ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

7ನೆಯ ಪ್ರಕರಣ- ಪ್ರೇಮದ ಸುಂದರಭವನ txt S ೯ ನೆಯ ಪ್ರಕರಣ | ======= ಪ್ರೇಮದ ಸುಂದರ-ಭವನ. G= YY\'UNG/v 1,” 14) 12. . ರ್d A ል ታ ኣ ብ'2 » 2 / ರು ವರ್ಷ ಅಗಲಿದ ದಿವ್ಯಸುಂದರಿ-ನರ್ಮದೆಯರ ಭಟ್ಟಿಯು ಇಂದು ಅಕಸ್ಮಾತ್ತಾಗಿ ಪ್ರಾಪ್ತವಾಗಿದ್ದಿತು. ಸನ್ಯಾಸವೃತ್ತಿಯಿಂದ ಇರುವದು ಅತ್ಯಂತ ಕಠಿಣವೆಂದು ನರ್ಮದೆಗೆ, ಅವಳ ತಂದೆ ತಾಯಿಗಳು ಬಹಳ ಸಾರೆ ಹೇಳಿದ್ದರು; ಆದರೆ ಆ ನಿಶ್ಚಯಸ್ವಭಾ ವದ ತರುಣಿಯು ಒಂದೇಸವನೆ ಆರು ವರ್ಷ ಅರಣ್ಯದಲ್ಲಿದ್ದು, ಎಷ್ಟೋ ರೀತಿಯಿಂದ ಸ್ವಪ್ರಗತಿಯನ್ನು ಮಾಡಿಕೊಂಡಿದ್ದಳು, ಅರ್ಧ ತಪಸ್ತೇಜ ದಿಂದಲೇ ಅವಳು ವಿಲಕ್ಷಣಪ್ರಶಾಂತಳೂ, ಪ್ರಭಾವಶೀಲಳೂ ಆಗಿದ್ದಳು. ಅವಳ ದೃಷ್ಟಿಯು ಪ್ರೇಮಲವಾಗಿಯೂ, ಸತೇಜವಾಗಿಯೂ ಕಾಣಿಸುತ್ತಿದ್ದಿತು. ಅವಳ ವಾಣಿಯು ಮಧುರವೂ, ಗಂಭೀರವೂ ಆಗಿದ್ದಿತು. ಪರಬ್ರಹ್ಮನ ಸಾನ್ನಿಧ್ಯದಿಂದ ಅವಳ ಮನಸ್ಸು ಉಲ್ಲಸಿತವಾಗಿದ್ದಿತು, ಈ ಪ್ರಕಾರ ಪವಿತ್ರತೆಯಿಂದ ಸತೇಜವಾದ ರಮಣೀಯತ್ವವನ್ನು ದಿವ್ಯಸುಂದರಿಯು ಇಂದಿನವರೆಗೆ ಎಲ್ಲಿಯೂ ನೋಡದ್ದರಿಂದ, ಅವಳಿಗೆ ನರ್ಮದೆಯ ದರ್ಶನದಿಂದ ಅವರ್ಣನೀಯವಾದ ಆಶ್ಚರ್ಯವಾಯಿತು. ನರ್ಮದೆಯ ಇತಿಹಾಸವು ಅಷ್ಟೇನೂ ದೊಡ್ಡದಿದ್ದಿಲ್ಲ. ಅವಳು ಅದನ್ನು ಹತ್ತು-ಹದಿ ನೈದು ಮಿನೀಟಿನಲ್ಲಿ ದಿವ್ಯಸುಂದರಿಗೆ ಹೇಳಿದಳು, ಮನೆಯನ್ನು ಬಿಟ್ಟು ಬಂದ ಮೇಲೆ ಅವಳು ಒಬ್ಬ ಯೋಗಿಯ ಹತ್ತರ ಯೋಗಶಾಸ್ತ್ರದ ಅಭ್ಯಾಸಮಾಡಿದಳು, ಮತ್ತು ಯೋಗಿಯ ಹೇಳಿಕೆಯಂತೆ ಅವಳು ಪರ್ವತದ ಮೇಲಿನ ಪೂರ್ಣೇಶ್ವರವೆಂಬ ಹೆಸರಿನ ದೇವಾಲಯಲಕ್ಕೆ ಬಂದು ಏಕಾಂತದಲ್ಲಿ ಅರಹತ್ತಿದಳು, ಈ ಮೊದಲೇ ಕಂದಮೂಲ ಗಳ ಮೇಲೆ ಇರುವ ರೂಢಿಯಿದ್ದದ್ದರಿಂದ ಅವಳಿಗೆ ಆ ಅರಣ್ಯದಲ್ಲಿ ಹೇಗೆ ನಿರ್ವಾಹ ಮಾಡಬೇಕೆಂಬ ವ್ಯಸನವೇ ಇದ್ದಿಲ್ಲ, ನರ್ಮದೆಯು ತನ್ನ ಚರಿತ್ರೆಯನ್ನು ಹೇಳಿದ ಮೇಲೆ ದಿವ್ಯಸುಂದರಿಯು ತನ್ನ ಕಥೆಯನ್ನೆಲ್ಲ ನರ್ಮದೆಗೆ ಹೇಳಿದಳು. ದಿವ್ಯಸುಂದ