ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ೦೬ - ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. • /\ \ 2' s/ ಎಂದು ಕೇಳಲು ಕೃಷ್ಣ ರಾಯನು:-( ಮಹತ್ವದ ಕಾರಣವಿದ್ದದ್ದರಿಂದಲೇ ನಾನು ಇಲ್ಲಿಗೆ ಬಂದಿರುವೆನು, ನನ್ನ ಸಂಗಡ ನಡೆ, ಅಂದರೆ ನಿನಗೆ ಎಲ್ಲ ಗೊತ್ತಾಗುವದು. ” ಎಂದಂದು, ವಿನಾಯಕನು ಗೊಂದಲದಲ್ಲಿ ಬಿದ್ದನು. ಅವನು ವಿಚಾರಮಾಡುತ್ತ ಕೃಷ್ಣ ರಾಯನ ಹಿಂದೆ ವಾಡೆಯೊಳಗೆ ಹೋದನು. ಹೋಗಿ ನೋಡುತ್ತಾನೆ, ಅಲ್ಲಲ್ಲಿಗೆ ಅಸ್ತ್ರ ವ್ಯಸ್ತವಾಗಿ ಬಿದ್ದ ಸಾಮಾನುಗಳನ್ನು ವ್ಯವಸ್ಥೆ ಮಾಡುವದರ ಸಲುವಾಗಿ ಎಷ್ಟೋ ಪುರುಷ-ಸ್ತ್ರೀಯರು ಮಗ್ನರಾಗಿದ್ದಾರೆ. ಇದನ್ನು ನೋಡಿ ವಿನಾಯಕನಿಗೆ ಮತ್ತಷ್ಟು ಆಶ್ಚರ್ಯವಾಯಿತು; ಆದರೆ ಈ ಸ್ಥಿತಿಯೂ ಅವನಿಗೆ ಬಹಳ ಹೊತ್ತು ಉಳಿಯಲಿಲ್ಲ. ಯಮುನೆಯು ವಿನಾಯಕನನ್ನು ನೋಡಿದ ಕೂಡಲೆ ಮುಂದಕ್ಕೆ ಬಂದು ನಗುತ್ತ:- C« ಬಿ, ಮೈದುನರೇ, ಸ್ತ್ರೀರತ್ನ ವನ್ನು ದೊರಕಿಸುವದಕ್ಕಾಗಿ ನಮ್ಮನ್ನು ಬಿಟ್ಟು ನೀವೊ ಬ್ಬರೇ ಬರಬೇಕೇ ? ಆದರೂ ನಾವು ನಿಮ್ಮನ್ನು ಬಿಡುವಂತಿಲ್ಲ. ” ಎಂದನ್ನಲು ವಿನಾಯ ಕನಿಗೆ ಸರ್ವಸಂಗತಿಯು ಲಕ್ಷದಲ್ಲಿ ಬಂದಿತು. ಅದೇ ವೇಳೆಯಲ್ಲಿ ಕೃಷ್ಣರಾಯನು ವಿನಾ ಯಕನಿಗೆ ಎಲ್ಲ ವಾರ್ತೆಯನ್ನು ಹೇಳಿದ್ದರಿಂದ ವಿನಾಯಕನು ಮನದಲ್ಲಿಯೇ ಧನ್ಯ ನಾ ದೆನೆಂದು ಹಿಗ್ಗಿ ದನು. ಯಾವ ದಿವಸ ಚಿಂತಾಮಣಿರಾಯನು ಸರ್ವರ ಸಮಕ್ಷ ರಾಮ ರಾಯನ ಕಡೆಯಿಂದ ಪತ್ರ ಬರಿಸಿದನೋ ಆ ದಿವಸದೇ ಇದೆಲ್ಲ ಪರಿಣಾಮ, ಇದು ವಿನಾಯಕನಂತೆ ನಮ್ಮ ವಾಚಕರ ಲಕ್ಷದಲ್ಲಿ ಬಾರದೇ ಇರಲಿಕ್ಕಿಲ್ಲ. ಹಾಗೆಯೇ ಈ ಲಗ್ನವು ದಿವ್ಯಸುಂದರಿ-ವಿನಾಯಕರದೆಂಬುವದನ್ನೂ ಬೇರೆ ಹೇಳಲಿಕ್ಕೆ ಕಾರಣವಿಲ್ಲ. ದಿವ್ಯಸುಂದರಿ-ವಿನಾಯಕರ ಲಗ್ನದ ನಿಶ್ಚಯವಾದ ಕೂಡಲೆ ರಾಮರಾಯ, ಕೃಷ್ಣ ರಾಯ ಮೊದಲಾದ ಉಭಯ ಪಕ್ಷದವರು ಲಗ್ನದ ಒಳ್ಳೆ ಸಿದ್ದತೆ ಮಾದಡಿರು, ಸುಮು ಹೂರ್ತದಲ್ಲಿ ಒಳ್ಳೆ ವೈಭವದಿಂದ ದಿವ್ಯಸುಂದರಿ-ವಿನಾಯಕರ ಲಗ್ನ ವಾಯಿತು. ಆ ಲಗ್ನದಲ್ಲಿ ವಿದ್ಯುದ್ದೀಪಿಕೆಗಳು ದೃಷ್ಟಿಗೆ ಬೀಳಲಿಲ್ಲ, ಬ್ಯಾಂಡಿನ ಸಪ್ಪಳವು ಕೇಳಬರ ಲಿಲ್ಲ, ಮದ್ದು-ಮಸಿಗಳು ಹಾರಲಿಲ್ಲ, ವೇಶ್ಯಯರ ಹಾಡು-ಕುಣಿತಗಳು ಕಂಡು ಬರಲಿಲ್ಲ; ಆದರೆ ಗೃಹಸ್ಥ ಧರ್ಮದ ಯಾವತ್ತೂ ರಹಸ್ಯಗಳು ಆ ಲಗ್ನದಲ್ಲಿ ಒಂದೂ ಆಗದೆ ಉಳಿಯಲಿಲ್ಲ. ಆ ಲಗ್ನ ಪದ್ಧತಿಯನ್ನು ನೋಡಿ ಎಷ್ಟೋ ಸಹೃದಯ ಮನುಷ್ಯರ ಕಣ್ಣುಗಳು ಆನಂದಾಶ್ರುಗಳಿಂದ ತುಂಬಿಬಂದವು, ಚಿಂತಾಮಣಿರಾಯನು-ಅಲ್ಲರಾಮರಾಯನು ಈ ಪ್ರಸಂಗದಲ್ಲಿ ಪಾತ್ರಾಪಾತ್ರ ವಿಚಾರಮಾಡಿ ಬಡಬಗ್ಗರಿಗೆ ಕುರುಡ-ಕುಂಟರಿಗೆ, ಮೂಕ-ಕಿವುಡರಿಗೆ ಮೊದಲಾದ ಎಷ್ಟೋ ಅನಾಥರಿಗೆ ದಾನಧರ್ಮ ಮಾಡಿದನು, ಮತ್ತು ಹೊಲಿಯರು ಮೊದಲು ಮಾಡಿಕೊಂಡು ತನ್ನ ಪ್ರಜೆ ಗಳಿಗೆಲ್ಲ ನಾಲ್ಕು ದಿವಸ ಮಿಫ್ಘಾನ್ನದ ಊಟಗೊಟ್ಟನು. --.