ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MMon www ಆನೆಯ ಪ್ರಕರಣ- ವಸಂತನ ಕಾರಸ್ಥಾನ. ೧ಡಿ Armwrverwx ದಿವ್ಯಸುಂದರಿಯು ಈ ಕಾದಂಬರಿಯ ಮೇಲೆ ವಿಶ್ವಾಸವನ್ನಿಟ್ಟರೂ, ಅವಳ ಮನಸ್ಸು ಅಸ್ವಸ್ಥವಾಯಿತು. ತಾನು ಮನೆಯನ್ನು ಬಿಟ್ಟು ತಪ್ಪು ಮಾಡಿದೆನೆಂದು ಅವ ಳಿಗೆ ತೋರಹತ್ತಿತು. ಸ್ವಲ್ಪ ವೇಳೆಯಲ್ಲಿ ಅವರಿಬ್ಬರು ಸ್ಟೇಶನ್ನಕ್ಕೆ ಬಂದು ಮುಟ್ಟಿದರು. ಕೂಡಲೆ ಮಾವುಂಟರೋಡದ ಇಪ್ಪತ್ತೊಂದನೇ ನಂಬರಿನ ಮನೆಯನ್ನು ಹೊಕ್ಕರು. ಈ ಮನೆಯು ಪ್ರತ್ಯೇಕ ಒಂದು ಭಾಗಕ್ಕೆ ಸಾಧಾರಣ ಎತ್ತರದ ಪ್ರದೇಶದ ಮೇಲೆ ಕಟ್ಟಿದ್ದಿತು, ಅಲ್ಲಿಗೆ ಹೋದ ಮೇಲೆ ಆ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ, ಆ ಮುದುಕನು ಆಶ್ಚರ್ಯಚಕಿತನಾದಂತೆ ನಟಿಸಿ ಆ ಮನೆಯ ಕಾವಲುಗಾರನನ್ನು ಕರಿಸಿ:-( ಇಂದು ಇಲ್ಲಿಗೆ ವಿನಾಯಕರಾಯ ಎಂಬ ಹೆಸರಿನ ಗೃಹಸ್ಥರು ಬಂದಿದ್ದಿ ಲ್ಲವೇ ? ?” ಎಂದನು. ಇದನ್ನು ಕೇಳಿ ಕಾವಲುಗಾರನು ಮುದುಕನಿಗೆ ನಮಸ್ಕಾರ ಮಾಡಿ ಮುದುಕನ ಕೈಯಲ್ಲಿ ಒಂದು ಪತ್ರವನ್ನು ಕೊಡುತ್ತ:-<< ಹೌದು ಹುಜೂರ, ಅವರು ಮಧ್ಯಾಹ್ನದಲ್ಲಿ ಬಂದಿದ್ದರು; ಆದರೆ ಅಷ್ಟರಲ್ಲಿ ಪಾಂಡೀಚರಿಯೊಳಗಿನ ಒಬ್ಬ ಕಾರಖಾನದಾರರು ಅವರಿಗೆ ಭೆಟ್ಟಿಯಾಗಿ, ಕೂಡಲೆ ಅವರನ್ನು ಪಾಂಡೀಚರಿಗೆ ಕರೆ ಕೊಂಡು ಹೋದರು. ಅವರು ಮನೆಯ ಭಾಡಿಗೆಯನ್ನು ಕೊಟ್ಟಿದ್ದಾರೆ. ಕಾರಣ ತಮಗಿರಲಿಕ್ಕೆ ಅಡ್ಡಿಯಿಲ್ಲ.” ಎಂದನು. ಕಾವಲುಗಾರನ ಮಾತನ್ನು ಕೇಳಿ ಆ ಮುದು ಕನು ಪತ್ರದ ಮೇಲೆ ದೃಷ್ಟಿಯನ್ನು ಹಾಕಿದನು. ಅವನು ಪತ್ರವನ್ನು ಒಡೆಯಲಿಕ್ಕೆ ಹೋಗಿ ತಪ್ಪು ಧ್ಯಾನದಲ್ಲಿ ಬಂದಂತೆ ನಟಿಸಿ:-* ಅಹಹಾ ! ವಿನಾಯಕರಾಯರು ಇದನ್ನು ತಮ್ಮ ಸಲುವಾಗಿ ಬರೆದಿಟ್ಟಿರುತ್ತಾರೆ.” ಎಂದನ್ನುತ್ತ ಆ ಪತ್ರವನ್ನು ದಿವ್ಯ ಸುಂದರಿಯ ಕೈಯಲ್ಲಿ ಕೊಟ್ಟನು. ಪತ್ರವು ವಿನಾಯಕನದಲ್ಲವೆಂಬುವ ಬಗ್ಗೆ ಈಗಲೂ ಅವಳಿಗೆ ಸಂಶಯವು ಬರಲಿಲ್ಲ. ಅವಳು ಕೂಡಲೆ ಆ ಪತ್ರವನ್ನು ಒಡೆದು, ಅದರಲ್ಲಿದ್ದ ನಾಲ್ಕು ಸಾಲುಗಳನ್ನು ಓದಿ ನೋಡಿದಳು, “ ಪ್ರಕೃತಿಯು ಈಗ ಒಳ್ಳೇ ಸುಧಾರಿಸಿದೆ. ಒಂದು ಮಹತ್ವದ ಕೆಲಸದ ಸಲುವಾಗಿ ಪಾಂಡೀಚರಿಗೆ ಹೋಗಿರುತ್ತೇನೆ, ನೀನೂ ನಿನ್ನನ್ನು ಕರೆಯಲಿಕ್ಕೆ ಬಂದ ಮನುಷ್ಯನ ಸಂಗಡ ಪಾಂಡೀಚರಿಗೆ ಬಾ, ಗ್ರಾಮವು ನೋಡತಕ್ಕಂಥಹದಿರುತ್ತದೆ. ತಿಳಿಯುವದು. ಆಶೀರ್ವಾದ.” ಪತ್ರದೊಳಗಿನ ಅಕ್ಷರಾ ಭಿಪ್ರಾಯಗಳ ಸಲುವಾಗಿ ದಿವ್ಯಸುಂದರಿಗೆ ಸ್ವಲ್ಪ ಸಂಶಯವು ಬರಲಿಲ್ಲ. ಅಂದು ಒಂದು ದಿವಸ ಅವಳು ಅಲ್ಲಿಯೇ ಕಾಲಕಳೆದು ಎರಡನೇ ದಿವಸ ಮುದುಕನೊಡನೆ ಪಾಂಡೀಚರಿಗೆ ಹೊರಟುಹೋದಳು. ಕಾಮರ್ಸ ಬ್ಯಾಂಕಿನ ಪ್ರವರ್ತಕರಾದ ಶಾಮರಾಯ, ಗೋಪಾಳ, ವಸಂತ ಮೊದಲಾದವರು ಪೋಲೀಸರ ಬಾಯಿಯೊಳಗೆ ಗಡ್ಡಿ ಕೊಟ್ಟು ಓಡಿಹೋಗಿದ್ದರು. ಅವರು ಈಗ ತಮ್ಮ ವಸತಿಯನ್ನು ಪಾಂಡೀಚರಿಯಲ್ಲಿ ಮಾಡಿದ್ದರು, ಪಾಂಡಿಚರಿಯ ಜನರಿಗೆ ತಾವು ಇಂಡಿಯನ್ ಬ್ರಿಶ್ಚನ್ನರೆಂದು ಹೇಳಿದ್ದರು, ತಮ್ಮ ಜಾಣತನದಿಂದ ದೊರ ಕಿಸಿದ ಐದು ಲಕ್ಷ ರೂಪಾಯಿಗಳನ್ನು ತಕ್ಕೊಂಡು ತಾವೆಲ್ಲರೂ ಪಾರಿಸಕ್ಕೆ ಹೋಗಿರ 16