಮಿ ಉಪಕಾರಋಣದಿಂದ ಮುಕ್ತನಾಗುವದು ಅಶಕ್ಯವೇ ಸರಿ; ಆದರೂ ಅಂಶತಃ ಮುಕ್ತನಾಗಬೇಕೆಂದು ನಾನು ರಾಮಪುರದ ಎಲ್ಲ ಭೂಮಿಯನ್ನು ನಿಮಗೆ ಬಕ್ಷೀಸುಕೊಡುತ್ತೇನೆ. ಈ ಭೂಮಿಯನ್ನು ಕೆವಲ ನೀವು ಉಪಕಾರ ಮಾಡಿದಿರೆಂದು ನಿಮಗೆ ನಾನು ಬಕ್ಷೀಸು ಕೊಡುವದಿಲ್ಲ. ಆದರೆ ಬೆಲೆ ಬಾಳದಿದ್ದ ಭೂಮಿಯಲ್ಲಿ ಈಗ ನೀವು ಬಂಗಾರದಂತೆ ಬೆಲೆ ಬರುವಂತೆ ಮಾಡಿದ ಪ್ರಯತ್ನ ಗುಣಕ್ಕೆ ಈ ಅಲ್ಪ ಪಾರಿ ತೋಷವನ್ನು ಕೊಟ್ಟಿದ್ದೇನೆ. ನಮ್ಮ ದೇಶದಲ್ಲಿ ಸದುದ್ಯಮಶೀಲರೂ, ಕಲ್ಪ ಕರೂ ಆದ ಜನರು ಸ್ವಲ್ಪ ಇರುತ್ತಾರೆ. ನಾವು ಕೈಯಿಂದಾದಷ್ಟು ಅಂಥವರ ಬಗ್ಗೆ ಈ ಪ್ರಕಾರ ಉತ್ಸಾಹಗೊಟ್ಟರೆ ನಮ್ಮ ದೇಶಕ್ಕೆ ಒಳ್ಳೇ ಹಿತವಾಗುವ ಸಂಭವವಿದೆ, ” ಎಂದಂದನು. ಆಗ ವಿನಾಯಕನು:- ನನ್ನ ಯೋಗ್ಯತೆಗೆ ನೀವು ಕೊಟ್ಟ ಬಕ್ಷೀಸು ತೀರ ಹೆಚ್ಚಿನದೇ