ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆನೆಯ ಪ್ರಕರಣ- ವಸಂತನ ಕಾರಸ್ಥಾನ. ಹಿಡಿ MM••••• ••••••••MMMommm MMuMM ತಿಯ ಕಡೆಗೆ ಬೇರೊಂದು ದೃಷ್ಟಿಯಿಂದ ನೋಡಹತ್ತಿದಳು, ಕಣ್ಣೆದುರಿಗೆ ಪತ್ರವನ್ನಿ ಟ್ಟುಕೊಂಡು ವಿಚಾರಮಾಡುತ್ತಿರಲಿಕ್ಕೆ ಅವಳಿಗೊಂದು ಸಂಶಯವು ಬಂದಿತು. ಆ ಕೂಡಲೆ ಅವಳು ದಿವ್ಯಸುಂದರಿಯ ಮೊದಲಿನ ಪತ್ರವನ್ನು ಹುಡುಕಿ ತೆಗೆದಳು: ಸೂರ್ಯಕಾಂತ ಕನ್ನಡಿಯನ್ನು ತಕ್ಕೊಂಡು, ಅದರಿಂದ ಮೊದಲಿನ ಪತ್ರದೊಳಗಿನ ಅಕ್ಷರಗಳನ್ನು ನೋಡಹತ್ತಿದಳು. ಯಮುನೆಯ ಈ ಕಾರ್ಯವು ನಡೆದಿರುವಾಗ ಕೃಷ್ಣರಾಯನು ಹೊರಗಿನಿಂದ ಬಂದನು. ಕೃಷ್ಣರಾಯನನ್ನು ನೋಡುತ್ತಲೇ ಯಮು ನೆಯು ಹರ್ಷದಿಂದ:-( ಅಹೋ, ಈ ಪತ್ರವು ಋಟ್ಟಿ ಪತ್ರವಿರಲಿಕ್ಕೆ ಬೇಕು. ಇದ ರಲ್ಲಿ ಎಷ್ಟೋ ಅಕ್ಷರಗಳು ದಿವ್ಯಸುಂದರಿಯ ಅಕ್ಷರಗಳಂತೆ ಇರುವದಿಲ್ಲ, ಅವಳು ಯಾವಾಗಲೂ ಪತ್ರದ ಸಲುವಾಗಿ ಉಪಯೋಗಿಸುವ ಕಾಗದವೂ ಇದಲ್ಲ, ಎರಡೂ ಕಾಗದಗಳನ್ನು ಬೆಳಕಿಗೆ ಹಿಡಿದು ನೋಡಿದರೆ ಕಾಗದಗಳ ಕಾರಖಾನೆಯ ಹೆಸರು ಬೇರೆ ಬೇರೆ ಇರುತ್ತವೆ. ಇದರಿಂದ ಈ ಪತ್ರವು ನಿಶ್ಚಯವಾಗಿ ಬೊಟ್ಟಿಯಿರಲಿಕ್ಕ ಬೇಕು. ” ಎಂದಳು, ಈ ಪ್ರಕಾರವಾದ ಯಮುನೆಯ ವಿಚಾರವನ್ನು ಕೇಳಿ ಕೃಷ್ಣ ರಾಯನ ವಿಚಾರವೂ ದ್ವಿಗುಣಿತವಾಯಿತು. ಅವನೂ ಒಳ್ಳೇ ಸೂಕ್ಷವಾಗಿ • ಮಾಯ ಕ್ರಾಸ್ಕೋಪು ” ತಕ್ಕೊಂಡು ಪತ್ರವನ್ನು ನೋಡಹತ್ತಿದನು. ಪತ್ರವನ್ನು ನೋಡುವದಾ ಗುತ್ತಲೇ ಅಲ್ಲಿಗೆ ಎರಡನೇ ಒಬ್ಬ ಗೃಹಸ್ಥನು ಬಂದನು. ಕೂಡಲೆ ಯಮುನೆಯು ಅಲ್ಲಿಂದ ಹೊರಟುಹೋದಳು. ಯಮುನೆಯು ಹೋದ ಮೇಲೆ ಬಂದ ಗೃಹಸ್ಥನೂ, ಕೃಷ್ಣರಾಯನೂ ಕೂಡಿ ಪತ್ರ ಮತ್ತು ಪೋಟೋ ಇವುಗಳ ವಿಷಯವಾಗಿ ಎಷ್ಟೋ ಹೊತ್ತು ಆಲೋಚನಮಾಡಿದರು, ನಂತರ ಅವರು ಮುಂದೆ ಮಾಡಬೇಕಾದದ್ದನ್ನು ನಿಶ್ಚಯಿಸಿ, ಹೊರಗೆ ಹೊರಟುಹೋದರು. ವಾಚಕರೇ, ದಿವ್ಯಸುಂದರಿಯ ಸಂಬಂಧವಾಗಿ ಯಾರು ಏನೇ ಅನ್ನಲಿ, ಅವಳು ಪೂರ್ಣ ನಿರ್ದೋಷಿಯಿರುತ್ತಾಳೆಂದು ನಿಮಗೆ ಪೂರ್ಣ ಮನವರಿಕೆಯಾಗಿರುವ ದಷ್ಟೆ? ಅಂತೆಯೇ ಅವಳ ಮುಂದಿನ ವ್ಯವಸ್ಥೆಯೇನಾಯಿತೆಂಬದನ್ನು ತಿಳಕೊಳ್ಳ ಲಿಕ್ಕೆ ನೀವು ಆತುರಬಡುತ್ತಿರಬಹುದು. ಆದದ್ದರಿಂದ ಆ ದೀನಳ ಸಮಾಚಾರವನ್ನು ಮೊದಲು ನಾವು ನಿಮಗೆ ತಿಳಿಸುವೆವು. ಆ ವೃದ್ಧನಲ್ಲಿ ವಿಶ್ವಾಸವನ್ನಿಟ್ಟು ದಿವ್ಯಸುಂದ ರಿಯು ಗಾಡಿಯಲ್ಲಿ ಮಲಗಿದ ಮೇಲೆ ಆ ಗೃಹಸ್ಥನು ಕಿಸೆಯಿಂದ ಒಂದು ಬಾಟ್ಲಿ ಯನ್ನು ತೆಗೆದು, ಅದರ ಕಡೆಗೆ ಚಮತ್ಕಾರಿಕದೃಷ್ಟಿಯಿಂದ ನೋಡಹತ್ತಿದನು, ಎಂಬ ಸಂಗತಿಯು ನಮ್ಮ ವಾಚಕರಿಗೆ ಗೊತ್ತೇ ಇರುತ್ತದೆ. ಆ ಮೇಲೆ ಆ ಮುದುಕನು ತನ್ನ ರುಮಾಲದ ಮೇಲೆ ಆ ಬಾಟ್ವಿಯೊಳಗಿರುವ ಔಷಧದ ಎರಡು ಹನಿಗಳನ್ನು ಹಾಕಿದನು, ಆ ಮೇಲೆ ಆ ರುಮಾಲವನ್ನು ಮೆಲ್ಲನೆ ದಿವ್ಯಸುಂದರಿಯ ಮೂಗಿನ ಹತ್ತರ ಹಿಡಿದನು, ಅವಳು ನಿದ್ರೆಯಲ್ಲಿದ್ದದ್ದರಿಂದ ಅವಳಿಗೆ ಇದೇನೂ ತಿಳಿಯಲಿಲ್ಲ. ಅವಳ ಶರೀರದಲ್ಲಿ ರುಮಾಲದ ಮೇಲಿದ್ದ ವಿಷವು ಶ್ವಾಸೋಚ್ಛಾಸಮಾರ್ಗವಾಗಿ