ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ನೆಯ ಪ್ರಕರಣ-ಬುದ್ಧಿ ಕರ್ಮಾನುಸಾರಿಣೀ ! dvvvvvvvvvv7 vvvvvvvvvvvv ಯಿಯ ಮಹಾಲಕ್ಷ್ಮಿ ದೇವಾಲಯದ ಪಾರ್ಶ್ವ ದಲ್ಲಿ ಕಟ್ಟಿಸಿದ ತನ್ನ ಸ್ವಂತ ಬಂಗಲೆ ಯಲ್ಲಿ ಇರುತ್ತಿದ್ದನು. ರಾಜಾಸಾಹೇಬ ವಿನಾಯಕರಿಗೂ ದೂರ ಆಪ್ತ ಸಂಬಂಧ ವಿದ್ದಿತು, ಆದರೆ ರಾಜಾಸಾಹೇಬನಿಗೆ ವಿನಾಯಕನಂಥ ಬಡತನದ ಮನುಷ್ಯನಿಗೆ ನನಗೂ-ನಿಮಗೂ ಆಷ್ಯತ್ವವದೆಯೆಂದು ಹೇಳುವದು ಲಜ್ಞೆಯ ಮಾತಾಗಿ ತೋರಿದ್ದ ರಿಂದ ಅವನು ಆ ಸಂಬಂಧವಾಗಿ ಒಂದು - ಬ್ರ' ಅಕ್ಷರವನ್ನಾದರೂ ಉಚ್ಚರಿಸುತ್ತಿದ್ದಿಲ್ಲ. ಈ ಪ್ರಕರಣದ ಆರಂಭದಲ್ಲಿ ಹೇಳಿದ ಪ್ರಕಾರ ಆ ದಿವಸ ವಿನಾಯಕನು ಕೋ ಣೆಯಲ್ಲಿ ವಿಚಾರಮಾಡುತ್ತ ತಿರುಗಾಡುತ್ತಿರುವಾಗ ಕೋಣೆಯ ಬಾಗಿಲು ತೆರೆಯಿತು. ಒಳಗೆ ೨೭-೨೮ ವರ್ಷದ ಒಬ್ಬ ಅತ್ಯಂತ ಸುಂದರ ಸ್ತ್ರೀಯು ನಗುತ್ತ ಒಳಗೆ ಬಂದು ವಿನಾಯಕನನ್ನು ಕುರಿತು:- ಮೈದುನರೇ, ನಿಜವಾಗಿ ಹೇಳಿರಿ, ಯಾವಾಗಲೂ ಈ ಕಲ್ಲುಮಣ್ಣುಗಳನ್ನು ನೋಡಿ ಯಾವ ವಿಚಾರ ಮಾಡುತ್ತೀರಿ ?” ಎಂದಳು. ಬಂದ ಸ್ತ್ರೀಯ ಹೆಸರು ಯಮುನೆ, ಅವಳು ಕೃಷ್ಣರಾಯನ ಹೆಂಡತಿಯು. ಅವಳು ಪ್ರೇಮಲಸ್ವಭಾವದವಳಿದ್ದು, ವಿನಾಯಕನನ್ನು ಬೆನ್ನಿಗೆ ಬಿದ್ದ ತಮ್ಮನಂತೆ ಸಂರಕ್ಷಿಸುತ್ತಿದ್ದಳು. ವಿನಾಯಕನು ಅವಳಲ್ಲಿ ಅತ್ಯಂತ ಶ್ರದ್ಧೆಯುಳ್ಳವನಾಗಿದ್ದನು. ಅವನು ಗಂಭೀರಸ್ವರದಿಂದ ಅಂದದ್ದೇನಂದರೆ: -1 ಅತ್ತಿಗೆಯವರೇ, ಇವು ನಿಮಗೆ ಕಲ್ಲುಮಣ್ಣುಗಳಂತಿರುತ್ತವೆ. ಆದರೆ ಇವೇ ನಮ್ಮ ಭಾರತಭೂಮಾತೆಯ ಅಭರಣಗಳು. • ಬಹುರತಾ ವಸುಂಧರಾ ' ಎಂಬುವದು ಲೋಕ ಪ್ರಸಿದ್ದವಾಗಿದೆ. ಈ ರತ್ನ ಗಳು ವಸುಂಧರೆಯ ಗರ್ಭದಲ್ಲಿರುತ್ತವೆ. ಇವುಗಳನ್ನು ಶೋಧಿಸಿ ತೆಗೆಯಬೇಕಾದರೆ ಮಾತ್ರ ಭೂಮಿಯ ವಿಲಕ್ಷಣ ಸೇವೆಮಾಡಲಿಕ್ಕೆ ಬೇಕು, ವಿಶೇಷತಃ ಹಿಂದುಸ್ತಾನದಂಥ ಪುಣ್ಯಮಯ ಭೂಮಿಯಲ್ಲಿ ಇದ್ದಷ್ಟು ಅಮೂಲ್ಯ ಮತ್ತು ಅದೃಶ್ಯ ಸಂಪತ್ತು ಇತರ ಯಾವ ಭೂಮಿಯಲ್ಲಿಯೂ ಇರುವದಿಲ್ಲ; ಆದರೂ ಒಳ್ಳೆ ಸುಶಿಕ್ಷಿತ ಜನರು ಕೂಡ ಈ ಸಂಪತ್ತಿಗೆ ಲಕ್ಷಗೊಡುವದಿಲ್ಲ. ಅವರಲ್ಲಿ ಕೆಲವರ ವಿಚಾರ-ವಾದವಿವಾದಗಳಂತೂ ವಿಚಿತ್ರವಾಗಿರುತ್ತವೆ. ಸ್ತ್ರೀಯರು ಜೋಡುಗಳನ್ನು ಮೆಟ್ಟ ಬೇಕೋ-ಎತ್ತರವಾದ ಬೂಟುಗಳನ್ನು ಮೆಟ್ಟ ಬೇಕೋ, ಅವರು ಸೀರೆಗಳನ್ನು ಉಡಬೇಕೋ-ಉದ್ದನ್ನ ನೀರಿ ಗೆಯ ಅಂಗಿಯನ್ನು ತೊಡಬೇಕೋ...ಎಂಬೀ ಮೊದಲಾದ ವಿಷಯಗಳ ಬಗ್ಗೆ ಇವರು ಹೆಚ್ಚಿನ ವಾದವಿವಾದಗಳನ್ನು ನಡಿಸುತ್ತಿದ್ದು ಹೆಚ್ಚಿನ ವ್ಯಾಸನೇಬಲ ಸ್ತ್ರೀಯರನ್ನು ಪೂಜಿಸಲಿಕ್ಕೂ ಸಿದ್ಧರಾಗಿರುತ್ತಾರೆ. ಈ ಪ್ರಕಾರ ಸರ್ವಸಾಮರ್ಥ್ಯವನ್ನು ನಾರೀ ಪೂಜೆಯಲ್ಲಿ ನಾಶಮಾಡುತ್ತಿರುವ ಇವರು ಹಿಂದುಸ್ತಾನದ ಭೂಮಿಯಲ್ಲಿ ಅಡಗಿರುವ ಸಂಪತ್ತಿನ ಕಡೆಗೆ ಹೇಗೆ ಲಕ್ಷಗೊಟ್ಟಾರು. ! ” ಎಂದನು. ಆಗ ಯಮುನೆಯು ಕೆಲಹೊತ್ತು ಸುಮ್ಮನೆ ನಿಂತು ಆ ಮೇಲೆ: ಸ್ತ್ರೀಯರ ಸಂಬಂಧವಾಗಿ ಈ ಮಾರ್ಗ ಹಿಡಿದ ಜನರಿಗೆಲ್ಲ ಹುಚ ರೆಂದನ್ನಲಿಕ್ಕೆ ಬೇಕಾಯಿತಲ್ಲ!”