ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆನೆಯ ಪ್ರಕರಣ- ವಸಂತನ ಕಾರಸ್ಥಾನ. ೧೨ ಮಾತ್ರ ಎರಡು ಕಿಡಕಿಗಳಿದ್ದವು, ಅದರಲ್ಲಿ ಅವಳು ಒಂದು ಕಿಡಕಿಯ ಹತ್ತಿರ ನಿಂತು ಕೊಳ್ಳಲು ಅವಳಿಗೆ ಪಾಂಡಿಚರಿ ಪಟ್ಟಣದ ಎಷ್ಟೋ ಭಾಗವು ಕಾಣಿಸಹತ್ತಿತು. ಪಟ್ಟಣದ ಒಂದು ಭಾಗಕ್ಕೆ ಆಗಗಾಡಿಗಳು ಓಡಾಡುತ್ತಿದ್ದವು, ಮತ್ತೊಂದು ಭಾಗಕ್ಕೆ ಸಮುದ್ರದ ತೆರೆಗಳು ಒಂದರಮೇಲೊಂದು ಪುಟಿಯುತ್ತಿದ್ದವು. ಈ ಸ್ಥಿತಿಯನ್ನು ನೋಡಿ ದಿವ್ಯಸುಂದರಿಯ ಮನಸ್ಸಿಗೆ ಕೆಲವಂಶ ಸಮಾಧಾನವೆನಿಸಿತು. “ ಅದರಲ್ಲಿ ಸೂರ್ಯಾಸ್ತ ಸಮಯವಾದದ್ದರಿಂದ ಪಟ್ಟಣವು ಒಳ್ಳೇ ರಮಣೀಯವಾಗಿ ಕಾಣಿಸು ತಿದ್ದಿತು, ಪಟ್ಟಣದ ಸೌಂದರ್ಯವನ್ನು ನೋಡುತ್ತಲೇ ಆ ದುಷ್ಟರ ಕೈಯೊಳಗಿಂದ ಹೇಗೆ ಪಾರಾಗಬೇಕೆಂಬ ಬಗ್ಗೆ ಅವಳು ವಿಚಾರಮಾಡಹತ್ತಿದಳು. ಎಷ್ಟೋ ಹೊತ್ತು ವಿಚಾರಮಾಡಿ ಯಾವದೋ ಒಂದು ವಿಚಾರವನ್ನು ಸ್ಥಿರಪಡಿಸಿ ಮತ್ತೆ ಬಂದು ಖುರ್ಚೆ ಯಮೇಲೆ ಕುಳಿತಳು. ಸ್ವಲ್ಪ ವೇಳೆಯಾದ ಮೇಲೆ ಸಂಜೆಯಾಯಿತು. ಅವಳ ದಿವಾಣ ಖಾನೆಯಲ್ಲಿ ಕತ್ತಲೆಯು ಪಸರಿಸಿತು. ಮಧುರೆಯು ಬರುವಾಗ ಅವಳಿಗೆ ಎಷ್ಟೋ ಉಂಡಿಯನ್ನು ಕಟ್ಟಿ ಕೊಟ್ಟಿದ್ದಳು. ಅವಳು ಉಂಡಿಯ ಡಬ್ಬಿಯ ಬಾಯಿಯನ್ನು ತೆಗೆದು, ಅದರಲ್ಲಿಯ ಒಂದು ಉಂಡಿಯನ್ನು ತಿಂದು ಮೇಲೆ ಸ್ವಲ್ಪ ನೀರು ಕುಡಿದಳು, ಆ ಡಬ್ಬಿ ಯಲ್ಲಿ ಅವಳು ಒಂದು ಉಡುವ ತೀರೆಯನ್ನೂ, ಹತ್ತು ರೂಪಾಯಿಯನ್ನೂ ಇಟ್ಟಿ ದ್ದಳು. ರಾತ್ರಿ ರ್೮ ಹೊಡೆದ ಮೇಲೆ ದಿವಾಣಖಾನೆಯ ಬಾಗಿಲಿನ ಹತ್ತರ ಯಾರೋ ಗುಜುಗುಜು ಮಾತಾಡಹತ್ತಿದ್ದರಿಂದ ಅವಳು ಖುರ್ಚೆಯಿಂದ ಎದ್ದು ಬಾಗಿಲಿನ ಹತ್ತಿರ ಹೋಗಿ ನಿಂತುಕೊಂಡಳು. ಇಷ್ಟರಲ್ಲಿ ಬಾಗಿಲಿನ ಮೇಲೆ ಧಪಾಧಪಾ ಹೊಡೆ ಯುತ್ತ ಶಾಮ-ವಸಂತರು ಬಾಗಿಲು ತೆರೆಯೆಂದು ದಿವ್ಯಸುಂದರಿಗೆ ಒದರಹತ್ತಿದರು; ಆದರೆ ದಿವ್ಯಸುಂದರಿಯು ಸ್ವಸ್ಥವಾಗಿ ನಿಂತಲ್ಲಿಯೇ ನಿಂತುಕೊಂಡಳು. ವಿವೇಕಶೂನ್ಯ ನಾದ ವಸಂತನು ಬಾಗಿಲು ಮುರಿಯಲೆಂದು ಅದರ ಮೇಲೆ ಒಳ್ಳೆ ಜೋರಿನಿಂದ ನಾಲ್ಕು ಸಾರೆ ಹೊಡೆದನು, ಆದರೆ ಬಾಗಿಲು ಗಟ್ಟಿಮುಟ್ಟಾಗಿ ಇದ್ದದ್ದರಿಂದ ಅದು ಜುಮ್ಮ ಅನ್ನಲಿಲ್ಲ. ವಸಂತನು ಹಾಗೆಯೇ ಅವಿಚಾರದ ಕೆಲಸಮಾಡುವದನ್ನು ನೋಡಿ ಶಾಮರಾಯನು ವಸಂತನನ್ನು ಕುರಿತು ಕತ್ತೆ, ಬಾಗಿಲಿನ ಮೇಲೆ ಆಗುವ ಸಪ್ಪಳವನ್ನು ಕೇಳಿ ನೆರೆಯ ಜನರು ಓಡಿಬಂದಾರು, ಅದರಿಂದ ಇಲ್ಲಿಯವರೆಗೆ ಪ್ರಯತ್ನ ಬಟ್ಟು ಸಿದ್ಧಪಡಿಸಿದ ಆಲೋಚನಾಮಂದಿರವು ಹೊತ್ತು ಕೊಂಡು ಬಿದ್ದಿ (ತು. ಹೋಗಲಿ ಈಗ, ನಾಳೆ ಸ್ಕೂ ಮೊಳೆ ತೆಗೆಯುವ ತಕ್ಕ ಸಾಧನವನ್ನು ತಂದರೆ ಬೊಬ್ಬಾಟವಿಲ್ಲದೆ ಬಾಗಿಲನ್ನು ತೆಗೆಯಲಿಕ್ಕೆ ಬರುತ್ತದೆ. ” ಎಂದನ್ನುತ್ತೆ ವಸಂತ ನನ್ನು ಕರಕೊಂಡು ಹೊರಟು ಹೋದನು. ಮೇಲಿನ ಭಾಷಣದಿಂದ ಇಂದು ರಾತ್ರಿಯೇ ಬಾಗಿಲು ತೆಗೆಯವ ಪ್ರಯತ್ನ ಮಾಡದೆ ನಾಳೆ ಮಾಡುತ್ತಾರೆಂಬುವದು ದಿವ್ಯಸುಂದರಿಯ ಪೂರ್ಣ ಲಕ್ಷದಲ್ಲಿ ಬಂದಿತು, ಅದರಿಂದ ಇದೊಂದು ರಾತ್ರಿಯಾದ ರೂ ನಿಷ್ಕಂಟಕವಾಗಲಿಕ್ಕೆ ಅಡ್ಡಿಯಿಲ್ಲವೆಂದೂ, ಮತ್ತು ಇಂಥ ನಿಷ್ಕಂಟಕವಾದ