ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, ರಾತ್ರಿಯಲ್ಲಿ ತಾನೇನಾದರೂ ಪ್ರಯತ್ನ ಮಾಡದೆ ಸುಮ್ಮನೆ ಕಾಲಹರಣ ಮಾಡಿದರೆ, ಆ ದಯಾಘನನಾದ ಪರಮಾತ್ಮನಲ್ಲಿ ತಾನು ದೊಡ್ಡ ಗುನ್ನೇಗಾರಳಾಗುವೆನೆಂದೂ ಅವಳಿಗೆ ತೋರಿತು, ತೋರಿದಂತೆ ಕೂಡಲೆ ಅವಳು ಆ ಉದ್ಯೋಗಕ್ಕೆ ಹತ್ತಿದಳು. ದಿವಾಣಖಾನೆಯಲ್ಲಿ ಹಗ್ಗದಿಂದ ಎಳೆಯುವ ಒಂದು ಬೀಸಣಿಕೆಯಿದ್ದಿತು. ಆ ಬೀಸಣಿ ಕೆಯ ಗಡುತರವಾದ ಹಗ್ಗವನ್ನು ತೆಗೆದುಕೊಂಡು, ಅದರ ಒಂದು ತುದಿಯನ್ನು ಕಿಡ ಕಿಗೆ ಗಟ್ಟಿಯಾಗಿ ಕಟ್ಟಿ ಇನ್ನೊಂದು ತುದಿಯನ್ನು ಕೆಳಗೆ ಬಿಟ್ಟಳು. ಕಿಡಕಿಗೆ ಗಜ ವನ್ನು ಹಚ್ಚಿದ್ದರಿಂದ ಆ ಮುಖವಾಗಿ ಹೊರಬೀಳುವದು ಶಕ್ಯವಿದ್ದಿಲ್ಲ; ಆದರೆ ಕಿಡಕಿಯ ಮೇಲ್ಬಾಗಕ್ಕಿದ್ದ ಒಂದು ಬರೇ ಕಾಜಿನ ಪಟದ ಕಿಡಕಿಯಿಂದ ಮಾತ್ರ ಪಾರಾಗಲಿಕ್ಕೆ ಬರುವಂತಿದ್ದಿ ತು, ಅವಳು ಮೆಲ್ಲನೆ ಕಾಜಿನ ಪಟವನ್ನು ಒಡೆದು ಹೊರಬೀಳುವ ಮಾರ್ಗ ಮಾಡಿಕೊಂಡಳು. ಮಾರ್ಗವಾದ ಮೇಲೆ ಒಂದರಮೇಲೊಂದು ಖುರ್ಚೆಯನ್ನಿಟ್ಟು, ಅವುಗಳ ಮೇಲೇರಿ ತನ್ನ ಡಬ್ಬಿಯನ್ನು ತಕ್ಕೊಂಡು ಕೆಳಗೆ ಇಳಿಯಲಿಕ್ಕೆ ಆರಂಭ ಮಾಡಿದಳು. ಆಗ ಅವಳ ಶರೀರದಲ್ಲಿ ಕಂಪನವು ಹುಟ್ಟಿದ್ದಿತು. ತನಗೆ ಈಗ ಯಾರಾ ದರೂ ನೋಡಿದರೆ ಮುಂದೆ ತನ್ನ ಅವಸ್ಥೆಯೇನಾದೀತೆಂಬ ಬಗ್ಗೆ ಅವಳಿಗೆ ಪುನಃ ಪುನಃ ವಿಚಾರಗಳು ಬರಹತ್ತಿದವು, ಮತ್ತು ಇದೇ ಕಾಲದಲ್ಲಿ ತಾನು ಇಳಿಯುವಾಗ ಎಲ್ಲಿ ಬೀಳುತ್ತೇನೋ ಏನೋ ಎಂಬ ಬಗ್ಗೆ ಅವಳಿಗೆ ಭೀತಿಯೂ ಆಗಹತ್ತಿತು. ಆದರೂ ಅವಳು ಧೈರ್ಯದಿಂದ ಕೆಳಗಿಳಿದಳು, ಆ ಸ್ವಾತಂತ್ರ್ಯಭೂಮಿಗೆ ಕಾಲು ಇಡುತ್ತಲೇ ಅವಳು ಪರಮಾತ್ಮನಿಗೆ ಭಕ್ತಿಭರದಿಂದ ಸಾಷ್ಟಾಂಗ ನಮಸ್ಕಾರಮಾಡಿದಳು. ಇನ್ನು ಇಲ್ಲಿ ಬಹಳ ಹೊತ್ತು ನಿಲ್ಲುವದು ಅಯೋಗ್ಯವೆಂದು ತಿಳಿದು, ಅವಳು ಒಳ್ಳೇ ತ್ವರೆ ಯಿಂದ ಮಾರ್ಗದ ಮೇಲೆ ಬಂದಳು. ಆಗ ಮಾತ್ರ ಅವಳ ಜೀವದಲ್ಲಿ ಜೀವವು ಬಂದಿತು, ಆಗ ಅವಳ ಮನಸ್ಸಿನಲ್ಲಿ ಅನಂತವಿಚಾರಗಳು ಬಂದರೂ ಅವಳು ಸ್ಟೇಶನ್ನ ದ ಕಡೆಗೆ ತ್ವರೆಯಿಂದ ಹೋಗುತ್ತಿದ್ದಳು. ವಸಂತನು ಬಂದು ತಿರುಗಿ ತನ್ನ ನ್ನು ಹಿಡ ಕೊಂಡು ಹೋದಾನೆಂದು ಆಗ ಅವಳಿಗೆ ಭೀತಿಯಿದ್ದಿಲ್ಲ; ಯಾಕಂದರೆ ಹಾಗೆ ವಸಂತನು ಮಾಡಿದ ಕೂಡಲೆ ಅವನನ್ನು ಪೋಲೀಸರ ಸ್ವಾದೀನಮಾಡಲಿಕ್ಕೆ ಅವಳು ಸಿದ್ದಳಾಗಿ ದ್ದಳು. ಅವಳಿಗೆ ಒಮ್ಮೆ ಈಗಲೇ ಪೋಲೀಸರ ಕಡೆಗೆ ಹೋಗಿ ಅವರಿಗೆ ವಸಂತನ ಎಲ್ಲ ದುರಾಚರಣೆಯನ್ನು ತಿಳಿಸಬೇಕೆಂದು ತೋರಿತು, ಆದರೆ ಹೀಗೆ ಮಾಡಿದರೆ ಪ್ರಸಂಗಾತ್ ಫೋಲೀಸರ ಸಹಾಯಕ್ಕಾಗಿ ನಾನು ಎಷ್ಟೋ ದಿವಸ ಇಲ್ಲಿರುವ ಪ್ರಸಂಗ ವು ಬಂದೀತೆಂದು ನೆನಿಸಿ ಅವಳು ಹಾಗೆ ಮಾಡುವದನ್ನು ಬಿಟ್ಟಳು. ಅವಳಿಗೆ ಒಮ್ಮೆ ಎಲ್ಲರಿಗೂ ತಾರುಮಾಡಿ ಅವರನ್ನು ಇಲ್ಲಿಗೆ ಕರಿಸಬೇಕೆಂದು ತೋರಿತು; ಆದರೆ ತೀರ ಅಪರಿಚಿತವಾದ ಪರಗ್ರಾಮದಲ್ಲಿ ಅವರೆಲ್ಲರ ಹಾದಿಯನ್ನು ನೋಡುತ್ತ ಮೂರು-ನಾಲ್ಕು ದಿವಸ ಎಲ್ಲಿರಬೇಕೆಂದು ಆಲೋಚಿಸಿ, ಹಾಗೆ ಮಾಡುವದನ್ನೂ ಬಿಟ್ಟಳು, ಕಡೆಗೆ ಅವಳು ತ್ವರೆಯಿಂದ ರಾಮಪುರಕ್ಕೆ ಹೋಗಬೇಕೆಂದಾಲೋಚಿಸಿ, ಆ ಪ್ರಕಾರ ಸ್ಟೇಶ