ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆತ್ಮನಿವೇದನೆ. YAAAA SANAA AArt AAAAAAAA AAAAAAAA//\ AAAA AAAA * AAAA ೧ ೧೧• Ah AAA ೧೧ ೧೧AAAA ಬುದ್ದಿಯು ವರ್ಣನೀಯವೂ, ಅನುಕರಣೀಯವೂ ಆಗಿರುವದರಿಂದ ಇವರ ಸಂಬಂಧ ವಾದ ನಾಲ್ಕು ಮಾತುಗಳನ್ನು ಇಲ್ಲಿ ಬರೆದರೆ ಅಪ್ರಾಸಂಗಿಕವಾಗಲಿಕ್ಕಿಲ್ಲೆಂದು ಭಾವಿಸಿ, ಆ ಪ್ರಕಾರ ನಾಲ್ಕು ಮಾತು ಬರೆದಿರುವೆನು. ಇವರ ಸಂಬಂಧವಾದ ನಾಲ್ಕು ಮಾತುಗಳಿಂದ CC ನೊರೆಹಾಲು ತುಂಬಿದ ಕೆಚ್ಚಲೊಳಗಿನ ಉಣ್ಣೆ ಯಂತೆ ೨೨ ದುಡ್ಡಿದ್ದರೂ ಅದರ ನಿಜವಾದ ಉಪಯೋಗಮಾಡದೆ, ಲೋಭಿಗಳಾಗಿ ಗತಿಸಿ ಹೋಗುವ ಶ್ರೀಮಂತರಿಗೆ ಎಚ್ಚರಿಕೆ ಹುಟ್ಟುವಂತಿದೆ. - ಶ್ರೀ, ಅಡಿವಪ್ಪನವರು ಕೈಲಾಸವಾಸಿಗಳಾಗಿರುವ ಶ್ರೀ. ದೊಡ್ಡ ಶಿವಲಿಂಗಪ್ಪ ನವರ ಹಿರಿಯ ಮಕ್ಕಳು, ದೊಡ್ಡ ಶಿವಲಿಂಗಪ್ಪನವರು ಉದ್ಯೋಗಶೀಲರೂ, ಆಚಾ ರನಿರತರೂ, ಸರಕಾರಪ್ರಿಯರೂ ಆಗಿದ್ದರು. ಅವರು ಉದ್ಯೋಗವಿಲ್ಲದೆ ಒಂದು ಕ್ಷಣ ಸಹಾ ಕಳೆಯುತ್ತಿರಲಿಲ್ಲ. ತಮ್ಮ ಕಾಲದಲ್ಲಿ ಅನಂತ ಜನೋಪಕಾರಕಾರ್ಯಗಳನ್ನು ಮಾಡಿರುವರು. ಇನ್ನು ನಮ್ಮ ಶ್ರೀ, ಅಡಿವಪ್ಪನವರು ಆಚಾರವಿಚಾರಗಳಲ್ಲಿ ತಂದೆಗಿಂತಲೂ ಒಂದು ಹೆಜ್ಜೆ ಮುಂದಿಟ್ಟಿರುವರು. ಇವರು, ವ್ಯವಹಾರಕ್ಕೆ ಬೇಕಾಗು ವಷ್ಟು ಕನ್ನಡ, ಇಂಗ್ಲಿಷ, ಮರಾಠಿ ಅಭ್ಯಾಸಮಾಡಿರುವರು. ಇವರು ಬಹು ವಿದ್ಯಾಭಿ ಮಾನಿಗಳಾಗಿರುವರು. ಶಾಲೆಗೆ ಪುನಃ ಪುನಃ ಬಂದು ಶಾಲೆಯನ್ನು ತಪಾಸಮಾಡಿ, ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ತಕ್ಕ ಉತ್ತೇಜನ ಕೊಡುತ್ತಿರುವರು. ಪರಸ್ಥಳದ ಬಡ ಹುಡುಗರಿಗೆ ಮನೆಯಲ್ಲಿ ಅನ್ನ ಹಾಕಿ, ಅವರಿಗೆ ಬೇಕಾದ ಪಾಟಿಪುಸ್ತಕ ಮೊದಲಾದ ವುಗಳನ್ನು ಕೊಡಿಸಿ ಅವರ ವಿದ್ಯಾಭ್ಯಾಸವನ್ನು ಹೆಚ್ಚಿಸುತ್ತಿರುವರು. ಇವರು ತಮಗಿ ರುವ ತಮ್ಮನೊಬ್ಬನನ್ನು ಪುತ್ರವತ್‌ ಪ್ರೇಮದಿಂದ ಕಾಣುವರು. ಇವರೀರ್ವರು ಅಣ್ಣ ತಮ್ಮಂದಿರನ್ನು ನೋಡಿದರೆ, ನೋಡಿದ ಪ್ರತಿಯೊಬ್ಬ ಮನುಷ್ಯನು ಇವರನ್ನು ಜೀವಕ್ಕೆ ಜೀವಗೊಡುವ ಪರಮ ಮಿತ್ರರೆಂದೇ ತರ್ಕಿಸುವನು. ಇದೊಂದು ಪ್ರತಿ ಯೋಬ್ಬರು ಅನುಕರಣ ಮಾಡಬಹುದಾದ ವಿಷಯವಾಗಿದೆ. ಇವರು ಲೋಕಟ್ಟೋರ್ಡ ಚೇಅರಮನ್, ಡಿ. ಸಾ. ಚೇಅರಮನ್, ಕೋಅಪ ರೇಟಿವ್ ಸೊಸಾಯಟಿ ಮೆಂಬರ, ಲಿಂಗಾಯತ ಜನರಲ್ ಕಮೀಟಿ ಮೆಂಬರ, ವೀರ ಶೈವ ಮಹಾಸಭಾ ಆಜೀವ ಸಭಾಸದ, ಲಿಂಗಾಯತ ರಿಕ್ರೂಟಿಂಗ ಕಮೀಟಿ ಚೇಅರ ಮನ್, ಹಾಂವಸಭಾವಿ ವೀರಶೈವ ಮೃತ್ಯುಂಜಯ ಇಂಗ್ಲೀಷಸ್ಕೂಲ ಪ್ರೆಸಿಡೆಂಟ, ಡಿ. ಸ್ಯಾ, ಮ್ಯಾನೇಜಿಂಗ ಕಮೀಟಿ ಮೆಂಬರ, ವಾಚನಾಲಯ ಕ್ಲಾ. ಪ್ರೆಸಿಡೆಂಟ ಈ ಮೊದಲಾದ ಅಧಿಕಾರಯುಕ್ತರಾಗಿರುವದರಿಂದ ಇವರು ಎಷ್ಟು ಜನಪ್ರಿಯರೂ, ಸರ