ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯಸು೦ದರಿ ಅಥವಾ ದೀರ್ಘ ಪ್ರಯತ್ನ, wwwxonno ಒnno ೧೧hesha ಈ ಕಾದಂಬರಿಗೆ ನಾಯಿಕೆಯಾದ ದಿವ್ಯ ಸುಂದರಿಯು ಶ್ರೀಮಂತರ ಮಗಳು; ಅದರಲ್ಲಿ ಉಚ್ಚತರದ ಶಿಕ್ಷಣಹೊಂದಿದವಳು, ಮೇಲಾಗಿ ವಿನಾಯಕನಂಥ ಎಮ್. ಎ. ಪರೀಕ್ಷೆ ಪಾಸಾದವನ ಕೈ ಹಿಡಿದವಳು. ಆದರೂ ಈಗಿನ ಕೆಲಕೆಲವು ಸುಶಿಕ್ಷಿತೆಯರಂತೆ ಬೂಟು ಚಾಳೀಸು ಮೊದಲಾದವುಗಳಿಂದ ಅಲಂಕೃತಳಾಗಿ, ಹೆಗಲು ಮೇಲಿನ ಜರೀಕಾಠಿಯ ಪತ್ತಲದ ಸೆರಗನ್ನು ಜಯದ ನಿಶಾನೆಯಂತೆ ಅಲ್ಲಾಡಿಸುತ್ತ ಬೀದಿಯಲ್ಲಿ ತಿರುಗಾಡದೆ, ಪತಿವ್ರತಾಧರ್ಮಪರಾಯಣಳಾದದ್ದನ್ನೂ, ಎಂಥ ಘನ ಘೋರ ಸಂಕಟಗಳು ಪ್ರಾಪ್ತವಾದರೂ ತನ್ನ ಪಾತಿವ್ರತ್ಯ ಕಾಯ್ದು ಕೊಂಡದ್ದನ್ನೂ ಓದಿದರೆ ಎಂಥ ಸ್ತ್ರೀಯರಿಗಾದರೂ ತಮ್ಮ ನಿಜವಾದ ಕರ್ತವ್ಯಕರ್ಮವು ಗೊತ್ತಾಗ ದಿರದು! ಇನ್ನು ಈ ಕಾದಂಬರಿಗೆ ಉಪನಾಯಿಕೆಯಾದ ಇಂದಿರೆಯು ತಾನು ಮನ ಸ್ಪಿನಿಂದ ವರಿಸಿರುವ ವಿನಾಯಕನೇ ತನ್ನ ಪತಿಯೆಂದು ಭಾವಿಸಿಕೊಂಡು, ತನ್ನ ಮನೋದಯವನ್ನು ಪ್ರತ್ಯಕ್ಷವಾಗಿ ವಿನಾಯಕನಿಗೆ ತಿಳಿಸದೆ, ಅವನಿಗೆ ಕಾಣದಂತೆ ಅವನ ಹಿಂದೆಯೇ ಇರುತ್ತ ಕಡೆಗೆ ದೀರ್ಘ ಪ್ರಯತ್ನದಿಂದಲೂ, ಹಿತಚಿಂತನಸೇವೆಗೆ ಳಿಂದಲೂ ತನ್ನ ಅಭೀಷ್ಟ್ರವನ್ನು ನೆರವೇರಿಸಿಕೊಂಡದ್ದನ್ನು ಓದಿದರೆ, ಓದಿದ ಪ್ರತಿ ಯೊಬ್ಬ ವಾಚಕನ ಕಣ್ಣುಗಳಿಂದ ಆನಂದಾಶ್ರುಗಳು ಉದುರದಿರಲಾರವು. - ಇನ್ನು ಸಮಾಜದಲ್ಲಿ ಇರುವ ಸಮಾಜಕಂಟಕರಿಂದ ಸಮಾಜವು ಹೇಗೆ ರಸಾ ತಳಕ್ಕಿಳಿಯಹತ್ತಿರುತ್ತದೆಂಬುವದನ್ನೂ, ಸಜ್ಜನರು ಇವರ ಕಪಟಜಾಲದಲ್ಲಿ ಸಿಕ್ಕು ಹೇಗೆ ಸಂಕಟದಲ್ಲಿ ಬೀಳುತ್ತಾರೆಂಬುವದನ್ನೂ ಈ ಕಾದಂಬರಿಯಲ್ಲಿ ಚನ್ನಾಗಿ ತಿಳಿಯ ಬಹುದಾಗಿದೆ. ಒಟ್ಟಿಗೆ ಈ ಕಾದಂಬರಿಯು ಎಷ್ಟು ಸಮಾಜೋಪಯುಕ್ತವಾಗಿರುತ್ತ ದೆಂಬ ವಿಷಯವನ್ನು ವಾಚಕರೇ ನಿರ್ಧರಿಸಬಹುದಾಗಿದೆ. ೧ 0 ಈ ಕಾದಂಬರಿರೂಪೀ ಕುಸುಮದ ಸುಗಂಧವು ಸರ್ವ ಕರ್ನಾಟಕದಲ್ಲಿ ಹರಡ ಲೆಂತಲೋ, ಅಥವಾ ಕೈಲಾದಷ್ಟು ಸಮಾಜ-ಭಾಷಾಸೇವೆಗಳನ್ನು ಮಾಡಲಿಚ್ಚಿಸುವ ಲೇಖಕನ ಅವಿಶ್ರಾಂತಶ್ರಮದ ಮೂರ್ತಿಮಂತಸ್ವರೂಪವು ಬೈಲಿಗೆ ಬರಲೆಂತಲೋ, ಅಥವಾ ತಮ್ಮ ಜನ್ಮಭಾಷಾಭಿಮಾನದ ಕೀರ್ತಿಯು ಸ್ಥಿರವಾಗಿ ಉಳಿಯಲೆಂತಲೋ ಏನೋ ವಿದ್ಯಾಭಿಮಾನಿಗಳಾದ ಶ್ರೀಯುತ ದೊಡ್ಡ ಅಡಿವಪ್ಪ ಕುಬುಸದ ವಾಸಸ್ಥಳ ಹಿರೇಕೆರೂರ ಇವರು ಈ ಕಾದಂಬರಿಯ ಹಸ್ತಪ್ರತಿಯನ್ನು ಪೂರ್ಣ ವಾಗಿ ಓದಿ, ಇದನ್ನು ಮುದ್ರಣಮಾಡಿಸುವದಕ್ಕೆ ತುಂಬಾ ಧನಸಹಾಯ ಮಾಡಿದ್ದರಿಂದ ಇವರಿಗೆ ನಾನು ಆಜನ್ಮ ಋಣಿಯಾಗಿರುವೆನು, ಈ ಮಹನೀಯರ ಲೋಕೋಪಕಾರ ೧.