ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ದಿವ್ಯಸು೦ದರಿ ಅಥವಾ ದೀರ್ಘ ಪ್ರಯತ್ನ, ತೀರಿ ಸ್ವಲ್ಪ ಹೊತ್ತು ವಿಶ್ರಾಂತಿಯು ಸಿಕ್ಕಾಗ ವಿನಾಯಕನು ತೀರ ಏಕಾಂತದಲ್ಲಿ ಈಶ್ವರೀ ಚಿಂತನಮಾಡಹತ್ತಿದನು. ಈಶ್ವರೀ ಚಿಂತನೆಗಾಗಿ ತಾನು ಕಟ್ಟಿಸಿದ ಶಾಂತ ವೂ, ರಮಣೀಯವೂ, ಅದ ಶಿವಾಲಯದಲ್ಲಿ ಹೋಗಿ ಕೂಡಹತ್ತಿದನು. ರಾಮರಾಯನ ಪತ್ರವು ಕೃಷ್ಣರಾಯನಿಗೆ ಸಿಕ್ಕ ಕೂಡಲೆ ಅವನು ಮೊದಲು ಯಮುನೆಯೊಡನೆ ಮುಂಬಯಿಗೆ ಬಂದು, ಅಲ್ಲಿಂದ ಒಬ್ಬನೇ ಕಿಸನಗಡಕ್ಕೆ ಹೊರಟು ಬಂದನು. ಇಲ್ಲಿಯವರೆಗೆ ಅವನಿಗೆ ದಿವ್ಯಸುಂದರಿಯ ಸಂಬಂಧವಾಗಿ ಏನೂ ಸುದ್ದಿಯು ತಿಳಿದಿದ್ದಿಲ್ಲ. ಕಿಸನಗಡಕ್ಕೆ ಬಂದ ಮೇಲೆ ರಾಮರಾಯನು ಅವನಿಗೆ ಎಲ್ಲ ಸಂಗತಿ ಯನ್ನು ಹೇಳಿದನು, ಮತ್ತು ದಿವ್ಯಸುಂದರಿಯ ಪತ್ರವನ್ನೂ, ಪೋಟೋವನ್ನೂ ಅವನ ಕೈಯಲ್ಲಿ ಕೊಟ್ಟನು. ಈ ಸಂಗತಿಯಿಂದ ಕೃಷ್ಣರಾಯನ ಮನಸ್ಸಿನಲ್ಲಿ ಮೊದಲು ವಿನಾಯಕನಂತೆಯೇ ಪರಿಣಾಮವಾಯಿತು; ಆದರೆ ವಿನಾಯಕನ ಮೇಲಿದ್ದ ದಿವ್ಯ ಸುಂದರಿಯ ಆಕೃತಿಮಪ್ರೇಮದ ಚಿತ್ರಪಟವು ಅವನ ಕಣ್ಣಿನ ಮುಂದೆ ಮೂರ್ತಿಮಂತ ವಾಗಿ ನಿಲ್ಲಲು ಅವನ ವಿವೇಕಗೃಹದ ಬಾಗಿಲು ತೆರೆಯಿತು. ಕೂಡಲೆ ಅವನು ಆ ಬಾಗಿಲಿನಿಂದ ಹೊರಬಿದ್ದು ಯೋಗ್ಯ ಮಾರ್ಗ ಹುಡುಕಹತ್ತಿದನು. ಯಾವ ನೀಚರು ವಿನಾಯಕನಂಥ ಚತುರ-ಕರ್ತವ್ಯದಕ್ಷ ಮನುಷ್ಯನಿಗೆ ಕೂಡ ಮೋಸಮಾಡುವದರಲ್ಲಿ ಹಿಂದುಮುಂದು ನೋಡಲಿಲ್ಲವೋ ಅವರಿಗೆ ಇಂಥ ಋಟ್ಟಿ ಪತ್ರವನ್ನು ಬರೆದು ದಿವ್ಯ ಸುಂದರಿಯನ್ನು ಮೋಸಗೊಳಿಸುವದು ಏನು ದೊಡ್ಡಿತ್ತಾದದ್ದು ! ಎಂಬೀ ಶಂಕೆಯು ಕೃಷ್ಣರಾಯನ ತಲೆಯಲ್ಲಿ ಉತ್ಪನ್ನವಾಯಿತು. ಅವನು ಆ ದೃಷ್ಟಿಯಿಂದಲೇ ಎಲ್ಲ ಸಂಗತಿಗಳ ಬಗ್ಗೆ ವಿಚಾರಮಾಡಹತ್ತಿದನು. ವಾಚಕರೇ, ರಾಮರಾಯನ ಮುಖ್ಯ ಪುರಾವೆಗಳೆಂದರೆ ದಿವ್ಯಸುಂದರಿಯ ಗಾದಿಯ ಕೆಳಗೆ ಪ್ರಾಮಿಸರಿ ನೋಟ, ಮುತ್ತಿನ ಸರಪಳಿಯೂ ಸಿಕ್ಕದ್ದೇ ಆಗಿದ್ದವು; ಆದರೆ ದಿವ್ಯಸುಂದರಿಯನ್ನು ಕರಕೊಂಡು ಹೋ ಗುವದಕ್ಕಾಗಿ ಬಂದಿದ್ದ ಮುದುಕನಿಗೆ ಈ ಕೆಲಸಮಾಡಲಿಕ್ಕೆ ಶಕ್ಯವಿದ್ದಿಲ್ಲವೆಂಬುವದು ಯಾತರ ಮೇಲಿಂದ ? ಅವನು ಇತರರ ಕಣ್ಣು ತಪ್ಪಿಸಿ ಈ ಕೆಲಸಮಾಡಲಿಕ್ಕೆ ಬರು ವಂತಿದ್ದಿತು. ಕೃಷ್ಣರಾಯನಾದರೂ ಇದೇ ದೃಷ್ಟಿಯಿಂದ ವಿಚಾರಮಾಡಿದ ಕೂಡಲೆ ಅವನಿಗೆ ದಿವ್ಯಸುಂದರಿಯು ನಿರ್ದೋಷಿಯಿರುತ್ತಾಳೆಂದು ತೋರಹತ್ತಿತು. ಕಾರಣ ದೀನಳ ಬಿಡುಗಡೆಯ ಸಲುವಾಗಿ ಪ್ರಯತ್ನ ಮಾಡದೆ, ಔದಾಸೀನ್ಯವನ್ನು ತಾಳುವದು ಅವನಿಗೆ ಮೂರ್ಖತನವೆಂದು ತೋರಹತ್ತಿತು. ಅವನು ಆ ದಿವಸ ಕಿಸನಗಡದಲ್ಲಿದ್ದು ಮಾರನೇ ದಿವಸ ಪೋಟೋಸಹಿತ ಪತ್ರವನ್ನು ತಕ್ಕೊಂಡು ಮುಂಬಯಿಗೆ ಬಂದನು. ಮನೆಗೆ ಬಂದ ಕೂಡಲೆ ಯಮುನೆಗೆ ಎಲ್ಲ ಸಂಗತಿಯನ್ನು ಹೇಳಿ, ಪತ್ರ ಮೊದಲಾದದ್ದು ಯಮುನೆಯ ಮುಂದಿಟ್ಟು ಹೊರಗೆ ಎಲ್ಲಿಯೋ ಹೋದನು. ಆ ಸಂಗತಿಯನ್ನು ಕೇಳಿ ಪ್ರಥಮ ಯಮುನೆಯ ಮನಸ್ಸಿನಲ್ಲಿಯೂ ಕೃಷ್ಣರಾಯನಂತಯೇ ಪರಿಣಾಮವಾಯಿ ತು; ಆದರೆ ಅಷ್ಟರಲ್ಲಿ ಅವಳ ವಿವೇಕಮಂದಿರದ ಬಾಗಿಲು ತೆರೆಯಲು ಅವಳು ಆ ಸಂಗ