ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

15ಆ Movvvvvvvv ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ, Novwwwx ರುತ್ತದೆಂದು ಯುರೋಪಿಯನ್ ಸ್ತ್ರೀಯಳಿಗೆ ತಿಳಿಸಿದಳು. ಆಗ ಯುರೋಪಿಯನ್ ಸ್ತ್ರೀಯಳಿಗೆ ಪರಮಾನಂದವಾಯಿತು, ರಾಜಮಹೇಂದ್ರಿಯ ತನಕ ನಿಮ್ಮ ಸಂಗಡ ಹೋಗುವದರಿಂದ ಬೇಸರವಾದರೂ ಹೋದೀತೆಂದು ಅವಳು ಹೇಳಿದಳು, ಇಷ್ಟು ಮಾತಾಡಿ ಹತ್ತು ಹನ್ನೆರಡು ಮಿನೀಟ ಆದ ಕೂಡಲೆ ಆ ಮೂವರೂ ಭಾಡಿಗೆಯ ಗಾಡಿಯಲ್ಲಿ ಕುಳಿತು ಬಂದರಕ್ಕೆ ಹೋದರು, ಮತ್ತು ಬೋಟಿನ ತಿಕೀಟು ತಕ್ಕೊಂಡು ಬೋಟಿನಲ್ಲಿ ಹೋಗಿ ಕುಳಿತರು. - ವಾಸ್ತವಿಕ ದಿವ್ಯಸುಂದರಿಯು ಪಾಂಡೀಚರಿಯನ್ನು ಬಿಟ್ಟು ಘಾತಮಾಡಿ ಕೊಂಡಳು. ಒಂದುವೇಳೆ ಅವಳು ಆ ರಾತ್ರಿ ಅದೇ ದಿವಾಣಖಾನೆಯಲ್ಲಿ ಇದ್ದದ್ದಾಗಿ ದ್ದರೆ, ಅವಳ ಚರಿತ್ರೆಯೇ ಬದಲಾಗುತ್ತಿದ್ದಿತು. ಆದರೆ ಅದೃಷ್ಟದ ಘಟನಾಚಕ್ರದ ಮುಂದೆ ಅವಳ ಪ್ರಯತ್ನವಾದರೂ ಏನು ನಡೆದೀತು ! ಅವಳಿಗೆ, ತನ್ನ ಸೆರೆ ಬಿಡಿಸು ವದರ ಸಲುವಾಗಿ ಕೃಷ್ಣರಾಯನು ತನ್ನ ಬೆನ್ನ ಹಿಂದೆಯೇ ಸಂಗಡ ಜಾಣರಾದ ಪೋಲೀಸರನ್ನು ಕರಕೊಂಡು ಹೊರಟಿದ್ದಾನೆಂಬುವದು ಏನು ಪರಿಚಯ ! ! ಅವಳು ಬೋಟಿನಲ್ಲಿ ಕುಳಿತ ವೇಳೆಯಲ್ಲಿಯೇ ಅತ್ತ ಕೃಷ್ಣರಾಯನು ಬ್ರಿಟಿಶ ಮತ್ತು ಫ್ರೆಂಚ ಶಿಪಾಯಿಯರನ್ನು ಸಂಗಡ ಕರಕೊಂಡು ವಸಂತನ ದಿವಾಣಖಾನೆಯನ್ನು ಹೊಕ್ಕಿ ದ್ದನು. ಪೋಲೀಸರ ದೃಷ್ಟಿಗೆ ಬೀಳುವದೊಂದೇ ತಡ, ವಸಂತರಾಯ, ಶಾಮರಾಯ, ಗೋಪಾಳರಾಯ ಮೊದಲಾದವರು ಪೊಲೀಸರ ಸ್ವಾಧೀನರಾದರು. ಆದರೆ ದಿವ್ಯ ಸುಂದರಿಯು ಎಲ್ಲಿಯೂ ಕಾಣದ್ದರಿಂದ ಕೃಷ್ಣರಾಯನು ಗಾಬರಿಯಾದನು. ಅವನು ವಸಂತನಿಗೆ ಅವಳ ಸಂಬಂಧವಾಗಿ ಪ್ರಶ್ನೆ ಮಾಡಿದನು. ಈಗ ಸುಳ್ಳು ಹೇಳುವದರಲ್ಲಿ ಅರ್ಥವಿಲ್ಲೆಂದು ಬಗೆದು, ವಸಂತನು ಇದ್ದ ಸಂಗತಿಯನ್ನು ಇದ್ದಂತೆ ಹೇಳಿದನು. ಆ ಕೂಡಲೆ ಕೃಷ್ಣರಾಯನು ಮತ್ತೊಂದು ದಿವಾಣಖಾನೆಗೆ ಹೋದನು, ಆದರೆ ಬಾಗಿಲು ಒಳಗಿಂದ ಬಿಗಿಮಾಡಿದ್ದನ್ನು ನೋಡಿ ಅವನು ನಿರುಪಾಯನಾದನು. ಅವನು ದಿವ್ಯಸುಂದ ರಿಗೆ ಎಷ್ಟೋ ಸಾರೆ ಕೂಗಿದನು; ಆದರೆ ಬಾಗಿಲು ತೆರೆಯಲಿಲ್ಲ. ಆಗ ಕೃಷ್ಣರಾಯನು ಬಹು ಚಿಂತಾಗ್ರಸ್ತನಾದನು. ದಿವ್ಯಸುಂದರಿಯು ಆತ್ಮಹತ್ಯೆ ಮಾಡಿಕೊಂಡಳೋ ಏನೆ ಎಂದು ಅವನಿಗೆ ಸಂಶಯವಾಯಿತು, ಕೂಡಲೆ ಪೋಲೀಸರು ಅಷ್ಟು ರಾತ್ರಿ ಯಲ್ಲಿ ಇಕ್ಕಳ ಮೊದಲಾದದ್ದು ತರಿಸಿ ಬಾಗಿಲು ತೆರೆದರು. ಆಗ ಎಲ್ಲರೂ ದಿವಾಣ ಖಾನೆಯೊಳಗೆ ಪ್ರವೇಶಮಾಡಿದರು; ಆದರೆ ಒಳಗೆ ಏನದೆ ? ದಿವಾಣಖಾನೆಯು ತೀರ ಶೂನ್ಯವಾಗಿದೆ! ಅದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು, ಕೃಷ್ಣ ರಾಯನು ದೀವಿಗೆಯನ್ನು ತೆಗೆದುಕೊಂಡು ಸೂಕ್ಷ್ಮವಾಗಿ ಎಲ್ಲ ಕಡೆಗೂ ನೋಡಹತ್ತಿ ದನು. ಇಷ್ಟರಲ್ಲಿ ಕಿಡಕಿಯ ಗಜಕ್ಕೆ ಹಗ್ಗ ಕಟ್ಟಿದ್ದನ್ನೂ, ಕಿಡಕಿಯ ಮೇಲ್ಬಾಗದ ಕನ್ನಡಿ ಒಡೆದದ್ದನ್ನೂ ನೋಡಿ ಎಲ್ಲ ಸಂಗತಿಯು ಕೃಷ್ಣರಾಯನ ಲಕ್ಷದಲ್ಲಿ ಬಂದಿತು. ಈ ದುಷ್ಯನ ಕೈಯಿಂದ ಬಿಡುಗಡೆಯಾಗುವದಕ್ಕಾಗಿ ದಿವ್ಯಸುಂದರಿಯು ಮಾಡಿದ