ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- • ವಾ ದೀರ್ಘ ಪ್ರಯತ್ನ, ೦೦೦೦೦೦೦ ೧೧ಂಗ್ ••ಂ. ಆಗ ಏನಾಯಕನು ದಿವ್ಯಸುಂದರಿಯನ್ನು ಕುರಿತು:-« ದಿವ್ಯಸುಂದರಿ, ಇಂದಿರೆಯು ಏನು ಬರೆದಿದ್ದಾಳೆ ?” ಎಂದನು. ಆಗ ದಿವ್ಯಸುಂದರಿಯು ಉಲ್ಲಾಸದಿಂದ:- CC ಪ್ರೇಮದ ಸುಂದರ-ಭವನ » ಎಂದಳು. ವಿನಾಯಕನು ಪ್ರೇಮಾತಿಶಯದಿಂದ ಇಂದಿರೆಯ ಮನೋಭೀಷ್ಟವನ್ನು ಪೂರ್ಣಮಾಡಿ ಕೃತಕೃತ್ಯನಾದನು. ಇದರಿಂದ ದಿವ್ಯ ಸುಂದರಿ ಮೊದಲಾದ ವಿನಾಯ ಕನ ಯಾವತ್ತೂ ಆಪ್ಡೇಷ್ಟರಿಗೆ ಪರಮಾನಂದವಾಯಿತು. ಸಾಂಬನು ಸರ್ವರಿಗೂ ಸುಖವನ್ನುಂಟುಮಾಡಲಿ! ಮತ್ತು ನಮ್ಮನ್ನು ಪುತ್ರವತ್ ಸದಯಾಂತಃಕರಣದಿಂದ ಕಾಪಾಡುತ್ತಿರುವ ಸಾರ್ವಭೌಮ ಪಂಚಮಜಾರ್ಜ ಪ್ರಭುಗಳಿಗೆ ತೀವ್ರವೇ ಸಾಂ ಪ್ರತ ಘನಘೋರ ಯುದ್ಧದಲ್ಲಿ ಜಯವನ್ನು ಕೊಡಲಿ!! ವೃತ್ತ ಅವನ ಕಾರಭಾರದಲಿ ಭಾರತದೊಳ್ ಸುಖಶಾಂತಿ ತೋರ್ಪುದೋ । ಆವನ ಕಾರಭಾರದಲಿ ವಿದ್ಯೆಯ ದುಂದುಭಿ ಗರ್ಜಿಸುತ್ತದೋ || ಅವನ ಕಾರಭಾರದಲಿ ಧರ್ಮಕೆ ವಿಷ್ಣುವು ತಟ್ಟಲಾರದೋ | ಆ ವರಕಾರಭಾರ, ವರಜಾರ್ಜನರೇಂದ್ರನದಲ್ಲದಾರದೋ | $ $ $ $ ಅವನು ಭೋಗದಲ್ಲಿ ಸುರಭೂಪ! ಪರಾಕ್ರಮದಲ್ಲಿ ಸಿಂಹನೋ! ಅವನು ದಾನದಲ್ಲಿ ಕಲಿಕರ್ಣ ! ಸುರೂಪದೊಳಾರತೀಶನೋ || ಆವನು ಶೀಲದಲ್ಲಿ ಜನಮೇಜಯ ! ನೀತಿಗೆ ಚಾರು ಶುಕ್ರನೋ ! ಆ ವರಜಾರ್ಜಭೂಪನತಿತೀವ್ರದೆ ಪೊಂದಲಿ ಯುದ್ಧ ಕೀರ್ತಿಯಂ | ( ಆ ವರಜಾರ್ಜ ಭೂಪ ಸಲೆ ಧನ್ಯನು ಧನ್ಯನು !! ಸರ್ವಸೌಖ್ಯದಿಂ) * * * * * ಕುಧರ ಸುತಾವರ, ಶಂಕರ, | ಬುಧಗುರುವರ, ಚಾರು ಕರುಣ ಪಾರಾವಾರ | ವಿಧುಶೇಖರ, ಗುಣಮಂದಿರ | ಕುಧುರಾಲಯ, ದಿವ್ಯಕಾಯ, ಪಾಲಿಸು ನಿರುತಂ | ಸಂಪೂರ್ಣ೦, ,