ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ, YWvvvvvvv ಶ್ರೇಯಸ್ಕರವಾಗಿ ತೋರಹತ್ತಿತು. ಮುಂಬಯಿಯ ಮಿತ್ರರ ಸಂಗಡ ನಿರರ್ಥಕವಾಗಿ ಹರಟಿಯನ್ನು ಹೊಡೆಯುವದಕ್ಕಿಂತ ಕೃಷಿಕರ್ಮಬಾಂಧವರಿಗೆ ಅವರ ಸುಖದುಃಖದ ಮಾತು ಹೇಳುವದರಲ್ಲಿ ಏನಾದರೂ ವಿಶೇಷವಿರುತ್ತದೆಂದು ಅವನಿಗೆ ತೋರಹತ್ತಿತು. ಅವನು ಒಬ್ಬ ಜಾಣ ವೈದ್ಯನನ್ನು ಕರಿಸಿ ಒಂದು ಧರ್ಮಾರ್ಥ ಔಷಧಾಲಯವನ್ನು ಕಿಸನಗಡದಲ್ಲಿ ಪ್ರಾರಂಭಮಾಡಿದನು, ಮತ್ತು ಅಲ್ಲಿ ಒಕ್ಕಲಿಗರ ಸಲುವಾಗಿ ಒಂದು ನವೀನ ಪದ್ಧತಿಯ ಶಾಲೆಯನ್ನು ಸ್ಥಾಪಿಸಿದನು. ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಸಂಗಡ ಕೃಷಿ ಶಿಕ್ಷಣಕೊಡುವ - ನಿಯಮವಿದ್ದದ್ದರಿಂದ ಒಕ್ಕಲಿಗರಿಗೆ ಬಹಳ ಲಾಭವಾ ಗಹತ್ತಿತು. ಒಕ್ಕಲಿಗರ ಚಮತ್ಕಾರಿಕ ವರ್ತನ, ಭ್ರಾಮಕಕಲ್ಪನೆ, ಮದ್ಯದಂಥ ದುಷ್ಟ ವ್ಯಸನ ಇವುಗಳನ್ನು ಹೋಗಲಾಡಿಸುವದರ ಸಲುವಾಗಿ ಅವನು ಬಹಳೇ ಪ್ರಯತ್ನ ಮಾಡಿದನು, ಅದರಲ್ಲಿ ಅವನಿಗೆ ಸುಯಶಸ್ವ ಪ್ರಾಪ್ತವಾಯಿತು. ಚತುರ ನಾದ ಇಂಜನಿಯರನನ್ನು ನವಕರಿಗೆ ಇಟ್ಟು ಕೊಂಡು ಎಲ್ಲ ಭೂಮಿಯಲ್ಲಿಯೂ ನೀರು ಹಾಯುವಂತೆ ಮಾಡಿದ್ದರಿಂದ ಜಹಾಗೀರಿನ ಉತ್ಪನ್ನವು ವಿಶೇಷವಾಗಿ ಬೆಳೆಯಿತು. ಒಕ್ಕಲಿಗರ ಸ್ಥಿತಿಯ ಬದಲಾಯಿಸಿತು. ಸುಧಾರಿಸಿದ ರಂಟೆ-ಕುಂಟೆ, ಉತ್ತಮ ಮಬೀಜ ಮೊದಲಾದವುಗಳ ಅನುಕೂಲತೆ ಮಾಡಿಕೊಟ್ಟದ್ದರಿಂದ ಒಕ್ಕಲಿಗರಿಗೆ ಮಿತಿಮೀರಿ ಲಾಭವಾಗಹತ್ತಿತು. ಈ ರೀತಿಯಿಂದ ರಾಮರಾಯನ ಕಾರ್ಯ ಕ್ಷೇತ್ರವು ಬೆಳೆಯುತ್ತ ಹೋದದ್ದರಿಂದ ಅವನಿಗೆ ಕಿಸನಗಡ ಬಿಟ್ಟು, ನಾಲ್ಕು ದಿವಸ ವಾದರೂ ಎರಡನೇ ಕಡೆಗೆ ಹೋಗಲಿಕ್ಕೆ ಇಚ್ಛೆಯಾಗುತ್ತಿದ್ದಿಲ್ಲ, ಗಂಡನ ಮನೆಯಿಂದ ಬಂದಂದಿನಿಂದ ದಿವ್ಯಸುಂದರಿಯ ಸೌಮ್ಯವೂ ಪ್ರೇಮಲವೂ ಆದ ವರ್ತನವನ್ನು ನೋಡಿ ಚಿಂತಾಮಣಿರಾಯನಿಗೆ ಬಹು ಸಮಾಧಾನವಾಯಿತು. ದಿವ್ಯಸುಂದರಿಯು ಹಾಗೂ ಹೀಗೂ ಒಂದು ತಿಂಗಳು ತವರ್ಮನೆಯಲ್ಲಿದ್ದ ಮೇಲೆ ತನ್ನನ್ನು ರಾಮಪುರಕ್ಕೆ ಕರಕೊಂಡು ಹೋಗಬೇಕೆಂದು ಮೇಲೆ ವಿನಾಯಕನಿಗೆ ಪತ್ರಬರೆದಳು. ಆಗ ವಿನಾಯಕನು ದಿವ್ಯಸುಂದರಿಯನ್ನು ಕರಕೊಂಡು ಬಂದು ರಾಮಪುರಕ್ಕೆ ಕಳಿಸುವ ದಕ್ಕಾಗಿ ಕೃಷ್ಣರಾಯನಿಗೆ ಪತ್ರ ಬರೆದನು, ವಿನಾಯಕನಿಗಿಂತ ಮೊದಲು ಯಮುನೆ ಯು ದಿವ್ಯಸುಂದರಿಯನ್ನು ಕರಕೊಂಡು ಬರಬೇಕೆಂದು ಕೃಷ್ಣರಾಯನಿಗೆ ಗಂಟು ಬಿದ್ದಿದ್ದಳು. ಅದೇ ಸಮಯದಲ್ಲಿ ವಿನಾಯಕನ ಪತ್ರವು ಬಂದ ಕೂಡಲೆ ಕೃಷ್ಣ ರಾಯನು ಯಮುನೆಯ ಹೇಳಿಕೆಯಿಂದ ಇಬ್ಬರ ಪ್ರಪಂಚಕ್ಕೆ ಬೇಕಾದ ಸಾಮಾನು ಗಳನ್ನು ಸಿದ್ಧ ಪಡಿಸಿ ಅವನ್ನು ಮುಂದಾಗಿಯೇ ರಾಮಪುರಕ್ಕೆ ಕಳಿಸಿದನು, ಮತ್ತು ಯಮುನೆಯನ್ನು ಕರಕೊಂಡು ಕಿಸನಗಡಕ್ಕೆ ಬಂದನು. ಅಲ್ಲಿ ನಾಲ್ಕು ದಿವಸವಿದ್ದು ಚಿಂತಾಮಣಿರಾಯನ ಆಜ್ಞಾನುಸಾರ ದಿವ್ಯಸುಂದರಿಯನ್ನು ಕರಕೊಂಡು ರಾಮ ಪುರಕ್ಕೆ ಬಂದನು. ಅವನು ಬರುವದಕ್ಕಿಂತ ಮೊದಲೇ ವಿನಾಯಕನು ಸ್ಥಳ ಮೊದ ಲಾದದ್ದನ್ನು ಗೊತ್ತು ಮಾಡಿಟ್ಟಿದ್ದನು. ಯಮುನೆಯು ನಾಲ್ಕು ದಿವಸ ರಾಮಪುರದಲ್ಲಿದ್ದು,