ವಿಷಯಕ್ಕೆ ಹೋಗು

ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hme ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. wwwsw ಅವನು:- ಇದೇ ನರಾಧಮನೇ ನಮ್ಮ ಕುಲಕ್ಕೆ ಕಲಂಕಹಚ್ಚಿದನು!” ಎಂದ ನ್ನುತ್ತ ಆ ಪೋಟೋವನ್ನು ವ್ಯವಸ್ಥೆಯಿಂದ ಆ ಪಾಕೇಟಿನಲ್ಲಿ ಇಟ್ಟನು. ಆ ಇಬ್ಬರಿಗೂ ಈ ಪ್ರಕಾರ ಚಮತ್ಕಾರಿಕ ಸ್ಥಿತಿಯು ಪ್ರಾಪ್ತವಾಗಬೇಕಾದರೆ ಆ ಪತ್ರದಲ್ಲಿ ಇದ್ದದ್ದಾದರೂ ಏನೆಂಬದನ್ನು ತಿಳಿಯಬೇಕೆಂದು ವಾಚಕರಿಗೆ ಇಚ್ಛೆ ಯಾಗುವದು ಸಾಹಜಿಕವಾಗಿದೆ, ಆದ್ದರಿಂದ ಆ ಪತ್ರದಲ್ಲಿಯ ಅಭಿಪ್ರಾಯವನ್ನು ಯಥಾವತ್ ಕೆಳಗೆ ಕೊಟ್ಟಿರುತ್ತೇವೆ. ಶ್ರೀ | ನಂ. ೨೧, ಮಾವುಂಟರೋಡ ಮದ್ರಾಸ, ತಾರೀಖು * * * ಪರಮ ಪ್ರಿಯ ರಾಮರಾಯರಿಗೆ, ಭಗಿನೀ ದಿವ್ಯಸುಂದರಿಯ ಸಾಷ್ಟಾಂಗಪ್ರಣಿಪಾತಗಳು, ಮುಂದಿನ ಸಂಗತಿ ಯನ್ನು ಓದಿ ನಿಮ್ಮ ಮನಸಿಗೆ ದುಃಖವೆನಿಸೀತು; ಆದರೆ ಅದಕ್ಕೆ ಉಪಾಯವಿಲ್ಲ, ನಾನು ಈಗ ತಮ್ಮ ಮತ್ತು ವಿನಾಯಕರಾಯನ ಮನೆಯನ್ನು ಬಿಟ್ಟೆನು, ಈ ಬಗ್ಗೆ ನನಗೆ ಚಿಂತೆಯಿಲ್ಲ. ನಾನು ಉಭಯವಂಶಕ್ಕೆ ಕಲಂಕ ಹಚ್ಚಿದೆನೆಂದು ನೀವು ಅಂದೀರಿ; ಆದರೆ ಅದಕ್ಕೆ ನನ್ನ ಜವಾಬದಾರಿಯಿಲ್ಲ. ಚಿಕ್ಕಂದಿನಿಂದ ನನಗೆ ದೊರೆತ ಶಿಕ್ಷಣದಿಂದ ನನ್ನ ಮನಸ್ಸಿನ ಮೇಲೆ ಯಾವ ಪರಿಣಾಮವಾಗಿದ್ದಿತೋ ಆ ಪರಿಣಾಮದ ದೃಷ್ಯ ಫಲವು ನನಗೆ ನಿಜವಾಗಿ ಈಗ ದೊರೆತಂತೆ ಕಾಣಿಸುತ್ತದೆ. ನನ್ನ ಅಧಃಪತನವಾಯಿ ತಂದು ನೀವು ಅಂದೀರಿ, ಆದರೆ ನನಗೆ ಮಾತ್ರ ಹಾಗೆ ತೋರುವದಿಲ್ಲ, ಇಷ್ಟೆ ಯಾಕೆ, ನನಗೆ ನನ್ನ ಆಯುಷ್ಯದ ಸಾರ್ಥಕತೆಯು ಈಗ ಆರಂಭವಾಯಿತೆಂದು ತೋರುತ್ತದೆ. ಮೊದಲಿನಿಂದಲೆ ನನ್ನ ಮನಸ್ಸು ವಸಂತರಾಯರಲ್ಲಿಯೇ ಬೇರುಗೊಂದಿ ದ್ವಿತು. ನೀವೂ, ತಂದೆಯವರೂ ಈ ಬಗ್ಗೆ ಸ್ವಲ್ಲೂ ವಿಚಾರಿಸದೆ, ಬಲಾತ್ಕಾರದಿಂದ ವಿನಾ ಯಕರಾಯರೊಡನೆ ನನ್ನ ಲಗ್ನ ಮಾಡಿಕೊಟ್ಟರೆ, ಅದರ ಪರಿಣಾಮವೇ ಇದೆಲ್ಲ! ವಿಚಾರಿಸಿನೋಡಿದರೆ ನನ್ನ ಪತಿಗಳು ವಸಂತರಾಯರೇ ಇರುತ್ತಾರೆ, ಇಲ್ಲಿಯವರೆಗೆ ಅವರನ್ನಗಲಿದ ನಾನು ಇಂದು ದೇವೀ ಕೃಪೆಯಿಂದ ಅವರನ್ನು ಕೂಡಿರುವೆನು, ಈ ಬಗ್ಗೆ ವಸಂಶರಾಯರೂ, ನಾನೂ ಕೂಡಿಯೇ ಕುಳಿತು ತಗಿಸಿದ ಫೋಟೋದ ಒಂದು ಪ್ರತಿಯನ್ನು ತಮ್ಮ ಕಡೆಗೆ ಕಳಿಸಿರುತ್ತೇನೆ. ನಿಮಗೆ ಇನ್ನು ಅಲ್ಪಸ್ವಲ್ಪ ಬರಬೇಕಾದ ದುಡ್ಡಲ್ಲ ವಸಂತರಾಯರ ಕಡೆಗಿದ್ದಿತು, ಅದನ್ನು ನಾನೇ ಯುಕ್ತಿಯಿಂದ ಮತ್ತೊಂದು ಸ್ಥಳದಲ್ಲಿ ಇಟ್ಟಿರುತ್ತೇನೆ ಅದರೊಳಗೆ ಎರಡುಲಕ್ಷ ರೂಪಾಯಿ ನೋಟುಗಳು ಪೇಟೆ ಯಲ್ಲಿ ಖರ್ಚಾಗುವದು ಶಕ್ಯವಿಲ್ಲದ್ದರಿಂದ ಅವುಗಳನ್ನು ವಸಂತರಾಯರು ಈ ಪೂರ್ವ ದಲ್ಲಿಯೇ ನನ್ನ ಕಡೆಗೆ ಕೊಟ್ಟಿದ್ದರು. ಅವುಗಳನ್ನು ಬರುವಾಗ ನಾನು, ಮಲಗುವ ಫಲಂಗದ ಗಾದಿಯ ಕೆಳಗೆ ಇಟ್ಟು ಬಂದಿರುತ್ತೇನೆ. ಹಿಂದಕ್ಕೆ ತಂದೆಯವರ ಗಡಿಯಾ