ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ನೆಯ ಪ್ರಕರಣ- ವಸಂತನ ಕಾರಸ್ಥಾನ, ೧ct

  • * * * - */*/yrh/~r////

ದಿವ್ಯಸುಂದರಿಗೆ ಸಂಸಾರದ ಪರಿಚಯ ಮಾಡಿಕೊಟ್ಟು ನಂತರ ಕೃಷ್ಣ ರಾಯನೊಡನೆ ಮುಂಬಯಿಗೆ ಹೊರಟುಹೋದಳು. - ಸಂಸಾರಭಾರವು ಒಮ್ಮೆಲೆ ಬಿದ್ದದ್ದರಿಂದಲೂ, ಇಷ್ಟು ದಿವಸ ವಿನೋದ-ವಿಶ್ರಾಂತಿ ಗಳಿಂದ ಕಾಲ ಕಳೆದದ್ದರಿಂದಲೂ ಈಗ ಮನೆಯ ಎಲ್ಲ ಕೆಲಸಮಾಡಲಿಕ್ಕೆ ದಿವ್ಯಸುಂದ ರಿಗೆ ತೊಂದರೆಯಾದೀತೆಂದು ವಿನಾಯಕನು ಅಡಿಗೆ ಮಾಡುವದರ ಸಲುವಾಗಿ ಒಬ್ಬ ನವಕರನನ್ನು ಗೊತ್ತು ಮಾಡಿದ್ದನು; ಆದರೆ ಆ ವ್ಯವಸ್ಥೆಯು ದಿವ್ಯಸುಂದರಿಯ ಮನ ಸ್ಸಿಗೆ ಬರಲಿಲ್ಲ. ಅವಳು ಭಾಂಡೆ ಮೊದಲಾದ ಸಾಮಾನುಗಳನ್ನು ತಿಕ್ಕುವದಕ್ಕಾಗಿ ಒಬ್ಬ ಮೇಲಕರಣಿಯನ್ನು ನವಕರಿಗೆ ಇಟ್ಟು ಕೊಂಡು ಉಳಿದ ಎಲ್ಲ ಕೆಲಸವನ್ನು ತಾನೇ ಸ್ವತಃ ಮಾಡಹತ್ತಿದಳು. ಮೊದಲು ಅವಳಿಗೆ ಪಾಕಜ್ಞಾನವು ಅಷ್ಟಕ್ಕಷ್ಟೇ ಇದ್ದಿತು; ಆದರೆ ಮುಂಬಯಿಯಲ್ಲಿ ಒಂದು ತಿಂಗಳು ಪತಿಗೃಹದಲ್ಲಿದ್ದಾಗ ಅನೇಕ ತರದ ಪಾಕ ವನ್ನು ಸಿದ್ಧ ಮಾಡುವ ಶಿಕ್ಷಣವನ್ನು ಯಮುನೆಯ ಕಡೆಯಿಂದ ಕಲಿತಿದ್ದಳು, ಉತ್ತಮ ಬುದ್ಧಿಯೂ, ಪತಿ ಚಿತ್ತ ಸಂತುಷ್ಟ ಮಾಡುವ ವಿಲಕ್ಷಣವಾದ ಉತ್ಸುಕತೆಯೂ ಇದ್ದದ್ದ ರಿಂದ ವಿನಾಯಕನಿಗೆ ಅತಿಶಯ ರುಚಿಕರವಾದ ಆಹಾರವು ಸಿಗಹತ್ತಿತು, ಪ್ರಪಂಚದ ಸಲುವಾಗಿ ಕಾರಖಾನೆಯ ಕಡೆಗೆ ಸ್ವಲ್ಪ ಲಕ್ಷವು ಕಡಿಮೆಯಾದೀತೆಂದು ವಿನಾಯಕನಿಗೆ ಮೊದಲು ಭೀತಿಯಾಗಿದ್ದಿತು, ಆದರೆ ದಿವ್ಯಸುಂದರಿಯು ಪ್ರಪಂಚದ ಸಲುವಾಗಿ ವಿನಾ ಯಕನಿಗೆ ಕಡ್ಡಿಯಷ್ಟಾದರೂ ಚಿಂತೆಯಾಗದಂತೆ ಪ್ರಪಂಚದ ವ್ಯವಸ್ಥೆಯನ್ನಿಟ್ಟಳು. ಮೆಲ್ಲಮೆಲ್ಲನೆ ಕಾರಖಾನೆಯೊಳಗಿನ ಎಲ್ಲ ಜನರಿಗೆ ದಿವ್ಯಸುಂದರಿಯ ಪರಿಚಯವಾಯಿ ತು, ಅವಳ ಸದಾಚರಣೆ, ಪ್ರೇಮಲವೃತ್ತಿ, ದೀನದಯೆ ಮೊದಲಾದ ಗುಣಗಳನ್ನು ನೋಡಿ, ಪ್ರತ್ಯಕ್ಷ ಮೃಡಾಣಿಯೇ ದಿವ್ಯಸುಂದರಿ ನಾಮದಿಂದ ಅವತರಿಸಿರುವಳೆಂದು ಎಲ್ಲರಿಗೂ ತೋರಹತ್ತಿತು. ತನ್ನ ಕೂಡ ನಡಕೊಳ್ಳುತ್ತಿದ್ದ ದಿವ್ಯಸುಂದರಿಯ ವರ್ತನ ವನ್ನು ನೋಡಿ ವಿನಾಯಕನು ಹರ್ಷತುಂದಿಲನಾದನು. ಕೇವಲ ಪೂರ್ವಜನ್ಮದ ಪುಣ್ಯಸಂಚಯದಿಂದ ಇಂಥ ಸುಸ್ವಭಾವದ ಪತ್ನಿಯು ದೊರಕಿದಳೆಂದು ನೆನಿಸಿ, ಅವನು ಪರಮೇಶ್ವರನ ಬಗ್ಗೆ ಕೃತಜ್ಞತೆಯನ್ನು ಪ್ರಕಟೀಕರಿಸಿದನು. ಈ ಪ್ರಕಾರವಾಗಿ ಈ ಸುಖದಾಂಪತ್ಯದ ಸಂಸಾರರಥವು ಮೂರು ವರ್ಷದವರೆಗೆ ನಿರ್ವಿಘ್ನವಾಗಿ ನಡೆಯಿತು. ಈ ಅವಧಿಯಲ್ಲಿ ದಿವ್ಯಸುಂದರಿಯು ಒಬ್ಬ ಸುಂದರ ಪುತ್ರನನ್ನು ಹಡೆದಿದ್ದಳು. ತನ್ನ ಹೊಟ್ಟೆಯ ಮಕ್ಕಳು ಬದುಕದ್ದರಿಂದ ಮಧುರೆಯು ದಿವ್ಯಸುಂದರಿಯ ಮಗನನ್ನು ತನ್ನ ಹತ್ತರ ಇಟ್ಟು ಕೊಂಡಿದ್ದಳು. ಯಮುನೆಗೆ ಎರಡು ಮಕ್ಕಳು ಇದ್ದವು. ಅವೂ ಒಮ್ಮೊ ಮೈ ಮಧುರೆಯ ಹತ್ತರ ಇರುತ್ತಿದ್ದವು, ಮಧುರೆಯ ಪೂರ್ವದ ವೈಭವದ ಅಭಿಮಾನವು ಸಮೂಲವಾಗಿ ನಾಶವಾದದ್ದರಿಂದ ಚಿಂತಾಮಣಿರಾಯನಿಗೆ ಆನಂದವಾಯಿತು. ಚಿಂತಾ ಮಣಿರಾಯನ ವೃದ್ದಾಪ್ಯಕಾಲದ ದಿವಸಗಳು ಒಳ್ಳೇ ಸುಖದಿಂದ ಕಳೆಯುತ್ತಿದ್ದವು. ಈಗ ತನ್ನ ಸಂಸಾರವೆಂಬ ಕಲ್ಪನೆಯು ಅವನಿಗಿಲ್ಲದಿದ್ದರೂ, ರಾಮರಾಯನ ಸುಖ