ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ, ವಾಚಕರೇ! ಆಗಿನ ಅವರೀರ್ವರ ಚಮತ್ಕಾರಿಕವಾದ ಮುಖಮುದ್ರೆಯ ಪ್ರತಿ ಬಿಂಬವನ್ನು ಈ ಕಾದಂಬರಿಯಲ್ಲಿ ಹಾಕಿ ನಿಮ್ಮ ನೇತ್ರಾನಂದವನ್ನು ಮಾಡಬೇಕೆಂದು ನಮ್ಮ ಅಪೇಕ್ಷೆಯಿದ್ದರೂ, ರವಿವರ್ಮನು ವಿಶ್ವಕರ್ಮಾವತಾರಿಯಾಗದ್ದರಿಂದ ನಮ್ಮ ಇಷ್ಟವು ಪೂರ್ಣವಾಗಲಿಲ್ಲ, ಇನ್ನು ಅವರು ಪರಸ್ಪರ ಆಲಿಂಗನಮಾಡಿದ ಕಾಲಕ್ಕೆ ಅವರ ಮನಸ್ಸಿಗೆ ಎಷ್ಟು ಆನಂದವಾಯಿತೆಂಬುವದನ್ನು ಹೇಳಬೇಕಾದರೆ ನಾವು ಅವರ ಹೃದಯವನ್ನೇ ಸೀಳಿ ನೋಡಿ ವರ್ಣಿಸಬೇಕಾಗಿದ್ದಿತು. ಹಾಗೆ ಮಾಡುವದು ಅಸಂಭ ವನೀಯವಾದದ್ದರಿಂದ ಆ ಆನಂದದ ಬಗ್ಗೆಯೂ ನಾವು ವರ್ಣಿಸಿರುವದಿಲ್ಲ. ಈ ಬಗ್ಗೆ ಕ್ಷಮೆಯಿರಲಿ. ಆಲಿಂಗನಾನಂತರ ಈರ್ವರೂ ತಮಗೊದಗಿದ ದುಃಖಮಯ ಸಂಗತಿಯ ಸಲು ವಾಗಿ ಎಷ್ಟೋ ಹೊತ್ತು ಮಾತಾಡುತ್ತ ಕುಳಿತುಕೊಂಡರು. ಅವರ ಪ್ರಸ್ತಾಪವು ಮುಗಿ ಯುವಾಗ ನರ್ಮದೆಯು ಅವರ ಬಳಿಗೆ ಬಂದು ಈರ್ವರೂ ರತಿಮನ್ಮಥರಂತೆ ಕುಳಿ ತದ್ದು ನೋಡಿ, ಸಂತೋಷಪ್ರದರ್ಶನಮಾಡಿದಳು, ಅನಂತರ ನರ್ಮದೆಯ ಆಗ್ರಹದ ಪ್ರಕಾರ ಮೂರು ನಾಲ್ಕು ದಿವಸ ಅವಳ ಬಳಿಯಲ್ಲಿಯೇ ಇದ್ದು, ಆ ಮೇಲೆ ವಿನಾಯ ಕನು ದಿವ್ಯಸುಂದರಿಯೊಡನೆ ಕಾರಖಾನೆಗೆ ಬಂದನು. ಆಗ ಕಾರಖಾನೆಯೊಳಗಿನ ಯಾವತ್ತೂ ಜನರಿಗೆ ಕಳಕೊಂಡ ಅಮೃತವು ಪುನಃ ಸಿಕ್ಕಾಗ ದೇವತೆಗಳಿಗೆ ಆನಂದ ವಾದಷ್ಟು ಆನಂದವಾಯಿತು. 6 ವಿನಾಯಕನು ಪತ್ನಿ ಸಮೇತ ತಿರುಗಿ ಕಾರಖಾನೆಗೆ ಬಂದ ಸಂಗತಿಯನ್ನು ಕೇಳಿ ಅವನ ಆಪ್ಡೇಷ್ಟರು ಆನಂದಾಬ್ಲಿಯಲ್ಲಿ ಮುಳುಗಿದರು, ಕೃಷ್ಣರಾಯ, ರಾಮ ರಾಯ, ಯಮುನೆ, ಮಧುರೆ ಮೊದಲಾದವರು ಒಮ್ಮೆ ಕಾರಖಾನೆಗೆ ಬಂದು ಮೂರು ನಾಲ್ಕು ದಿವಸವಿದ್ದು ಮರಳಿ ಹೊರಟುಹೋದರು. ವಿನಾಯಕನು ಮತ್ತಷ್ಟು ಉಮೇದಿನಿಂದ ಕಾರಖಾನೆಯ ಕೆಲಸವನ್ನು ಮಾಡ ಹತ್ತಿದ್ದರಿಂದ ಕಾರಖಾನೆಯ ಉತ್ಪನ್ನವು ಕಲ್ಪನಾತೀತವಾಗಿ ಬೆಳೆಯಿತು. ವಿನಾಯ ಕನು ಆಗ ಕೆಲವು ಹಣ ಖರ್ಚು ಮಾಡಿ ತನ್ನ ಯೋಗ್ಯತೆಗೆ ತಕ್ಕಂಥ ಒಂದು ಬಂಗಲೆ ಯನ್ನು ಕಟ್ಟಿಸಿದನು. ಆ ಬಂಗಲೆಯಲ್ಲಿ ವಿನಾಯಕನು ದಿವ್ಯಸುಂದರಿಯೊಡನೆ ಇರ ಹತ್ತಿದ ಕೂಡಲೆ ಯಾರೋ ಬೆಳಗಾಗುವದರೊಳಗೆ ಬಂದು ಆ ಬಂಗಲೆಯ ಮುಂದಿನ ಅಂಗಳದ ಕಸವನ್ನು ತೆಗೆದು ನೆಲಸಾರಣಮಾಡಿ ಹೋಗಹತ್ತಿದರು. ಇದು ವಿನಾಯ ಕನ ಲಕ್ಷದಲ್ಲಿ ಬಂದ ಕೂಡಲೆ ಅವನು ತನ್ನ ಸಲುವಾಗಿ ಯಾರಿಗೂ ಶ್ರಮವಾಗಬಾರ ದಂದು ಆ ಪ್ರಕಾರ ಸೇವೆಮಾಡುವವರ ಶೋಧಮಾಡಿದನು, ಆದರೆ ಅವನಿಗೆ ಯಾರೂ ಸಿಗಲಿಲ್ಲ. ಇದೆಲ್ಲ ಯಾರ ಕೃತ್ಯವಿದ್ದೀತೆಂಬದನ್ನು ನಮ್ಮ ವಾಚಕರು ಮಾತ್ರ ಕಂಡು