696 - ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, NAA+೩ ಪ್ರವೇಶಿಸಿತು, ಅದರಿಂದ ಅವಳು ಎಚ್ಚರದಪ್ಪಿ ಬಿದ್ದು ಕೊಂಡಳು. ಗಾಡಿಯ ಬೇರು ವಾಡಾ ಸ್ಟೇಶನ್ನಕ್ಕೆ ಬಂದಕೂಡಲೆ ಅವರಿಬ್ಬರು ಮುಂಬಯಿಗೆ ಹೋಗುವದರ ಸಲು ವಾಗಿ ರಾಯಚೂರ ಕಡೆಗೆ ಹೋಗತಕ್ಕ ಗಾಡಿಯಲ್ಲಿ ಕುಳಿತುಕೊಳ್ಳಬೇಕಾಗಿದ್ದಿತು. ಆದರೆ ಆ ಮುದುಕನ ಒಲವು ಬೇರೆ ಕಡೆಗೆ ಇದ್ದದ್ದರಿಂದ ಅವನು ಗಾಡಿಯಿಂದ ಇಳಿ ಯದೆ ದಿವಸುಂದರಿ ಸಮೇತವಾಗಿ ಮದ್ರಾಸದ ಕಡೆಗೆ ಬಂದನು. ಎರಡನೇ ದಿವಸ ಸಂಜೆಯ ಸುಮಾರಕ್ಕೆ ಮದ್ರಾಸವು ಹತ್ತರ ಬಂದಬಂದಂತೆ ದಿವ್ಯಸುಂದರಿಯ ಮೂ ರ್ಛಯು ದೂರಾಗಹತ್ತಿತು. ಆಗ ಅವಳು ಕಣ್ಣು ತೆಗೆದು ಅತ್ತಿತ್ತ ನೋಡಹತ್ತಿದಳು. ಮತ್ತಷ್ಟು ವೇಳೆಯಾದ ಮೇಲೆ ಅವಳು ಪೂರ್ಣ ಜಾಗೃತಾವಸ್ಥೆಯನ್ನು ಹೊಂದಿ ದಳು. ಆಗ ಅವಳು ಎದ್ದು ಕುಳಿತು ಕಿಡಕಿಯೊಳಗಿಂದ ಹಣಿಕಿಹಾಕಿ ನೋಡಹತ್ತಿ ದಳು, ಅವಳು ಮುಂಬಯಿಯ ಸಮೀಪದ ಸ್ಟೇಶನ್ನು ಗಳನ್ನು ಅನೇಕ ಸಾರೆ ನೋಡಿ ದ್ದರಿಂದಲೂ, ಸ್ಟೇಶನ್ನ ದಲ್ಲಿ ಅಯ್ಯರ, ಚೆಟ್ಟಿ ಮೊದಲಾದ ಮದ್ರಾಸೀ ಜನರನ್ನು ನೋಡಿದ್ದರಿಂದಲೂ ತಾನು ಬೇರೊಂದು ಗ್ರಾಮಕ್ಕೆ ಬಂದಿರುತ್ತೇನೆಂಬದಾಗಿ ಕೂಡಲೆ ಅವಳಿಗೆ ತಿಳಿಯಿತು. ಮೊದಲೇ ಅವಳು ವಿನಾಯಕನ ವ್ಯಾಧಿಪೀಡಿತ ವಾರ್ತೆಯನ್ನು ಕೇಳಿ ಚಿಂತಾಕ್ರಾಂತಳಾಗಿದ್ದಳು, ಅದರಲ್ಲಿ ಈಗ ತಾನು ಬೇರೊಂದು ಗ್ರಾಮಕ್ಕೆ ಬಂದದ್ದನ್ನು ಕಂಡು ಅವಳು ಭಯಾಕುಲಳಾದಳು. ಆಗ ಅವಳು ಕಾತರಸ್ವರದಿಂದ ಮುದುಕನನ್ನು ಉದ್ದೇಶಿಸಿ:- ಅಯ್ಯೋ! ಇದೇನು? ನೀವು ಮುಂಬಯಿಗೆ ಹೋಗದೆ ಇತ್ತ ಯಾವ ಕಡೆಗೆ ಬಂದಿರಿ? ” ಎಂದಳು. ಆಗ ಮುದುಕನು ನಗುತ್ತ:- ಅವ್ವನ ವರೇ, ಹೀಗೆ ಹೆದರಬೇಡಿರಿ, ನಿನ್ನೆ ರಾತ್ರಿ ನಿಮಗೇನಾಗಿದ್ದಿತೋ ಏನೋ ಯಾರಿಗೆ ಗೊತ್ತು, ನೀವು ಗಾಡಿಯಲ್ಲಿ ಮೈಮೇಲೆ ಎಚ್ಚರವಿಲ್ಲದೆ ಬಿದ್ದಿದ್ದಿರಿ; ಇದರಿಂದ ನಾನು ಪೂರ್ಣ ಗಾಬರಿಯಾಗಿದ್ದೆನು. ಆದರೆ ಅಷ್ಟರಲ್ಲಿ ಬೇರೂವಾಡಾ ಸ್ಟೇಶನ್ನ ದಲ್ಲಿ ಒಬ್ಬ ಉತ್ತಮ ಡಾಕ್ಟರನು ಕೂಡಿದನು. ಅವನು ನಿಮಗೆ ಯೋಗ್ಯವಾದ ಔಷಧವನ್ನು ಕೊ ಟ್ಟದ್ದರಿಂದ ನೀವು ಈಗ ಚನ್ನಾಗಿ ಮಾತಾಡಲಿಕ್ಕೆ ಹತ್ತಿದ್ದೀರಿ. ಬೇಝವಾಡಾ ಸ್ಟೇಶ ನಕ್ಕೆ ಬಂದಮೇಲೆ ಅಲ್ಲಿಯ ಸ್ಟೇಶನ್ನ ಮಾಸ್ತರರು ಸ್ವತಃ ನನ್ನ ಹತ್ತಿರ ಬಂದು ಹೇಳಿ ದರೇನಂದರೆ:- ದಿವ್ಯಸುಂದರಿಬಾಯಿಯು ಬಂದರೆ ಅವಳನ್ನು ಮುಂಬಯಿಗೆ ಕಳಿ ಸದೆ, ಮದ್ರಾಸಕ್ಕೆ ಕಳಿಸಬೇಕೆಂತಲೂ, ತಮ್ಮ ಪ್ರಕೃತಿಯಲ್ಲಿ ಸ್ವಸ್ಥವಿದ್ದು ತಾವು ಮದ್ರಾ ಸದ ಮಾವುಂಟರೋಡಿನ ೨೧ನೇ ನಂಬರಿನ ಮನೆಯಲ್ಲಿ ಇಳಿಯುತ್ತೇವೆಂತಲೂ ವಿನಾ ಯಕರಾಯರು ಹೇಳಿರುವರು. ” ಎಂಬದಾಗಿ ಹೇಳಿದರು. ಆ ಸ್ಟೇಶನ್ನ ಮಾಸ್ತರರು ಬಹಳ ಒಳ್ಳೆಯವರಿದ್ದರು. ಅವರು ಮುಂಬಯಿಯ ತಿಕೀಟುಗಳನ್ನು ತಮ್ಮ ಕಡೆಗೆ ಇಟ್ಟು ಕೊಂಡು, ಮದ್ರಾಸದ ಟಿಕೀಟುಗಳನ್ನು ಕೊಟ್ಟರು. ತಾವು ಈಗ ಮದ್ರಾಸದ ಸಮೀಪಕ್ಕೆ ಬಂದಿರುತ್ತೀರಿ. ಇನ್ನು ಬಹಳವಾದರೆ ಹದಿನೈದು ಮಿನೀಟಿಗೆ ಸ್ಟೇಶನ್ನಕ್ಕೆ ಹೋಗುತ್ತೀರಿ, ಅಲ್ಲಿಂದ ಅರ್ಧತಾಸಿನೊಳಗೆ ಹೋಗಬೇಕಾದ ಸ್ಥಳಕ್ಕೆ ಹೋಗು ವಿರಿ, ” ಎಂದನು.
ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೪೩
ಗೋಚರ