ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆನೆಯ ಪ್ರಕರಣ-ವಸಂತನ ಕಾರಸ್ಥಾನ. ೧೦೭

    • Prrಗಿ,

rv 2 ,* ”, 2 - 24 / 2 *, * * *~ - t / PAM ಸಂಕಟನಾರೈಯಾ fಸ ೮ನೆಯ ಪ್ರಕರಣ, ಕೊg ಕಥಥಥಥಥಥಥಥಥಥಥಥಥಥಥ ವಸಂತನ ಕಾರಸ್ಥಾನ. ( ಲ) ಸಮಾರಂಭವು ಮುಗಿದ ಮೇಲೆ ಕೃಷ್ಣರಾಯನು ವಿನಾಯಕ-ದಿವ್ಯ ಸುಂದರಿಯರನ್ನು ಕರಕೊಂಡು ಮುಂಬಯಿಗೆ ಬಂದನು. ವಿನಾಯ Yಜತೆ ಕನು ನಾಲ್ಕು ದಿವಸ ಅಲ್ಲಿದ್ದು ಪುನಃ ರಾಮಪುರಕ್ಕೆ ಹೊರಟು ಬಂದನು. ನಮ್ಮಂಥ ಸಾಧಾರಣ ಸ್ಥಿತಿಯ ಕುಟುಂಬದಲ್ಲಿ ದಿವ್ಯಸುಂದರಿಯು ಹೇಗೆ ನಡೆಯುತ್ತಾಳೆಂಬ ಬಗ್ಗೆ ಯಮುನೆಗೆ ಒಳ್ಳೆ ಚಿಂತೆಯಾಗಿದ್ದಿತು; ಆದರೆ ಬಂದ ನಾಲ್ಕು ದಿವಸದಲ್ಲಿಯೇ ಅವಳ ಉದ್ಯೋಗವ್ಯವಸ್ಥೆ, ಮಾತಾಡುವ ಪದ್ಧತಿ, ಹೊತ್ತು ಹೊತ್ತಿಗೆ ಕೆಲಸಮಾಡುವ ರೀತಿ ಈ ಮೊದಲಾದ ಬಾಲಬೋಧ ವರ್ತನವನ್ನು ನೋಡಿ ಯಮು ನೆಯ ಚಿಂತೆಯು ದೂರಾಯಿತು. ಇಷ್ಟೆ ಅಲ್ಲ, ಅವಳ ಮನಸ್ಸಿನಲ್ಲಿ ದಿವ್ಯಸುಂದ ರಿಯ ವಿಷಯವಾಗಿ ಸಹೋದರೀ ಆದರವು ಉತ್ಪನ್ನವಾಯಿತು. ಸ್ವಲ್ಪ ದಿವಸದಲ್ಲಿ ಅವರಿಬ್ಬರ ಮನಸ್ಸುಗಳು ಒಂದಾದವು, ನೆರೆಮನೆಯ ಸ್ತ್ರೀಯರಿಗೂ ಈ ರಾಜಾಬಹಾ ದ್ದೂರರ ಮಗಳು ಹೇಗೆ ನಡಕೊಳ್ಳುತ್ತಾಳೋ ಏನೋ ಎಂಬ ಬಗ್ಗೆ ದೊಡ್ಡ ವಿಚಾ ರವೇ ಬಿದ್ದಿದ್ದಿತು. ಆದರೆ ದಿವ್ಯಸುಂದರಿಯ ನಿರಭಿಮಾನ, ಸರಳವೂ ಪ್ರೇಮಲವೂ ಆದ ವರ್ತನ ಇವುಗಳನ್ನು ನೋಡಿ ಅವರಿಗೆ ಅವಳ ವಿಷಯವಾಗಿ ಆಶ್ಚರ್ಯವೆನಿ ಸಿತು, ಈ ಪ್ರಕಾರ ದಿವ್ಯಸುಂದರಿಯು ಮುಂಬಯಿಯಲ್ಲಿ ಒಂದು ತಿಂಗಳು ಇದ್ದ ಮೇಲೆ ಒಂದು ದಿವಸ ಕಿಸನಗಡದಿಂದ ರಾಮರಾಯನು ಬಂದನು. ಅವನು ತನ್ನ ಸುಂದರಭವನದಲ್ಲಿ ನಾಲ್ಕು ದಿವಸವಿದ್ದು, ಆ ಮೇಲೆ ದಿವ್ಯಸುಂದರಿಯನ್ನು ಕರ ಕೊಂಡು ಕಿಸನಗಡಕ್ಕೆ ಹೋದನು, ಈಗ ಚಿಂತಾಮಣಿರಾಯನಿಗೆ ಸರ್ವಸಂಪತ್ತು ಮರಳಿ ಸಿಕ್ಕದ್ದರಿಂದ ಅವನಿಗೆ ತಿರುಗಿ ಮುಂಬಯಿಯಲ್ಲಿ ಪೂರ್ವವೈಭವದಿಂದ ಇರಲಿಕ್ಕೆ ಅಡ್ಡಿಯಿದ್ದಿಲ್ಲ; ಆದರೆ ಅವನಿಗೆ ವಾನಪ್ರಸ್ಥಾಶ್ರಮದ ಶಾಂತಿಸುಖದ ಸವಿಯು ಹತ್ತಿದ್ದ ರಿಂದ ಕಿಸನಗಡವನ್ನು ಬಿಡಲಿಕ್ಕೆ ಇಚ್ಛೆಯಿದ್ದಿಲ್ಲ. ರಾಮರಾಯನ ಮಾನಸಿಕ ಅವ ಸ್ಥೆಯೂ ತನ್ನ ತಂದೆಯಂತೆಯೇ ಆಗಿದ್ದಿತು. ಮುಂಬಯಿಯಲ್ಲಿದ್ದು ಮೋಟಾರದೊ ಳಗೆ ಕುಳಿತು ಸುಮ್ಮನೆ ಅತ್ತಿತ್ತ ತಿರುಗಾಡುವದಕ್ಕಿಂತ ಕಿಸನಗಡದ ಕರ್ತವ್ಯಕ್ಷೇತ್ರ ದಲ್ಲಿ ಸುಗುಣಸಂಪನ್ನ ಜನರೊಡನೆ ಕಾಲಕ್ಷೇಪ ಮಾಡುವದು ಅವನಿಗೆ ಈಗ ಅತಿ