ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

€ 41 ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ. Mwwwswwwmvwwwx ಯೊಂದು ಹೆಜ್ಜೆಯನ್ನು ನಿಶ್ಚಯದಿಂದ ಕಿತ್ತು ಹಾಕುತ್ತಿದ್ದಳು. ಸೂರ್ಯನು ಮುಳುಗಿ ದನು, ಸಾಯಂಕಾಲವಾಯಿತು; ಆದರೂ ಅವಳು ಒಂದೇಸವನೆ ನಡೆದಿದ್ದಳು. ಹೋಗುಹೋಗುತ್ತ ಅವಳು ಗುಡ್ಡದ ತಲೆಯ ಮೇಲೆ ಹೋದಳು. ಆಗ ಮಾತ್ರ ಅವ ಳಿಗೆ ಬಹಳ ಸಾಕಾಯಿತು, ಒಂದು ಹೆಜ್ಜೆಯನ್ನಾದರೂ ಮುಂದಕ್ಕೆ ಕಿತ್ತು ಇಡುವ ಶಕ್ತಿಯು ಅವಳಲ್ಲಿ ಉಳಿದಿರಲಿಲ್ಲ. ಕಾರಣ ಅವಳು ನಿಂತಲ್ಲಿಯೇ ನಿಂತುಬಿಟ್ಟಳು. ಆಗ ಅವಳಿಗೆ ತನ್ನಿಂದ ಸ್ವಲ್ಪ ಅಂತರದ ಮೇಲೆ ಒಂದು ಸಣ್ಣ ಸರೋವರವು ಕಾಣಿಸಿತು. ಮತ್ತು ಸರೋವರದ ಆಚೇಕಡೆಗೆ ಒಂದು ಗುಡಿಸಲು ಕಾಣಿಸಿತು, ಆದರೆ ಅವಳಿಗೆ ಮುಂದಕ್ಕೆ ಹೋಗುವ ಶಕ್ತಿಯಿಲ್ಲದ್ದರಿಂದ ಅವಳು ಅಲ್ಲಿಯೇ ಒಂದು ದೊಡ್ಡ ಮರದ ಕೆಳಗೆ ಪವಡಿಸಿದಳು, ನೆಲವು ಸಿಗುತ್ತಲೇ ಅವಳಿಗೆ ಗಾಢನಿದ್ರೆಯು ಹತ್ತಿತು. ಅಸ್ತಾಚಲ ದಲ್ಲಿ ಹೋದ ಸೂರ್ಯನು ಉದಯಾಚಲದಲ್ಲಿ ಬಂದನು, ಅವನ ಅರುಣಪ್ರಭೆಯಿಂದ ಕೃಥ್ವಿಯು ಪ್ರಕಾಶಮಾನವಾಗಹತ್ತಿತು. ಪರ್ವತದ ಮೇಲೆ ದಿವ್ಯಪ್ರಕಾಶವು ಪಸರಿ ಸಿತು. ಆದರೂ ದಿವ್ಯಸುಂದರಿಯು ಗಾಢನಿದ್ರೆಯಲ್ಲಿದ್ದಳು. ಹೀಗೆ ಎಷ್ಟೋ ಹೊತ್ತು ಗಾಢನಿದ್ರಾವಸ್ಥೆಯಲ್ಲಿರುವಾಗ ಯಾರೋ • ದಿವಸುಂದರಿ-ದಿವ್ಯಸುಂದರಿ ” ಎಂದು ನಾಲೈದು ಸಾರೆ ಕರೆದದ್ದರಿಂದ ಅವಳಿಗೆ ಒಮ್ಮೆಲೇ ಎಚ್ಚರವಾಯಿತು. ಅವಳು ಕಣ್ಣು ತೆಗೆದು ಅತ್ತಿತ್ತ ನೋಡಹತ್ತಿದಳು. ಒಬ್ಬ ಪ್ರಶಾಂತ ಮತ್ತು ಪ್ರಭಾವಶೀಲ ಸನ್ಯಾಸಿನಿಯ ತೊಡೆಯ ಮೇಲೆ ತನ್ನ ಮಸ್ತಕವಿದ್ದು, ಅವಳು ತನಗೆ ಆಲಿಂಗನಮಾಡು ತಿರುವದನ್ನು ನೋಡಿ ದಿವ್ಯಸುಂದರಿಗೆ ಆಶ್ಚರ್ಯವಾಯಿತು. ತಾನು ಎಲ್ಲಿದ್ದೇನೆಂಬ ಕಲ್ಪನೆಯೇ ಅವಳಿಗೆ ಆಗಲಿಲ್ಲ. ಅವಳು ಆಗ ಕುಗ್ಗಿದ ಸ್ವರದಿಂದ:- ಅವ್ವಾ, ನೀವು ಯಾರು ? ಒಂದು ಗಿಡದ ಕೆಳಗೆ ಮಲಗಿದ ನಾನು ಈ ದೇವಾಲಯಕ್ಕೆ ಹೇಗೆ ಬಂದೆನು? ೨” ಎಂದಳು, ಶುಶೂಷೆಯನ್ನು ಮಾಡುವ ಸನ್ಯಾಸಿನಿಯು:-( ದಿವ್ಯ ಸುಂದರಿ, ನನ್ನ ಗುರ್ತು ಹತ್ತಲಿಲ್ಲವೇ? ನಾನು ನಿನ್ನ ಸಖಿ ನರ್ಮದೆಯು, ” ಎಂದಂದ ಕೂಡಲೆ ದಿವ್ಯಸುಂದರಿಯು ಪೂರಾ ಕಣ್ಣು ತೆಗೆದು ನೆಟ್ಟಗೆ ನರ್ಮದೆಯ ಕಡೆಗೆ ನೋಡಿದಳು. ಆಗ ದಿವ್ಯಸುಂದರಿಗೆ ಹೇಗಾಯಿತೋ ಏನೋ, ಅವಳನ್ನು ಕಂಡು ಬಿಕ್ಕಿ ಬಿಕ್ಕಿ ಅಳಹತ್ತಿದಳು. ಇವಳು ಹೀಗೆ ಯಾಕೆ ಅಳುತ್ತಾಳೆ, ಈ ಅರಣ್ಯದಲ್ಲಿ ಒಬ್ಬಳೇ ಯಾಕೆ ಹೀಗೆ ಬಂದಳು; ಎಂಬುವದು ನರ್ಮದೆಗೆ ಏನೂ ತಿಳಿಯಲಿಲ್ಲ, ಈ ಸ್ಥಿತಿಯಲ್ಲಿ ದಿವ್ಯಸುಂದರಿಗೆ ಕೇಳುವದೂ ಶಕ್ಯವಿದ್ದಿಲ್ಲ. ಯಾಕಂದರೆ, ಅವಳ ಸ್ಥಿತಿಯು ಬಹಳ ಸಾಮಾನ್ಯ ತರಹದ್ದಾಗಿದ್ದಿತು. ಅಳುಅಳುತ್ತಲೇ ಅವಳು ಮೂರ್ಛ ಬಂದು ಬೀಳುತ್ತಿ ದ್ದಳು, ನರ್ಮದೆಯು ಒಳ್ಳೇ ಕಷ್ಟದಿಂದ ಅವಳನ್ನು ಸುಮ್ಮನಿರಿಸಿದಳು, ಮೂರು ನಾಲ್ಕು ದಿವಸದೊಳಗೆ ದಿವ್ಯಸುಂದರಿಗೆ ಸ್ವಲ್ಪ ಗುಣವಾಗಲು ಆಗ ನರ್ಮದೆಯು ಅವಳ ಸಂಗತಿಯನ್ನು ವಿಚಾರಿಸಿದಳು.