ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ.

  • - *

ವಿನಾಯಕ:- ಅವರು ಹುಚ್ಚರಲ್ಲ. ಒಂದುವೇಳೆ ಅವರು ಹುಚ್ಚರಾಗಿದ್ದರೆ ಇಷ್ಟು ನಮ್ಮ ಭಾರತೀಯ ಪೂರ್ವಸಂಸ್ಕೃತಿಯ ಮಹತ್ವವೇ ಕಡಿಮೆಯಾಗುತ್ತಿದ್ದಿಲ್ಲ. ಅವರು ನಿಜವಾಗಿ ಚತುರರಿದ್ದರೆ ನಮ್ಮ ಭಾರತೀಯ ಸಂಸ್ಕೃತಿಗೆ ಮತ್ತಿಷ್ಟು ಉಜ್ವಲ ಸ್ವರೂಪವು ಪ್ರಾಪ್ತವಾಗುತ್ತಿದ್ದಿತು. ಕುರುಡನ ಕೈಯೊಳಗಿನ ಕಂದೀಲಿನಂತೆ ಇವರ ಶಿಕ್ಷಣದ ಪರಿಣಾಮವಾಗಿದೆ.” ಈ ಪ್ರಕಾರ ಯಮುನಾ ವಿನಾಯಕರ ಸಂಭಾಷಣವು ನಡೆದಿರುತ್ತಿರಲು ರಾಜಾ ಸಾಹೇಬನ ದಿವಾಣ ಮಾಧವರಾಯನು ಅಲ್ಲಿಗೆ ಬಂದನು. ಕೂಡಲೆ ಸಂಭಾಷಣವು ಮುಗಿದು ಯಮುನೆಯು ಮನೆಯೊಳಗೆ ಹೊರಟುಹೋದಳು. ವಿನಾಯಕನು ಮಧ ವರಾಯನ ಯಥೋಚಿತ ಸತ್ಕಾರವನ್ನು ಮಾಡಿ ಅವನನ್ನು ಒಂದು ಆರಾಮ ಖುರ್ಚಿಯ ಮೇಲೆ ಕುಳ್ಳಿರಿಸಿದನು, ಮತ್ತು ತಾನು ಅವನ ಹತ್ತಿರವೇ ಒಂದು ಖುರ್ಚಿಯ ಮೇಲೆ ಕುಳಿತು ಮಾತಾಡಹತ್ತಿದನು. ವಿನಾಯಕ:- ರಾಜಾಸಾಹೇಬರ ಕಡೆಯ ವರ್ತಮಾನವೇನು ? ” ಮಾಧವ:-( ವಾರ್ತೆಯು ಮಂಗಲಕರವಾಗಿದೆ. ರಾಜಾಸಾಹೇಬರು ಭೂಮಿ ಯು ಪಡಬಿದ್ದಿರುವದರಿಂದ ಅದನ್ನು ನಿಮಗೆ ತೀರ ಕಡಿಮೆ ಹಣಕ್ಕೆ ಲಾವಣಿ ಕೊಡಲು ಒಪ್ಪಿರುತ್ತಾರೆ. ಆ ಎಲ್ಲ ಭೂಮಿಯು ಗೋದಾವರಿ ನದಿಯ ಆಚೇಕಡೆ ಯಲ್ಲಿರುತ್ತದೆ. ಅಲ್ಲಿ ರಾಮಪುರಗ್ರಾಮವು ಸಾಧಾರಣ ದೊಡ್ಡದಿರುವದರಿಂದ ಆ ಭೂಮಿಯು ರಾಮಪುರದ ಭೂಮಿಯೆಂದೇ ಪ್ರಸಿದ್ದಿಯಾಗಿರುತ್ತದೆ. ಕಾಗದಪತ್ರಗಳಾ ದರೂ ಆ ಹೆಸರಿನಿಂದಲೇ ಆಗಬೇಕಾಗಿರುತ್ತವೆ.” ವಿನಾಯಕ:- ( ಆ ಭೂಮಿಯು ಪಡಬಿದ್ದಿರುವದು ನಿಜ, ಆದರೆ ಅದರ ಹೊಟ್ಟೆಯಲ್ಲಿ ಅನೇಕ ಹೆಚ್ಚಿನ ಬೆಲೆಯ ವಸ್ತುಗಳು ಅಡಕವಾಗಿರುತ್ತವೆಂಬುವದನ್ನು ತಾವು ರಾಜಾಸಾಹೇಬರಿಗೆ ಹೇಳಿರುವಿರೇನು ? ೨೨ ಮಾಧವ:- ಹೇಳಿದೆನು, ಆದರೆ ಅದರ ಮೇಲೆ ಅವರ ವಿಶ್ವಾಸವಿಲ್ಲ. ಇರಲಿ. ಅಲ್ಲಿಂದ ತಂದ ಕಲ್ಲು ಮೊದಲಾದವುಗಳನ್ನು ನನಗೆ ತೋರಿಸುವಿರೇನು ? " ( ಆನಂದದಿಂದ ” ಎಂದನ್ನುತ್ತ ವಿನಾಯಕನು ಮಾಧವರಾಯನನ್ನು ಸಂಗಡ ಕರಕೊಂಡು ಬಂದು ದೊಡ್ಡ ಟೇಬಲ್ಲಿನ ಹತ್ತಿರ ಹೋದನು, ಮತ್ತು ಅದರ ಮೇಲಿದ್ದ ಒಂದು ಕಲ್ಲು ತಕ್ಕೊಂಡು:-( ಈ ಕಲ್ಲು ರಾಮಪುರದ ಒಂದು ಭಾಗದಲ್ಲಿ ಬಹಳ ವಾಗಿ ಸಿಗುವಂತಿದೆ. ಖನಿಜಶಾಸ್ತ್ರದಲ್ಲಿ ಈ ಕಲ್ಲಿಗೆ ವೈಸಲ್ಯ ' ಎಂಬ ಹೆಸರು ಅದೆ. ಈ ಕಲ್ಲಿನಿಂದ ಕಬ್ಬಿಣ, ನಿಕಲ್, ತಾವುಗಳನ್ನು ತೆಗೆಯಬಹುದು. ಈ ಮತ್ತೊಂದು ಕಲ್ಲು ನೋಡಿರಿ, ಇದರ ಹೆಸರು ಪ್ಯಾಂಕಲಿನಾಯಿಟಿ. ಈ ಕಲ್ಲಿನಿಂದ ತವರು ತೆಗೆಯ ಲಿಕ್ಕೆ ಬರುತ್ತದೆ. ಕಬ್ಬಿಣ, ತಾಮ್ರ, ತವರು, ನಿಕಲ್ ಮೊದಲಾದ ಧಾತುಗಳು ಭರತ