ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆನೆಯ ಪ್ರಕರಣ -ವಸಂತನ ಕಾರಸ್ಥಾನ. Ada MMANov wooooooooooooooooooooooooooommmmmmmm ಯಲ್ಲಿ ' ದಿವ್ಯಸುಂದರಿ ' ಯೆಂದು ಬರೆದಿದ್ದು, ಅದರ ಕೆಳಗೆ « ಘಳಿಗೆ ಆಕೆಗೆ Fa: ” ಎಂಬ ಸುಂದರ ವಾಕ್ಯವು ಬರೆದಿದ್ದಿತು. ಬಂದ ಪಾಕೇಟು ದಿವ್ಯಸುಂದರಿಯು ಉಪಯೋಗಿಸುವಂಥ ಪಾಕೇಟಿನಂತಹದೇ ಇದ್ದದ್ದರಿಂದಲೂ, ಪಾಕೇನ ಮೇಲ ಕ್ಷರಗಳು ಅವಳಂಥಹವೇ ಇದ್ದದ್ದರಿಂದಲೂ ರಾಮರಾಯನು ಬಂದ ಪಾಕೇಟು ದಿವ್ಯಸುಂದರಿಯದೇ ಎಂದು ನಿರ್ಧರಿಸಿದನು; ಆದರೆ ಪಾಕೇಟಿನ ಮೇಲೆ ಮದ್ರಾಸು ಛಾಪು ಇರುವ ಕಾರಣವೇನೆಂದಾಲೋಚಿಸಿ ಮತ್ತೆ ಅವನು ಗೊಂದಲದಲ್ಲಿ ಬಿದ್ದನು. ಇಷ್ಟರಲ್ಲಿ ಮಧುರೆಯು ಬಂದು ಪತಿಯ ಕೈಯೊಳಗಿದ್ದ ಲಖೋಟಿಯ ಕಡೆಗೆ ನೋಡಿ:- ದಿವ್ಯಸುಂದರಿಯ ಪತ್ರವು ಬಂದಂತೆ ತೋರುತ್ತದೆ, ” ಎಂದಳು. ಆಗ ರಾಮರಾಯನು:- ಹೌದು, ಪತ್ರವು ಅವಳದೇ ಇರುತ್ತದೆ, ಆದರೆ ಅದರ ಮೇಲೆ ಮದ್ರಾಸದ ಛಾಪು ಇರುವದಲ್ಲ! " ಎನ್ನಲು ಮಧುರೆಯು ಬೆರಗಾಗಿ • ಏನು! ಮದ್ರಾಸ, ” ಎಂದನ್ನಲು ರಾಮರಾಯನು : ಹೌದು ' ಎಂದುತ್ತರಗೊಟ್ಟು, ಪತ್ರದ ಮೇಲಿನ ಆವರಣವನ್ನು ಗುರ್ತಿಗಿಟ್ಟು ಪತ್ರವನ್ನು ಓದಲಿಕ್ಕೆ ಆರಂಭವಾಡಿದನು; ಆದರೆ ಪತ್ರದೊಳಗಿನ ಪ್ರತಿಯೊಂದು ಶಬ್ದಗಳು ಅವನ ಹೃದಯವನ್ನು ಭೇದಿಸಹತ್ತಿ ದವು. ಬರುಬರುತ್ತ ಅವನ ಮುಖಚಿನ್ನವು ಬದಲಿಸಹತ್ತಿತು. ಕಡೆಗೆ ಅವನು ಕೈಯಿಂದ ಹಣೆಹಣೆ ಹೊಡೆದುಕೊಂಡು ಕುಳಿತಿದ್ದ ಖುರ್ಚಿಯ ಮೇಲೆ ಹಾಗೇ ಬಿದ್ದು ಕೊಂಡನು. ಈ ಸ್ಥಿತಿಯನ್ನು ನೋಡಿ ಮಧುರೆಯು ತೀರ ಹುಚ್ಚಿಯಂತಾದಳು. ಅವಳು ತ್ವರಿತವಾಗಿ ರಾಮರಾಯನ ತಲೆಗೆ ನೀರು ತಟ್ಟಿ, ಹತ್ತರ ಕುಳಿತು ಗಾಳಿ ಯನ್ನು ಹಾಕಹತ್ತಿದಳು. ಸ್ವಲ್ಪ ವೇಳೆಯಾದ ಮೇಲೆ ರಾಮರಾಯನಿಗೆ ಎಚ್ಚರ ಹುಟ್ಟಲು ಮಧುರೆಯು ಕಣ್ಣೀರು ಒರಿಸಿಕೊಳ್ಳುತ್ತ ಅಂಥಹದೇನು ಆ ಪತ್ರದಲ್ಲಿ ಅಶುಭವಾರ್ತೆಯದೆ? ” ಎಂದು ಕೇಳಿದಳು. ಆಗ ರಾಮರಾಯನು ದೀರ್ಘನಿಶ್ವಾಸವನು ಬಿಟ್ಟು “ ನೀನೇ ಆ ಪತ್ರವನ್ನೊದು, ಅಂದರೆ ನಿನಗೆಲ್ಲ ತಿಳಿಯುತ್ತದೆ.” ಎಂದನು. ರಾಮರಾಯನು ಹೀಗೆ ಹತಾಶಾಸ್ವರದಿಂದ ಮಾತಾಡಿದ್ದರಿಂದ ಮಧುರೆಯು ಗದಗದ ನಡುಗಿ, ಕೆಳಗೆ ಬಿದ್ದ ಕಾಗದಗಳನ್ನೆಲ್ಲ ದುಂಡಗೆ ಮಾಡಿ ಅದರಲ್ಲಿ ರಾಮರಾಯನು ಓದಿದ ಪತ್ರವನ್ನು ಹುಡುಕಹತ್ತಿದಳು. ಅಷ್ಟರಲ್ಲಿ ಅವಳಿಗೆ ಒಂದು ಫೋಟೋ ತೆಗೆದ ಕಾಗದವು ಸಿಕ್ಕಿತು. ಕೂಡಲೆ ಅವಳು ಅದನ್ನು ರಾಮರಾಯನ ಕೈಯಲ್ಲಿ ಕೊಟ್ಟು ( ಇದೇನು ಯಾರ ಪೋಟೋ ? ” ಎಂದಳು. ರಾಮರಾಯನು ಘೋರ ಚಿಂತಾಗ್ರಸ್ತನಾಗಿ ಹೋದದ್ದರಿಂದ ಪತ್ರದ ಸಂಗಡ ಏನೇನು ಇರುತ್ತವೆ, ಎಂಬದರ ಕಡೆಗೆ ಅವನ ಲಕ್ಷವು ಹೋಗಿದ್ದಿಲ್ಲ. ಮಧುರೆಯು ಕೊಟ್ಟ ಮೋಟೋವನ್ನು ನೋ ಡಿದ ಕೂಡಲೆ ಅವನ ಕಣ್ಣುಗಳು ಬೆಂಕಿಯಂತೆ ಕೆಂಪಗಾದವು. ಆ ಫೋಟೋವನ್ನು ಏನು ಸುಡಲೋ, ಹರಿಯಲೋ, ಕಾಲೊಳಗೆ ಹಾಕಿ ತುಳಿಯಲೋ ಎಂದಂದು ನರಿ ನರಿ ಹಲ್ಲುಕಡಿಯಹತ್ತಿದನು, ಆದರೆ ಅಷ್ಟರಲ್ಲಿ ಅವನಿಗೆ ಏನು ತಿಳಿಯಿತೋ ಏನೋ, 15