ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وره ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, ಬೇಕೆಂದು ವಿಚಾರಮಾಡಿದ್ದರು; ಆದರೆ ದಿವ್ಯಸುಂದರಿಯ ಹೊರ್ತು ಪರಿಸಕ್ಕೆ ಹೋಗುವದು ವಸಂತನಿಗೆ ಅನುಚಿತವಾಗಿ ತೋರಿದ್ದರಿಂದ, ಅವನು ತನ್ನ ವಿಲಕ್ಷಣ ಬುದ್ಧಿಸಾಮರ್ಥ್ಯದಿಂದ ದಿವ್ಯಸುಂದರಿಯು ಪಾಂಡೀಚರಿಗೆ ಬರುವಂತೆ ಮಾಡಿದ್ದನು. ಆ ಗ್ರಾಮದ ಹೊರಗಿನ ಒಂದು ಸುಂದರವಾದ ಬಂಗಲೆಯಲ್ಲಿ ದಿವ್ಯಸುಂದರಿಯು ಹೋದ ಕೂಡಲೆ ಅವಳು ಆ ವೃದ್ಧನನ್ನು ಕುರಿತು:-ಅವರು ಎಲ್ಲಿದ್ದಾರೆ? ನಾನು ಬಂದದ್ದು ಅವರಿಗೆ ತಿಳಿಸಿದರೆ ಒಳ್ಳೇದಾದೀತು. ” ಎಂದಳು. ಆಗ ಮುದುಕನು ನಗುತ್ತ:- ತಾವು ಈಗ ನಿರ್ಭಿತರಾಗಿ ಇಲ್ಲಿ ಕೂಡ್ರಿರಿ, ನಾನು ಈಗಲೇ ಶೋಧಿಸಿ ಅವರಿಗೆ ಇಲ್ಲಿಗೆ ಕರಕೊಂಡು ಬರುವೆನು.” ಎಂದನ್ನುತ್ತ ಎರಡನೇ ದಿವಾಣಖಾನೆಯಲ್ಲಿ ಹೋದನು, ಅಲ್ಲಿ ವಸಂತ-ಶಾಮರಾಯರು ಏನೋ ಮಾತಾಡುತ್ತ ಕುಳಿತಿದ್ದರು. ಅವರು ಆ ಮುದುಕನನ್ನು ನೋಡಿದ ಕೂಡಲೆ ಸುಮ್ಮನಾದರು. ಶಾಮರಾಯನು ಆ ಮುದುಕನಿಗೆ “ ಯಾರು' ಎಂದು ಪ್ರಶ್ನೆ ಮಾಡಿದನು. ಇಷ್ಟರಲ್ಲಿ ಆ ಮುದುಕನು ಖದಖದಾ ನಕ್ಕನು, ಮತ್ತು ಕೃತ್ರಿಮವಾದ ಬಿಳೇ ಮೀಶ್‌ ಮೊದಲಾದವುಗಳನ್ನು ತೆಗೆದೊಗೆದು, ಆ ಇಬ್ಬರಿಗೂ ನಮಸ್ಕಾರಮಾಡಿದನು. ಆ ಕೂಡಲೆ ವಸಂತನು ಖುರ್ಚಿಯಿಂದ ಎದ್ದು ಅವನ ಬೆನ್ನು ಚಪ್ಪರಿಸಿ:-( ಶಾಬಾಸ ಗೋಪಾಳ, ಕೆಲಸ ವಾಯಿತೇನು ?” ಎಂದನು. ಗೋಪಾಳನು ವಸಂತನ ಕೈಯನ್ನಲ್ಲಾಡಿಸಿ: ಕೆಲಸ ವಾಯಿತೇನು! ಹತ್ತರದ ದಿವಾಣಖಾನೆಯಲ್ಲಿಯೇ ತಮ್ಮ ರಾಸಾಹೇಬರನ್ನು ತಂದು ಕೂಡ್ರಿಸಿದ್ದೇನೆ.” ಎಂದನು. ಗೋಪಾಳನ ವಾಕ್ಯವನ್ನು ಕೇಳಿ ವಸಂತನಿಗೆ ಮೂರು ಲೋಕದಲ್ಲಿ ಹಿಡಿಸಲಾರದಷ್ಟು ಸಂತೋಷವಾಯಿತು. ಅವನು ಕೂಡಲೆ ಒಳಗೆ ಹೋಗಿ ಸರಲಾ-ಲೀಲೆಯನ್ನು ದಿವ್ಯಸುಂದರಿಯ ಆದರ-ಸತ್ಕಾರದ ಸಲುವಾಗಿ ಕಳಿಸಿದನು. ಅವರಿಬ್ಬರು ಮೊದಲು ದಿವ್ಯಸುಂದರಿಗೆ ಬಾಯಿಮುಕ್ಕಳಿಸುವದಕ್ಕಾಗಿ ನೀರು ಕೊಟ್ಟು, ನಂತರ ಚಹಾ ತಂದು ಕೊಟ್ಟರು. ಚಹಾವನ್ನು ತಕ್ಕೊಂಡ ಮೇಲೆ ಅವಳ ಮನಸ್ಸಿಗೆ ಸಮಾಧಾನವಾಯಿತು. ಮೂರು-ನಾಲ್ಕು ದಿವಸಗಳ ಪ್ರವಾಸದಿಂದ ಅವಳಿಗೆ ಯಾವಾಗ ನೆಲ ಸಿಕ್ಕಿತೋ ಏನೋ ಅನ್ನು ವ ಹಾಗೆ ಆಗಿದ್ದಿತು. ಅವರಿಬ್ಬರೂ ಅವಳಿಗೆ ಸ್ವಲ್ಪ ವಿಶ್ರಾಂತಿಯನ್ನು ತಕ್ಕೊಳ್ಳಿರೆಂದು ಹೇಳಿ ಹೋದ ಮೇಲೆ ಅವಳು ದಿವಾಣಖಾನೆಯ ಬಾಗಿಲನ್ನು ಒಳಗಿನಿಂದ ಬಿಗಿ ಮಾಡಿಕೊಂಡು, ಸ್ವಲ್ಪ ಹೊತ್ತು ಪರ ಮಾತ್ಮನ ಚಿಂತನವನ್ನು ಮಾಡಿ ಹಾಗೆಯೇ ಕುಳಿತ ಸ್ಥಳದಲ್ಲಿ ಮಲಗಿದಳು ಮಲಗಿದ ಕೂಡಲೆ ಅವಳಿಗೆ ನಿದ್ರೆ ಹತ್ತಿತು. ನಿದ್ರೆಯಲ್ಲಿ ಅವಳಿಗೆ ಎಷ್ಟೋ ಅಶುಭ ಸ್ವಪ್ನಗಳು ಬಿದ್ದವು, ಅವಳು ಹಾಗೆಯೇ ಎಷ್ಟೋ ಹೊತ್ತು ಮಲಗಿದ್ದಳು. ಆಗ ಅವಳ ದಿವಾಣ ಖಾನೆಯ ಬಾಗಿಲಿನ ಮೇಲೆ ಯಾರೋ ಒಳ್ಳೇ ಗಟ್ಟಿಯಾಗಿ ಎರಡು ಸಾರೆ ಹೊಡೆ ದರು, ಅದರಿಂದ ಅವಳಿಗೆ ಕೂಡಲೆ ಎಚ್ಚರವಾಯಿತು. ವಿನಾಯಕರಾಯರು ಬಂದ ರೆಂಬ ಹರ್ಷದಿಂದ ಕೂಡಲೆ ಅವಳು ಬಾಗಿಲನ್ನು ತೆರೆದಳು; ಆದರೆ ಬಾಗಿಲು ತೆಗೆದ