ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ನೆಯ ಪ್ರಕರಣ- ಪ್ರೇಮದ ಸುಂದರ.ಭವನ. ೧೩೭ ••••••••••••••••MAAAAAAMAp ಮಧ್ಯಾ- ಹನ್ನೆರಡು ಹೊಡೆದಾಗ ತಾನಾಗಿಯೇ ಬಾಗಿಲಿಗೆ ಬಂದ ಸಾಧೀಸತಿ ಯನ್ನು ದೂರೀಕರಿಸಿದ ವಿನಾಯಕನು, ತಾನೂ ಮಟಮಟ ಮಧ್ಯಾಹ್ನದಲ್ಲಿಯೇ ಕಾರಖಾನೆಯನ್ನು ದೂರೀಕರಿಸಿದನು. ಸರ್ವಜನರು ಕಣ್ಣೀರು ಸುರಿಸುತ್ತಿರಲು ನೀವೆ ಲ್ಲರೂ ಪರಮೇಶ್ವರ ರೂಪಿಗಳಿದ್ದೀರೆಂದು ಹೇಳಿ ನಮಸ್ಕಾರಮಾಡಿ, ಕಾರಖಾನೆಯ ಕಡೆಗೆ ಬೆನ್ನು ಮಾಡಿ ದಿವ್ಯಸುಂದರಿಯು ಹೋದ ಮಾರ್ಗವನ್ನು ಹಿಡಿದು ಹೋಗಹತ್ತಿ ದನು. ಅವನು ಈ ಗುಡ್ಡದಿಂದ ಆ ಗುಡ್ಡಕ್ಕೆ ಈ ಅಡವಿಯಿಂದ ಆ ಅಡವಿಗೆ ಹೋ ಗುತ್ತ ಹೋಗುತ್ತ ಒಂದು ತಿಂಗಳು ಗುಡ್ಡಗಾಡಪ್ರದೇಶದಲ್ಲಿಯೇ ಕಾಲಗಳೆದನು; ಆದರೆ ಅವನಿಗೆ ದಿವ್ಯಸುಂದರಿಯ ಶೋಧವೇ ಆಗಲಿಲ್ಲ. ಒಂದು ತಿಂಗಳೆಂಬುವದರೊ ಳಗೆ ಅವನ ಶರೀರದಲ್ಲಿ ವಿಲಕ್ಷಣ ತಾರತಮ್ಯವಾಯಿತು, ಅತ್ಯಂತ ಜೀವಕ್ಕೆ ಜೀವ ಗೊಡುವ ಮಿತ್ರನಿಂದಲೂ ವಿನಾಯಕನ ಗುರ್ತು ಹಿಡಿಯುವದಾಗುವಂತಿದ್ದಿಲ್ಲ. ಈ ಅಡವಿಯಲ್ಲಿ ತಾನೊಬ್ಬನೇ ತಿರುಗುತ್ತೇನೆಂದು ವಿನಾಯಕನ ಕಲ್ಪನೆಯಿದ್ದಿತು; ಅದರೆ ವಸ್ತುಸ್ಥಿತಿಯು ಹಾಗಿದ್ದಿಲ್ಲ. ಅವನ ಹಿಂದೆಯೇ ಒಬ್ಬ ಅನುಚಾರಿಕೆಯು ತಿರುಗುತ್ತಿ ದ್ದಳು. ವಿನಾಯಕನು ಕುಳಿತನೆಂದರೆ, ಅವಳೂ ಒಂದು ಗಿಡದ ಮರೆಗೆ ಕುಳಿತು ಕೊಳ್ಳುತ್ತಿದ್ದಳು. ವಿನಾಯಕನು ಎದ್ದನೆಂದರೆ, ಅವಳೂ ಎದ್ದು ಅವನ ಹಿಂದೆ ನಡೆ ಯುತ್ತಿದ್ದಳು. ತನ್ನ ಶರೀರದ ಮೇಲೆಯೇ ಅರುವಿಲ್ಲದ ವಿನಾಯಕನಿಗೆ ಆಗ ತನ್ನ ಹಿಂದೆ ಯಾರು ಬರುತ್ತಾರೆಂಬ ಕಲ್ಪನೆಯೂ ಕೂಡ ಹುಟ್ಟಲಿಲ್ಲ. ವಿನಾಯಕನ ಹಿಂದಿದ್ದ ತರುಣಿಯು ಇಂಥವಳೇ ಎಂಬದನ್ನು ನಮ್ಮ ಚಾಣಾಕ್ಷ ವಾಚಕರು ತರ್ಕಿಸಿರಬಹುದು. ವಾಚಕರೇ, ನಿಮ್ಮ ತರ್ಕದಂತೆ ಅವಳು ಇಂದಿರೆಯು ಹೌದು, ಈ ಪ್ರಕಾರ ವಿನಾಯ ಕನ ಹಿಂದೆ ತಿರುಗುವದರಲ್ಲಿ ಅವಳ ಉದ್ದೇಶವೇನಿದ್ದಿ ತೋ ಏನೋ ಅದು ಈಶ್ವರನಿಗೆ ಅರಿಕೆ ! ಆ ಗುಡ್ಡಗಾಡು ಪ್ರದೇಶದಲ್ಲಿ ಹೊಕ್ಕು ತಿಂಗಳಾದ ಮೇಲೆ, ತಿರುಗುತ್ತ ತಿರು ಗುತ್ತ ಈಶ್ವರೀಸಂಕೇತದಿಂದಲೋ ಏನೋ, ವಿನಾಯಕನು ಪೂರ್ಣೆಶ್ವರ ದೇವಾಲ ಯದ ಹತ್ತಿರ ಬಂದನು. ಬಂದ ಕೂಡಲೇ ದೇವರನ್ನು ನೋಡಬೇಕೆಂದು ಅವನು ದೇವಾಲಯವನ್ನು ಹೊಕ್ಕು, ಎದುರಿಗೆ ಕಾಣಿಸುವ ಶಿವಲಿಂಗಕ್ಕೆ ಸಾಷ್ಟಾಂಗ ನಮ ಸಾರಮಾಡಿ, ಸ್ವಲ್ಪ ದೃಷ್ಟಿಯನ್ನು ಹೊರಳಿಸಲು ಅವನಿಗೆ ಪ್ರಶಸ್ತಿ ಪ್ರಕಾಶದ ಕಿಡ ಕಿಯ ಹತ್ತರ ಧ್ಯಾನನಿಮಗ್ನಳಾಗಿ ಕುಳಿತಿದ್ದ ಗೌರವರ್ಣದ ಒಬ್ಬ ತರುಣಿಯು ಕಾಣಿ ಸಿದಳು. ಆಗ ಅವನು ಆಶ್ಚರ್ಯಚಕಿತನಾಗಿ ಒಳ್ಳೆ ದಿಟ್ಟಿಸಿ ಆ ತರುಣಿಯ ಕಡೆಗೆ ನೋಡಿ ಅವಳ ಗುರ್ತುಹಿಡಿದು 1 ದಿವ್ಯ ಸುಂದರಿ ' ಎಂದು ಕರೆದನು. ಕೂಡಲೆ ಧ್ಯಾನಸ್ಥ ತರುಣಿಯು ಮುಚ್ಚಿದ ಕಣ್ಣುಗಳನ್ನು ತೆರೆದು ನೋಡುತ್ತಾಳೆ ! ತನ್ನ ಹೃದ ಯೇಶ್ವರ ವಿನಾಯಕನು ಹತ್ತರವೇ ನಿಂತಿದ್ದಾನೆ. ಆಗ ಅವಳು ತಟ್ಟನೆ ಎದ್ದು ದಬದಬ ಸಂತೋಷದ ಕಣ್ಣೀರಿನ ಮಳೆಯನ್ನು ಸುರಿಸುತ್ತ ಪ್ರೇಮಭರದಿಂದ ಪತಿಯನ್ನು ಆವಚಿಕೊಂಡಳು.