ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, ಯಜ ವಸಂತ- ಮೊದಲು ಸ್ವಲ್ಪ ಹೆದರಿ, ಇಲ್ಲವಾದರೆ ಈಗ ನೀನು ಮಾಡುವದಾ ದರೂ ಏನು ? ” ದಿವ್ಯ:- (ಸಂತಾಪದಿಂದ) ಪರಮೇಶ್ವರನು ಕೊಟ್ಟ ಬುದ್ಧಿಯಂತೆ ಮಾಡು ವೆನು ೨ ? ವಂಸತ:- ( ವ್ಯಂಗಸ್ವರದಿಂದ ) ಈ ಸ್ಥಿತಿಯಲ್ಲಿ ನೀನು ಮಾಡುವದಾದರು ಏನು ? ನಿನಗೆ ಅಂಥ ಸಾಮರ್ಥ್ಯವೆಲ್ಲಿಯದು ? ದಿವ್ಯ:- ( ಸತ್ಯಾಗ್ರಹಸ್ವರದಿಂದ ) ಪ್ರತಿಯೊಂದು ಒಳ್ಳೆ ಕೆಲಸವನ್ನು ಮಾಡ ಲಿಕ್ಕೆ ನನಗೆ ದೇವರು ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ” ವಸಂತ:-« ( ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ ಅವಳ ಹತ್ತಿರ ಹೋಗಿ ) ದಿವ್ಯಸುಂದರಿ, ನಿನಗೆ ಹುಚ್ಚು ಬೇರೆ ಹಿಡಿದಿಲ್ಲವಷ್ಟೇ ?” ವಸಂತನು ಇನ್ನೂ ಮುಂದೇನೋ ಮಾತಾಡುವವನಿದ್ದನು; ಆದರೆ ಅವನ ಕಾಮುಕಾಚರಣೆಯನ್ನು ನೋಡಿ ದಿವ್ಯಸುಂದರಿಯ ರಾಗವು ಅನಾವರವಾಯಿತು. ಅವಳು ಹತ್ತರದ ಖುರ್ಚೆಯನ್ನು ಎತ್ತಿ ವಸಂತನ ತಲೆಯ ಮೇಲೆ ಹಾಕಿದಳು. ಅವನ ತಲೆಯಲ್ಲಿ ಎಷ್ಟೊ ಡೊಂಬಾಳುಗಳು ಬಿದ್ದು ರಕ್ತವು ಪುಟಿಯಹತ್ತಿತು. ಅವನಿಗೆ ಗಟ್ಟಿ ಯಾಗಿ ಒದರುವಷ್ಟು ವೇದನೆಯಾಗಹತ್ತಿತು. ಒದರಿದರೆ ಹತ್ತರದ ಮನೆಯೊಳಗಿನ ಜನರು ಓಡಿಬಂದಾರೆಂದು ಹೆದರಿ, ತಲೆಯ ಮೇಲಿನ ಗಾಯಗಳನ್ನು ಗಟ್ಟಿಯಾಗಿ ಹತ್ತಿಕ್ಕಿಕೊಂಡು, ದಿವ್ಯಸುಂದರಿಯ ಮೇಲೆ ಹಲ್ಲು ತಿನ್ನುತ್ತ ಅವನು ಆಚೇಕಡೆಯ ದಿವಾಣಖಾನೆಗೆ ಹೊರಟುಹೋದನು. ಅವನು ಹೊರಗೆ ಕಾಲು ಇಡು ಇಡುತ್ತಲೇ ಅವಳು ಬಿಗಿಯಾಗಿ ಕದವನ್ನು ಹಾಕಿಕೊಂಡಳು. ಪ್ರಾಣಹೋದರೂ, ಯಾರು ಬಂದರೂ ಕದವನ್ನು ತೆಗೆಯಬಾರದೆಂದು ನಿಶ್ಚಯಮಾಡಿದಳು. ಅವಳ ಸಂತಾಪದ ವೇಗವು ಮೆಲ್ಲಮೆಲ್ಲನೆ ಕಡಿಮೆಯಾಗಹತ್ತಿತು. ಮುಂದೇನು ಮಾಡಬೇಕೆಂಬ ಬಗ್ಗೆ ಅವಳಿಗೆ ಒಳ್ಳೆ ಚಿಂತೆಯಾಯಿತು, ಅವಳು ಖರ್ಚೆಯ ಮೇಲೆ ಕುಳಿತು ಆ ಸಂಬಂಧ ವಾಗಿ ವಿಚಾರಿಸಹತ್ತಿದಳು, ಅವಳು ಮನದೊಳಗೆ ಆಲೋಚಿಸಿದ್ದೇನಂದರೆ:- ಸತೀತ್ವವು ಸ್ತ್ರೀಯರ ಮುಖ್ಯ ಸಂಪತ್ತಾಗಿದೆ. ಈ ಸಂಪತ್ತಿನ ಸಂರಕ್ಷಣೆಯಲ್ಲಿ ಪ್ರಾಣ ಹೋದರೂ ಅಡ್ಡಿಯಿಲ್ಲ. ಸತೀತ್ವವನ್ನು ಸಂರಕ್ಷಿಸದಿದ್ದರೆ ಮನುಷ್ಯ-ಪಶುಗಳಲ್ಲಿ ಭೇದ ವೇನು? ಜಗನ್ನಾಯಕಾ! ನನ್ನ ಮೇಲೆ ಬೇಕಾದಂಥ ಆಪತ್ತು ಬರಲಿ, ನಾನು ಸತೀ ತ್ವವನ್ನು ಯಾವದೊಂದು ರೀತಿಯಿಂದಾದರೂ ಕಾಯ್ದು ಕೊಳ್ಳುವೆನು, ಪತಿಗಳು ಕೊಟ್ಟ ಮನೋಬಲದ ಪರೀಕ್ಷೆಯನ್ನು ಮಾಡಲಿಕ್ಕೆ ಇದು ತಕ್ಕ ವೇಳೆಯು ? ” ಎಂದ ನ್ನುತ್ತ ಖುರ್ಚೆಯ ಮೇಲಿಂದ ಎದ್ದು, ಒಂದು ಕಿಡಕಿಯ ಹತ್ರ ಹೋಗಿ ನಿಂತಳು. ಆ ದಿವಾಣಖಾನೆಗೆ ಬಾಗಿಲಿದ್ದ ಗೋಡೆಗೆ ಕಿಡಕಿಯಿದ್ದಿಲ್ಲ. ಹಿಂದಿನ ಗೋಡೆಗೆ