ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Axt ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ. ಗಾಡಿಯು ಸಿಗುವದಿಲ್ಲ. ” ಎಂದಳು. ಆ ಹೆಂಗಸು ಕೆಳಗೆ ಕುಳಿತ ಕೂಡಲೆ ಎಲ್ಲ ಹೆಂಗ ಸರೂ ಕೆಳಗೆ ಕುಳಿತರು. ಮತ್ತು ತಮ್ಮ ತಮ್ಮೊಳಗೆ ದಿವ್ಯಸುಂದರಿಯ ವಿಷಯವಾಗಿ ಸಹಾನುಭೂತಿಯಿಂದ ಮಾತಾಡಹತ್ತಿದರು. ಆಗ ದಿವ್ಯಸುಂದರಿಯು ಒಬ್ಬ ಹೆಂಗಸನ್ನು ಉದ್ದೇಶಿಸಿ:- ಇಲ್ಲಿ ಬ್ರಾಹ್ಮಣರ ಮನೆಗಳು ಇರುವವೇ ಹೇಗೆ ? ” ಎಂದು ಕೇಳಲ; ಆ ಹೆಂಗಸು:-( ಇಲ್ಲ. ಒಬ್ಬ ಇಂದಿರೆಯೆಂಬ ಬ್ರಾಹ್ಮಣ ಸ್ತ್ರೀಯಳು ಮಾತ್ರ ಕೆಲವು ದಿವಸ ಇದ್ದಳು. ರಾಮಪುರದ ಕಾರಖಾನೆಯ ಅಧಿಪತಿಯೊಡನೆ ಅವಳ ಲಗ್ನ ವಾದದ ರಿಂದ ಅವಳು ಈಗ ರಾಮಪುರದಲ್ಲಿರುತ್ತಾಳೆ. ” ಎಂದನ್ನ ಲು ದಿವ್ಯಸುಂದರಿಯು ಆಶ್ಚರ್ಯಚಕಿತಳಾದಳು. ಅವಳಿಗೆ ಕೂಡಲೆ ಮತ್ತೊಂದು ಶಂಕೆಯು ಬಂದು ಅವಳು ಆ ಹೆಂಗಸನ್ನು ಕುರಿತು:-( ರಾಮಪುರದ ಕಾರಖಾನೆಯ ಅಧಿಪತಿಯ ಲಗ್ನವು ಈ ಪೂರ್ವದಲ್ಲಿ ಆಗಿದ್ದಿಲ್ಲವೇನು ? ೨” ಎಂದು ಕೇಳಲು ಒಬ್ಬ ಹೆಂಗಸು:-( ಹೌದು. ಆಗಿದ್ದಿತು. ಮೊದಲನೇ ಹೆಂಡತಿಯು ವ್ಯಭಿಚಾರಿಯಿದ್ದು, ಅವಳು ಯಾವನೋ ಒಬ್ಬನ ಸಂಗಡ ಓಡಿಹೋಗಿರುವಳಂತೆ, ” ಎಂದು ಅಂದಳು, ಈ ಮಾತನ್ನು ಕೇಳಿ ಯಂತೂ ದಿವ್ಯಸುಂದರಿಗೆ ಎಷ್ಟು ಖೇದವಾಯಿತೆಂಬುವದನ್ನು ವರ್ಣಿಸಲಿಕ್ಕೆ ನಮ್ಮಂಥ ಸಾವಿರಾರು ಲೆಕ್ಕಣಿಕೆಯಿಂದಾದರೂ ಆಗದು! ಆಗ ಮೂರನೇ ಒಬ್ಬ ಹೆಂಗಸು:- “ ನಮ್ಮ ಅಣ ನು ಕಾರಖಾನೆಯಲ್ಲಿ ನವಕರನಿದ್ದಾನೆ. ಅವನು ಮೊನ್ನೆ ಇಲ್ಲಿಗೆ ಬಂದಿ ದ್ದನು. ಅವನು ಹೇಳಿದ್ದೇನಂದರೆ:- ಕಾರಖಾನೆಯ ಚಾಲಕನ ಹೆಂಡತಿಯು ಓಡಿ ಹೋದದ್ದರಿಂದ, ಇನ್ನು ಮುಂದೆ ಲಗ್ನ ವಾಗಲಿಕ್ಕಿಲ್ಲೆಂದು ನಿಶ್ಚಯಮಾಡಿದ್ದಾನೆ. ಇಷ್ಟೇ ಅಲ್ಲ, ಕಾರಖಾನೆಯಲ್ಲಿ ಸ್ತ್ರೀಯರ ಪ್ರವೇಶವೇ ಆಗಬಾರದೆಂದು ಎಲ್ಲರಿಗೂ ಕಟ್ಟಪ್ಪಣೆ ಮಾಡಿದ್ದಾನೆ. ಇಂದಿರೆಯೊಡನೆ ಲಗ್ನ ವಾಯಿತೆಂಬುವದು ತೀರ ಸುಳ್ಳದೆ. ಅವಳು ಎರಡನೇ ಗ್ರಾಮಕ್ಕೆ ಹೋಗಿದ್ದಾಳೆ. ” ಎಂದು ಹೇಳಿದಳು. ಆಗ ಮತ್ತೊಬ್ಬ ಸ್ತ್ರೀಯಳು ದಿವ್ಯಸುಂದರಿಯನ್ನು ಕುರಿತು:-( ಅಮ್ಮಾ, ನೀವು ಈಗ ನಮ್ಮ ಮನೆಗೆ ನಡೆಯಿರಿ, ರಾತ್ರಿ ನಮ್ಮಲ್ಲಿದ್ದು ಬೆಳಗಾದ ಮೇಲೆ ರಾಮಪುರಕ್ಕೆ ಹೋಗಿರಿ. ” ಎಂದಂದಳು. ಆಗ ದಿವ್ಯಸುಂದರಿಯು ಹೊಳೆಯ ದಂಡೆಯ ಮೇಲೆ ತನ್ನಲ್ಲಿದ್ದ ಫಲಾ ಹಾರವನ್ನು ತಿಂದಳು, ಅನಂತರ ಒಕ್ಕಲಗಿತ್ತಿಯ ಹೇಳಿಕೆಯ ಪ್ರಕಾರ ಅವಳ ಮನೆ ಯಲ್ಲಿ ಅಂದಿನ ರಾತ್ರಿಯನ್ನು ಕಳೆದಳು. ಬೆಳಗಾದ ಮೇಲೆ ಪ್ರಾತರ್ವಿಧಿ ಮುಗಿಸಿ ಕೊಂಡು ಸಂಗಡ ಒಬ್ಬ ಮನುಷ್ಯನನ್ನು ಕರಕೊಂಡು ರಾಮಪುರದ ಮಾರ್ಗವನ್ನು ಹಿಡಿದಳು, ದೀನಳು ಎಂದೂ ಕಾಲನರಿಗೆಯಿಂದ ನಡೆದವಳಲ್ಲ; ಆದರೂ ಪ್ರಸಂಗಿ ಮನುಷ್ಯನಿಗೆ ಎಲ್ಲವನ್ನೂ ಕಲಿಸುವದಾದದ್ದರಿಂದ ಅವಳು ದುಃಖವನ್ನು ಸೋಸುತ್ತ ನಡೆದು ಹೋಗುತ್ತಿದ್ದಳು, ನಡೆನಡೆದು ಸಾಕಾಯಿತೆಂದರೆ ಗಿಡದ ಬುಡದಲ್ಲಿ ಕುಳಿತು ಕೊಳ್ಳಬೇಕು, ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಬೇಕು, ಅನಂತರ ಮತ್ತೆ ನಡೆ ಯಬೇಕು ಎಂಬೀ ಕ್ರಮದಿಂದ ಅವಳು ಮಧ್ಯಾಹ್ನದ ಹನ್ನೆರಡು ಹೊಡೆಯುವ