ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯಸು೦ದರಿ ಆಧವ, ದೀರ್ಘ ಪ್ರಯತ್ನ, (1 w # - -+AA * *,

  • /* * * * * * 1 • • • • • •/ # Pr
  • * *//

•••MAA ಗಳನ್ನೂ ಕೊಟ್ಟಿರುತ್ತಿರಲಿಕ್ಕೆ ದುರ್ಬಲನಿರುತ್ತೇನೆಂಬ ವಿಚಾರವು ಅಲ್ಲಿಯ ತರುಣರ ಮನಸ್ಸಿನಲ್ಲಿ ಎಂದೂ ಉತ್ಪನ್ನ ವಾಗುವದಿಲ್ಲ. ಇಂಥ ಪುಣ್ಯಭೂಮಿಗೆ ಶಿಕ್ಷಣದ ಸಲು ವಾಗಿ ನಮ್ಮ ಅಣ್ಣನು ನನ್ನ ನ್ನು ಕಳಸಿದ್ದಕ್ಕಾಗಿ ನಾನು ಆತನ ಮಹದುಪಕಾರವನ್ನು ಯಾವಷ್ಟೇವ ಮರೆಯುವಂತಿಲ್ಲ. ನಾನು ಸಣ್ಣವನಿರುವಾಗಲೇ ನನ್ನ ತಾಯಿತಂದೆಗಳು ತೀರಿಕೊಂಡರು. ಅವರ ಪಾಲನ-ಸೂತ್ರವು ಹರಿದು ಹೋದಮೇಲೆ ನನ್ನ ಮನೋ। ರಾಜ್ಯವು ಪ್ರಳಯವಾಯಿತೆಂದು ತಿಳಿದೆನು. ಆದರೆ ನಮ್ಮ ಅಣ್ಣನಿಗೆ ನನ್ನ ವಿಚಾರ ಗಳೆಲ್ಲ ಯೋಗ್ಯವಾಗಿ ತೋರಿದ್ದರಿಂದ ಬಡತನವಿದ್ದರೂ ಅಂಜದೆ, ಅಮೇರಿಕಾಕ್ಕೆ ಕಳಿಸಿ ನನಗೆ ನನ್ನ ಇಚ್ಚಿತ ಶಿಕ್ಷಣವನ್ನು ಕೊಡಿಸಿದನು. ಈಶ್ವರಕೃಪೆಯಿಂದ ಆ ಶಿಕ್ಷ ಣವೂ ಒಳ್ಳೆ ರೀತಿಯಿಂದ ಪೂರ್ಣವಾಯಿತು, ನನ್ನ ಇಚ್ಛೆಯನ್ನೂ, ವಿಚಾರವನ್ನೂ ನೋಡಿ ಅಮೇರಿಕಾದ ಪ್ರೊಫೆಸರರಿಗೆ ಆಶ್ಚರ್ಯವಾಗಿ ಅವರು ಒಳ್ಳೆ ಕಳಕಳಿಯಿಂದ ನನಗೆ ಕಲಿಸುವದನ್ನು ಕಲಿಸಿದರು. ಆ ಅತ್ಯಂತ ದೂರವಾದ ಎರಡನೇ ದೇಶದಲ್ಲಿ ನನ್ನ ಸ್ಥಿತಿಯು ಹೇಗಾದೀತೆಂಬ ಬಗ್ಗೆ ನನಗೆ ಮೊದಲು ಒಳ್ಳೆ ಚಿಂತೆಯಾಯಿತು' ಆದರೆ ಅಲ್ಲಿಯ ಎಲ್ಲ ದಿವಸಗಳು ಸುಖದಿಂದ ಕಳೆದವ. ಇತ್ತ ಕಡೆಗೆ ಬಂದಮೇಲೆ ಈಗ ನನ್ನ ಎಷ್ಟೋ ಮಿತ್ರರು ನನಗೆ ನವಕರಿ ಕೊಡಿಸುವದರ ಸಲುವಾಗಿ ಪ್ರಯತ್ನ ಮಾಡುತ್ತಾರೆ, ಕೆಲವರು ದೊಡ್ಡ ದೊಡ್ಡ ಸಾಹೇಬರಿಗೆ ಬೆಟ್ಟಿಯಾಗಿ ದೊಡ್ಡ ಸಗಾ ರದ ನವಕರಿಯನ್ನು ಕೊಡಿಸುತ್ತೇವೆಂದು ಪತ್ರ ಬರೆಯುತ್ತಿರುವರು; ಆದರೆ ಪರಾಧೀನ ವೆಂಬ ಸರಪಳಿಯಿಂದ ಕೈ ಕಾಲುಗಳನ್ನು ಕಟ್ಟಿಸಿಕೊಂಡು, ನನ್ನ ಎಲ್ಲ ವಿಚಾರದ ಮೇಲೆ ನೀರು ಬಿಡಲಿಕ್ಕೆ ನಾನು ಎಂದೂ ಸಿದ್ಧನಾಗುವದಿಲ್ಲ. ನನ್ನ ಕಾರ್ಯವು ಕಷ್ಟ ಸಾಧ್ಯ ವಾದದ್ದೆಂಬುವದನ್ನು ನಾನು ಪೂರ್ಣವಾಗಿ ತಿಳಿದಿರುತ್ತೇನೆ; ಆದರೂ ಅದನ್ನು ನಾನು ಮಾಡಿಯೇ ತೀರುತ್ತೇನೆಂದು ನನಗೆ ನಂಬಿಗೆಯದೆ, ಹೇಗಾದರೂ ಮಾಡಿ ಧನವನ್ನು ಸಂಪಾದಿಸುವದಾಗಲಿ, ಇಹಲೋಕಯಾತ್ರೆಯನ್ನು ಮುಗಿಸುವದಾಗಲಿ ನಿಜವಾದ ಮಾನವೀ ಧರ್ಮವೆನಿಸುವದಿಲ್ಲ, ನನಗೆ ಬೆಕ್ಕೆ ಬೇಡುವ ಪ್ರಸಂಗವು ಬಂದರೂ ಚಿಂತೆ ಯಿಲ್ಲ; ಆದರೆ ನಾನು ನನ್ನ ಆಯುಷ್ಯವು ಜಗತ್ತಿಗೆ ಹಿತಕರವಾದದ್ದೆಂಬುವದನ್ನು ಜನರ ನಿದರ್ಶನಕ್ಕೆ ತಂದ ಹೊರ್ತು ಇರುವದಿಲ್ಲ. ಮನುಷ್ಯನಿಗೆ ಆತ್ಮ ಬಲವೂ, ಈ ಬಲಸಂಪಾದನಕ್ಕೆ ಧೈರ್ಯವೂ ಬೇಕು. ನಾನು ದುರ್ಬಲನೂ, ಪಾಪಿಯೂ ಆಗಿರು ತೇನೆಂಬ ಮನಸ್ಸಿನ ವಿಚಾರವು ಮನುಷ್ಯನನ್ನು ಎಲ್ಲ ಭಾಗದಿಂದಲೂ ಕಟ್ಟಿ ಹಾಕಿ ಬಿಡುತ್ತದೆ, ನನ್ನ ನಾಂಪತ್ತಿಕ ಸ್ಥಿತಿಯು ಚನ್ನಾಗಿಲ್ಲದಿದ್ದರೂ ನನ್ನ ಮನಸ್ಸು ನನಗೆ ನೀನು ದರಿದ್ರನೆಂದು ಎಂದೂ ಅನ್ನು ವದಿಲ್ಲ. ತಿರುಗಿ ನನಗೆ ಅದು “ ನೀನು ಪ್ರಯತ್ನ ಮಾಡು, ಅಂದರೆ ನಿನ್ನ ಇಷ್ಟಗಳೆಲ್ಲವೂ ಸಿದ್ಧಿಯಾಗುತ್ತವೆ!” ಎಂದು ಹೇಳುತ್ತದೆ ಈ ಪ್ರಕಾರ ವಿಚಾರಮಾಡುತ್ತ ಒಂದು ದಿವಸ ಸಂಜೆಯ ನಾಲ್ಕು ಹೊಡೆಯುವ ಸುಮಾರಕ್ಕೆ ವಿನಾಯಕನು ತನ್ನ ಮನೆಯೊಳಗಿನ ವಾಚನಾಲಯದಲ್ಲಿ ತಿರುಗಾಡುತ್ತಿ