ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿನ್ಯ ಸು೦ದ, ಅಥವಾ ದೀರ್ಘ ಪ್ರಯತ್ನ. ಶಾಮರಾಯರು ನನ್ನ ನ್ನು ತಮ್ಮ ಕಡೆಗೆ ಕಳಿಸಿದರು. ಅವರ ಮಾತಿನ ಮೇಲಿಂದ ಅವರು ಕೃಷ್ಣರಾಯನ ಜೀವದ ಗೆಳೆಯರಿರಬಹುದಾಗಿ ತೋರುತ್ತದೆ. " ಗೋಪಾಳರಾಯನ ಈ ಮಾತುಗಳನ್ನು ಕೇಳಿ ವಿನಾಯಕನ ಅಂತಃಕರಣವು ಕಳವಳಗೊಂಡಿತು. ಕೂಡಲೆ ಅವನು ಮನೆಯಿಂದ ಹೊರಬಿದ್ದನು, ಹೋಗುವ ಕಾಲಕ್ಕೆ ಯಮುನೆಗೆ ಎಲ್ಲ ವಾರ್ತೆಯನ್ನು ತಿಳಿಸಿ ಹೋಗಬೇಕೆಂದು ಅವನಿಗೆ ತೋರಿ ತು, ಆದರೆ ಬಂದ ಮನುಷ್ಯನು ಒಳ್ಳೆ ತ್ವರೆಯನ್ನು ತೋರಿಸಿದ್ದರಿಂದಲೂ, ಸ್ವತಃ ತಾನು ಆ ದುಃಖಕಾರಕ ವಾರ್ತೆಯಿಂದ ಹತಬುದ್ಧನಾದದ್ದರಿಂದಲೂ ಅವನು ವಿಶೇಷ ವಿಚಾರಮಾಡದೆ ಕೂಡಲೆ ಆ ಮನುಷ್ಯನೊಡನೆ ಗಾಡಿಯಲ್ಲಿ ಹೋಗಿ ಕುಳಿತನು. ಆ ಇಬ್ಬರು ಕೂಡ್ರುತ್ತಲೇ ಗಾಡಿಯು ವೇಗದಿಂದ ಹೊರಟುಹೋಯಿತು.

  1. /\ \ Y

೨ನೆಯ ಪ್ರಕರಣ. ಅಲ್ಲಿ! ಇಂದಿರೆಯ ಆತ್ಮ ನಿವೇದನ! ( ರಾ) ತ್ರಿಯ ಸಮಯ. ಎಂಟು ಎಂಟೂವರಿ ಆಗಿರಬಹುದು, ಆ ವೇಳೆಯಲ್ಲಿ ಮುಂಬಯಿಯಂಥ ದೊಡ್ಡ ಪಟ್ಟಣದಲ್ಲಿ ಜನಸಂದಣಿಯನ್ನು ಬಣ್ಣಿಸು ಹಳ ವದೇನದೆ ! ಆ ಜನಸಂದಣಿಯೋಳಗಿಂದ ವಿನಾಯಕನ ಗಾಡಿಯು « ಮೆಲ್ಲಮೆಲ್ಲನೆ ಹೋಗುತ್ತಿದ್ದಿತು. ಆಗ ವಿನಾಯಕನ ಶರೀರವು ಮಾತ್ರ ಗಾಡಿಯಲ್ಲಿ ಕುಳಿತಿದ್ದಿತು. ಅವನ ಮನಸ್ಸು ಕೃಷ್ಣರಾಯನ ಕಡೆಗೆ ಹೋಗಿದ್ದಿತು. ನಡುನಡುವೆ ಅವನು ಗೋಪಾಳರಾಯನಿಗೆ ಕೃಷ್ಣರಾಯನ ಸಂಬಂಧವಾಗಿ ಪ್ರಶ್ನೆ ಮಾಡುತ್ತಿದ್ದನು; ಆದರೆ ಗೋಪಾಳರಾಯನಿಂದ ತಿಳಿಯುತ್ತಿದ್ದ ಸಂಗತಿಯು ಅಸಮಾ ಧಾನಕಾರವೂ, ಚಿಂತೆಯನ್ನು ಹೆಚ್ಚಿಸುವದೂ ಆದದ್ದರಿಂದ ಅವನು ಗೋಪಾಳರಾಯ ನಿಗೆ ಹೆಚ್ಚು ಪ್ರಶ್ನೆಗಳನ್ನೂ ಮಾಡಲಿಲ್ಲ. ಗಾಡಿಯು ಅನಂತ ಬೀದಿಗಳನ್ನು ದಾಟಿ ಕಡೆಗೆ ಒಂದು ಸಣ್ಣ ಗಲ್ಲಿಯನ್ನು ಹೊಕ್ಕು ಮೂಲೆಯೊಳಗೆ ಒತ್ತಟ್ಟಿಗಿದ್ದ ಸಣ್ಣ ದುಮ ಜಲೀ ಬಂಗಲೆಯ ಹತ್ರ ಬಂದು ನಿಂತಿತು. ಗಾಡಿಯು ನಿಲ್ಲುತ್ತಲೇ ಗೋಪಾಳ ರಾಯನು ವಿನಾಯಕನನ್ನು ಕರಕೊಂಡು ಆ ಬಂಗಲೆಯೊಳಗೆ ಹೋದನು. ಆ ಬಂಗಲೆಯು ಸಣ್ಣದಿದ್ದರೂ ಚಿತ್ತಾಕರ್ಷಕವಾಗಿದ್ದಿತು. ಅದರ ಸುತ್ತಲೂ ಒಂದು ಮನೋಹರವಾದ ತೋಟವಿದ್ದಿತು. ಅದರ ಎಲ್ಲ ಭಾಗದಲ್ಲಿಯೂ ವಿದ್ಯುದ್ದೀಪಿ