ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MA ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. Mwww ಕೂಡ ದಿವ್ಯಸುಂದರಿಗೆ ಕುಲಕಲಂಕಿನಿಯೆಂದನ್ನು ವನು; ಅಂದ ಮೇಲೆ ರಾಮರಾಯ ನಂಥ ಸಾಧಾರಣ ಮನುಷ್ಯನು ಹಾಗೆ ಭಾವಿಸುವದರಲ್ಲಿ ಆಶ್ಚರ್ಯವೇನು | ದಿವ್ಯಸುಂದರಿಯ ಆ ಪತ್ರದಿಂದ ಅವನ ಸ್ಥಿತಿಯು ನಿಜವಾಗಿ ಹುಚ್ಚನಂತಾಗಿದ್ದಿತು, ಜಗತ್ತಿನಲ್ಲಿ ಮುಖವನ್ನು ತೋರಿಸಲಿಕ್ಕೆ ಕೂಡ ಮಾರ್ಗವು ಉಳಿಯಲಿಲ್ಲವೆಂದು ಆವನಿಗೆ ಕ್ಷಣಕ್ಷಣಕ್ಕೆ ತೋರಹತ್ತಿತು, ಇಲ್ಲಿಯವರೆಗೆ ದಿವ್ಯಸುಂದರಿಯ ವಿಷಯ ವಾಗಿ ಮಧುರೆಯ ಮನಸ್ಸು ಶುದ್ಧ ಮಯವೂ, ಆದರಪೂರ್ಣವೂ ಆಗಿದ್ದಿತು; ಆದರೆ ಈಗ ಅವಳ ಮನಸ್ಸಿನಲ್ಲಿ ದಿವ್ಯಸುಂದರಿಯ ವಿಷಯವಾಗಿ ತಿರಸ್ಕಾರವು ಹುಟ್ಟಿತು. ಅವಳಿಗೆ ದಿವ್ಯಸುಂದರಿಯ ಪ್ರತ್ಯೇಕ ಪೂರ್ವಾಚರಣೆಗಳ ಬಗ್ಗೆ ಒಂದರಮೇಲೊಂದು ಸಂಶಯಗಳು ಬರಲಿಕ್ಕೆ ಹತ್ತಿದವು. ಹೀಗೆ ಅವಳಿಗೆ ಸಂಶಯಪಿಶಾಚಿಯು ಗಂಟುಬಿದ್ದ ಕೂಡಲೆ ಅವಳ ಮನಸ್ಸಿನ ವಿಕಾರಗಳು ವಿಪರೀತವಾದವು, ಅವಳು ರಾಮರಾಯ ನನ್ನು ಕುರಿತು:-( ನೀವು ಬರುವ ಹೊರ್ತು ಹೋಗಬೇಡೆಂದು ನಾನು ದಿವ್ಯಸುಂದ ರಿಗೆ ಎಷ್ಟೋ ಸಾರೆ ಹೇಳಿದೆನು; ಆದರೆ ಅವಳು ಇಂಥ ಕೆಲಸವನ್ನು ಮಾಡುವವಳಾದ ದ್ದರಿಂದ ನನ್ನ ಮಾತು ಕೇಳದೆ ಆ ಮುದುಕನ ಸಂಗಡ ಹೊರಟುಹೋದಳು. ನಂತರ ಸ್ವಲ್ಪ ಹೊತ್ತು ವಿಚಾರಮಾಡಿ:-( ನನಗೆ ಆ ಮುದುಕನ ಬಗ್ಗೆ ಆಗಲೇ ಸಂಶಯವು ಬಂದಿತು, ಇದನ್ನು ನಾನು ಹೇಳಬೇಕೆನ್ನುವಷ್ಟರಲ್ಲಿ ಅವಳು ಆ ಮುದು ಕನನ್ನು ಏಕಾಂತಸ್ಥಳಕ್ಕೆ ಕರಕೊಂಡು ಹೋಗಿ ವಾತಾಡಹತ್ತಿದಳು. ” ನಂತರ ಮತ್ತೆ ಸ್ವಲ್ಪ ಹೊತ್ತು ನಿಂತು:- ಇತ್ತಕಡೆಗಂತೂ ದಿವ್ಯಸುಂದರಿಯು ಬಾಗಿಲು ಮುಚ್ಚಿಕೊಂಡು ಎಷ್ಟೋ ಸಾರೆ ಒಳಗೆ ಕುಳಿತುಕೊಳ್ಳುತ್ತಿದ್ದಳು, ನಾನು ಹೀಗೇಕೆಂದು ಕೇಳಿದರೆ “ ದೇವರ ಪ್ರಾರ್ಥನೆ ಮಾಡುತ್ತೇನೆ. ' ಎಂದು ಹೇಳುತ್ತಿದ್ದಳು. ದೇವರ ಪ್ರಾರ್ಥನೆ ಎಲ್ಲಿಯದು! ಗುಪ್ತವಾಗಿ ಇಂಥ ಪ್ರೇಮಪತ್ರಗಳನ್ನು ಬರೆಯುವದಕ್ಕಾ ಗಿಯೇ, ಹೀಗೆ ಒಂದಲ್ಲ ಎರಡಲ್ಲ, ನೂರಾರು ಪುರಾವೆಗಳನ್ನು ರಾಮರಾಯನಿಗೆ ಹೇಳಿದಳು, ಮನುಷ್ಯನ ಮನಸ್ಸೆ೦ದರೆ ಇದೊಂದು ಚಮತ್ಕಾರವಾದ ವಸ್ತುವು. ಆ ಮನಸ್ಸಿಗೆ ಒಮ್ಮೆ ಯಾವದೊಂದು ವಸ್ತುವು ಒಳ್ಳೇದೆಂದು ಮನವರಿಕೆಯಾಯಿ ತಂದರೆ ಸಾಕು, ಆ ವಸ್ತುವು ಪ್ರತ್ಯಕ್ಷ ಪಿಶಾಚಿಯಾಗಿದ್ದರೂ ಅದನ್ನು ಒಯ್ದು ಬಹ್ನ ಪದದ ಮೇಲೆ ಕೂಡ್ರಿಸುತ್ತದೆ; ಆದರೆ ಅದೇ ಮನಸ್ಸಿಗೆ ಒಮ್ಮೆ ಯಾವದೊಂದು ವಸ್ತುವು ಕೆಟ್ಟದ್ದೆಂದು ನಂಬಿಗೆಯಾದರೆ ತೀರಿತು, ಆ ವಸ್ತುವು ಪ್ರತ್ಯಕ್ಷ ಬ್ರಹ್ಮನಿದ್ದರೂ, ಅವನನ್ನು ತೀರ ಅಧೋಸ್ಥಾನದಲ್ಲಿ ಒಯ್ದು ಕೂಡ್ರಿಸುತ್ತದೆ. ಈ ನ್ಯಾಯದಂತೆ ಈಗ ಮಧುರಾ-ರಾಮರಾಯರಿಗೆ "ದಿವ್ಯಸುಂದರಿಯ ಪ್ರತಿಯೊಂದು ಆಚರಣೆಯ ಸಲುವಾಗಿ ಸಂಶಯಗಳು ತಲೆದೋರಿದವು. ದಿವ್ಯಸುಂದರಿಯು ವಸಂತನ ಬೆನ್ನು ಹತ್ತಿ ಓಡಿ ಹೋದಳು ಎಂಬ ಮಾತು ಬರಬರುತ್ತ ದೃಢವಾಗಹತ್ತಿತು. ಮುಂದೇನು ಮಾಡ ಬೇಕು, ಮುಂದೇನು ಮಾಡಬಾರದು ಎಂಬ ವಿಚಾರದಲ್ಲಿಯೇ ರಾಮರಾಯನ