ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

113 MMwwwrory r// - *

  • /*/-

೮ನೆಯ ಪ್ರಕರಣ- ವಸಂತನ ಕಾರಸ್ಥಾನ. •••••••••••• ಮುಂದೆ ಕಳಿಸಿದ್ದಾರೆ. ಇಲ್ಲಿಂದ ವರಂಗಲ್ಲದ ಸ್ಟೇಶನ್ನು ಸಮೀಪವಾಗಿರುವದರಿಂದ ಹಾದಿಯಲ್ಲಿ ಅವರ ಭೆಟ್ಟಿಯಾಗಲಿಕ್ಕೆ ಸಂಶಯವಿಲ್ಲ. ಇದೇ ಅವರು ಪತ್ರ ಕೊಟ್ಟಿ ದ್ದಾರೆ. ” ಎಂದನ್ನುತ್ತ ಪತ್ರವನ್ನು ದಿವ್ಯಸುಂದರಿಯ ಕೈಯಲ್ಲಿ ಕೊಟ್ಟನು. ವಿನಾಯಕ ನಿಗೆ ವಿಶೇಷ ಅಜಾರಿಯಾಗಿದೆಯೆಂಬುವದನ್ನು ಕೇಳಿದ ಕೂಡಲೆ ದಿವ್ಯಸುಂದರಿಯ ಕೈಕಾಲೇ ಹೋದವು. ಅವಳು ಆ ಪತ್ರದ ಮೇಲಿನ ಆವರಣವನ್ನು ತೆಗೆದೊಗೆದು, ಪತ್ರವನ್ನು ಓದಲಿಕ್ಕೆ ಆರಂಭಮಾಡಿದಳು. ಪತ್ರದಲ್ಲಿ ಮುದುಕನು ಹೇಳಿದ ಸಂಗ ತಿಯೇ ಇದ್ದಿತು. ಅಕ್ಷರಗಳಾದರೂ ವಿನಾಯಕನ ಅಕ್ಷರಗಳಂತೆಯೇ ಇದ್ದವು. ಆ ಪರಿಚಯದ ಅಕ್ಷರವನ್ನು ನೋಡಿ, ಗಂಡನ ವ್ಯಾಧಿಯ ಸಂಗತಿಯನ್ನು ಓದಿ ಅವಳ ಅವಸ್ಥೆಯು ಒಳ್ಳೇ ಚಮತ್ಕಾರವಾದದ್ದಾಯಿತು. ರೆಕ್ಕೆಯನ್ನು ಕಟ್ಟಿ ಕೊಂಡು ವಿನಾ ಯಕನ ಹತ್ತರ ಹಾರಿಹೋಗಬೇಕೆಂದು ಅವಳು ಆಲೋಚಿಸಿದಳು. ಆದರೆ ಆ ರೀತಿ ಯಿಂದ ಹೋಗುವದು ಮನುಷ್ಯ ಪ್ರಾಣಿಗೆ ಅಸಾಧ್ಯವೆಂಬುವದು ಲಕ್ಷದಲ್ಲಿ ಬಂದ ಕೂಡಲೆ ಅವಳು ತೀರ ಖಿನ್ನಳಾದಳು. ಅವಳು ಆ ಪತ್ರವನ್ನು ಮಧುರೆಗೆ ತೋರಿಸಿ, ಮುಂದೇನು ಮಾಡಬೇಕೆಂಬ ಬಗ್ಗೆ ಅವಳಿಗೆ ವಿಚಾರಿಸಿದಳು, ಮಧುರೆಯಾದರೂ ಏನು ಮಾಡುವಳು ? ರಾಮರಾಯನು ಮನೆಯಲ್ಲಿ ಇಲ್ಲದ್ದರಿಂದ ದಿವ್ಯ ಸುಂದರಿಗೆ ಯಾರ ಸಹಾಯವನ್ನು ಕೊಡಬೇಕೆಂಬುವದು ಅವಳಿಗೆ ತಿಳಿಯಲಿಲ್ಲ. ಮನುಷ್ಯನ ಮೇಲೆ ಯಾವದೊಂದು ದುರ್ಘಟಸ್ರ ಸಂಗವು ಬಂದಿತೆಂದರ ಆರ ಬುದ್ದಿ ಯು ಕುಂಠಿತವಾಗಿ ಹೋಗುತ್ತದೆ, ಈ ಪ್ರಕಾರ ಮಧುರಾ-ದಿವ್ಯ ಸುಂದರಿಯರು ಚಿಂತೆಮಾಡುತ್ತಿರುವಾಗ ಆ ಮುದುಕನು ತನ್ನ ಜಿಹ್ವಾಯಂತ್ರಕ್ಕೆ ಕೀಲಿಯನ್ನು ಕೊಟ್ಟನು. ಅವನು ದಿವ್ಯಸುಂದರಿಯ ದುಃಖವನ್ನು ಬೆಳಿಸಿ ಬೇಗನೆ ವಿನಾಯಕನಿಗೆ ಭೆಟ್ಟಿಯಾಗಬೇಕೆಂಬ ಆತುರವನ್ನು ಬೆಳಿಸಿದನು. ಅವನು ಗಂಭೀರ ವಾಗಿ:-( ಅಹೋ ದಿವ್ಯಸುಂದರಿಬಾಯಿಸಾಹೇಬರೇ, ಇದಕ್ಕೆ ಇಷ್ಟು ವಿಚಾರವ ಯಾತಕ್ಕೆ? ರಾಮರಾಯರು ಮನೆಯಲ್ಲಿ ಇಲ್ಲದಿದ್ದರೇನಾಯಿತು, ಅವರಿಗೊಂದು ಪತ್ರವನ್ನು ಬರೆದಿಟ್ಟು ನನ್ನ ಸಂಗಡ ನಡೆಯಿರಿ, ಹಿಂದಿನಿಂದ ರಾಮರಾಯರೂ ಮುಂಬಯಿಗೆ ಬಂದರಾಯಿತು, ಇದರಲ್ಲಿ ತೊಂದರೆಯಾದರೂ ಯಾವದದೆ ? ಈಗ. ಸಣ್ಣ ಹುಡುಗರು ಕೂಡ ಆಗಗಾಡಿಯಲ್ಲಿ ಕುಳಿತು ಕಾಶಿಯಿಂದ ರಾಮೇಶ್ವರಕ್ಕೆ ಹೋಗುತ್ತಾರೆ, ನೀವು ನೋಡಿದರೆ ಓದಿದವರು, ಅಲ್ಲದೆ ನಾನು ನಿಮ್ಮ ಸಂಗಡಲೇ ಇರುತ್ತೇನೆ ರಾಮರಾಯರ ಆಜ್ಞೆಯಿಲ್ಲದೆ ಹೇಗೆ ಹೋಗಬೇಕೆಂದು ನಿಮಗೆ ಚಿಂತೆ ಯಾಗಿರಬಹುದು; ಆದರೆ ಒಮ್ಮೊಮ್ಮೆ ಪ್ರಸಂಗಾನುಸಾರ ಹಿರಿಯರ ಅಪ್ಪಣೆಯಿಲ್ಲದೆ ಹೋಗಬೇಕಾಗುತ್ತದೆ. ವಿನಾಯಕರಾಯರು ನೋಡಿದರೆ ಬೇಗನೆ ಕರಕೊಂಡು ಬರಲಿಕ್ಕೆ ಹೇಳಿದ್ದಾರೆ. ಈಗ ನೀವು ಲಗು ಹೊರಟರೆ ರಾಜಮಹೇಂದ್ರೆ ಸ್ಟೇಶನ್ನ ದಲ್ಲಿ ಅವರಾನಿನ್ನಾ ಭೆಟ್ಟಿಯಾಗಬಹುದು. ” ಎಂದನು.