ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆತ್ಮನಿವೇದನೆ. p ಮಡಿಯಷ್ಟು ಬರೆದುಬಿಟ್ಟಿತು. ಪಾಪ! ಅದಾದರೂ ಏನು ಮಾಡೀತು !! ಯಾರ ಸಲು ವಾಗಿ ಅದು ಬರೆಯಲಿಕ್ಕೆ ಆರಂಭಿಸಿತೋ ಅವರ ಗುಣಗಳೇ ವಿಶಾಲವಾದವುಗಳಿರು ವವು, ಇಷ್ಟಾದರೂ ಆ ಲೆಕ್ಕಣಿಕೆಯ ಇಚ್ಚೆಯು ಪೂರ್ಣವಾಗಿಲ್ಲ, ಅದಕ್ಕೆ ನಾವು, ಮತ್ತೊಮ್ಮೆ ಇಂಥ ಸಂಧಿ ಸಿಕ್ಕಾಗ ಬರೆದು ನಿನ್ನ ಇಚ್ಛೆಯನ್ನು ಪೂರ್ಣಮಾಡಿಕೋ ಎಂದು ಹೇಳಿ, ಸಮಾಧಾನಮಾಡಿರುವೆವು, ಆಯಿತು, ಶ್ರೀಯುತ ಅಡಿವಪ್ಪನವರ ಉಪಕಾರವನ್ನು ನಾವು ಆಜನ್ನ ಮರೆಯದಂತಾಯಿತು. ದೇವರು ಇವರಿಗೆ ಸುಖ. ಸಂತತಿ ಸಂಪದಾಯುರಖಿಳ ಶ್ರೇಯಂಗಳನ್ನು ಕೊಟ್ಟು ಪಾಲಿಸಲಿ ! ಇಷ್ಟೇ ನಮ್ಮ ಪ್ರಾರ್ಥನೆ, ಸಹಾನುಭೂತಿಗಳಾದ ವಾಚಕರು ವಿಸ್ತಾರದ ಬಗ್ಗೆ ಬೇಸರಗೊಳ್ಳಲಿಕ್ಕಿ ಛಂದು ನಂಬಿರುವೆನು. ಗುಣಾಃ ಪೂಜಾಸ್ಥಾನಂ ಗುಣಿಷು ನ ಚ ಲಿಂಗಂ ನ ಚ ವಯಃ ಮ. ರಾ. ರಾ. ಪ್ರಭಾಕರ ಶ್ರೀಪತ ಭಸ ಎಂಬವರು ಮಹಾರಾಷ್ಟ್ರ ಭಾಷೆಯಲ್ಲಿ ಬರೆದ “ ಪ್ರೇಮಮಂದಿರ ” ವೆಂಬ ಪುಸ್ತಕವನ್ನು ಸಾಗ್ರವಾಗಿ ಓದಿ, ಸಮಾಜದ ಸದ್ಯ ಸ್ಥಿತಿಯನ್ನು ಪಠ್ಯವಲೋಕಿಸಿ ಮನಸ್ಸಿನಲ್ಲಿ ಉಂಟಾದ ಪರಿಣಾಮವನ್ನು ಈ ಕಾದಂಬರಿ ಯಲ್ಲಿ ಬರೆದಿರುವೆನು. ಈ ಕಾದಂಬರಿಯು ಸರ್ವಾಂಗಸುಂದರವಾಗುವಂತೆ ಮುದ್ರಣಕಾರ್ಯದಲ್ಲಿ ಅವಿಶ್ರಾಂತಶ್ರಮವನ್ನು ವಹಿಸಿದ ಮ. ರಾ. ರಾ. ದೇವೇಂದ್ರಪ್ಪಾ ಚೌಗುಲೆ ಮಹಾ ವೀರ' ಪ್ರಸ ಮ್ಯಾನೇಜರ ಇವರ ಉಪಕಾರವನ್ನು ತುಂಬಾ ಸ್ಮರಿಸುವೆನು. ಇನ್ನು ಸರ್ವ ಜಗದ್ರಕ್ಷಕನೂ, ಪರಮದಯಾಘವನೂ ಆದ ಶ್ರೀಸಾಂಬನನ್ನು ಸ್ತುತಿಸಿ ಈ ಲೇಖವನ್ನು ಮುಗಿಸುವೆನು. || ಭಾ, ಪಟ್ಟದಿ | ಚರಣ ನಂಬಿದ ಜನರ ಕೂರಿಕ | ತ್ವರಿತನಾಗಿಯೆ ಕೊಟ್ಟು ಪೊರೆಯುವ | ಹರನೆ, ನಿನ್ನಯ ಚರಣನಂಬಿಹೆ ಚರಣಕಿಂಕರನಾಂ | ಪರಮ ಕನ್ನಡನುಡಿಯ ಸೇವೆಯ | ನಿರದೆ ಮಾಡುವ ಶಕ್ತಿತನವನು | ಭರಿತನಾಗಿಯೆ ಕೊಟ್ಟು ರಕ್ಷಿಸು ಬೇಳ್ಳೆ ವರವಿಷ್ಟೇ || ೧ |