ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ನೆಯ ಪ್ರಕರಣ- ಇ೦ದಿರೆಯ ಆತ್ಮ ನಿವೇದನ ! - rr/ / //v 4 • - - 7 ' +4 --- * - *- ///.rvy ಕೆಗಳು ಮಿನುಗುತ್ತಿದ್ದವು. ಉಪ್ಪರಿಗೆಯ ಮೇಲೆ ವಿದ್ಯುಲ್ಲತೆಯ ಸಂಖಗಳು ಗರಗರ ತಿರುಗುತ್ತಿದ್ದವು. ಗೋಪಾಳರಾಯನು ವಿನಾಯಕನನ್ನು ಆ ಉಪ್ಪರಿಗೆಯಿಂದ ಈ ಉಪ್ಪರಿಗಿಗೆ ಈ ಉಪ್ಪಿರಿಗೆಯಿಂದ ಆ ಉಪ್ಪರಿಗಿಗೆ ಕರಕೊಂಡು ಹೋಗುತ್ತ ಮಧ್ಯ ಭಾಗದಲ್ಲಿದ್ದ ಒಂದು ವಿಶಾಲವಾದ ಉಪ್ಪರಿಗೆಯಲ್ಲಿ ಕರಕೊಂಡು ಹೋಗಿ ಒಂದು ಆರಾಮ ಖುರ್ಚಿಯ ಮೇಲೆ ಕೂಡಿಸಿದನು, ನಂತರ ಅವನು ವಿನಾಯಕನ ಕಡೆಗೆ ಏನೋ ಚಮತ್ಕಾರಿಕ ದೃಷ್ಟಿಯಿಂದ ನೋಡಹತ್ತಿದನು. ಆಗ ವಿನಾಯಕನು ಅವನಿಗೆ ( ಅಣ್ಣನೆಲ್ಲಿ ? ” ಎಂದು ಪ್ರಶ್ನೆ ಮಾಡಿದನು. ಕೃಷ್ಣರಾಯನಿಗೆ ಒಳಗೆ ಎಲ್ಲಿಯೋ ಮಲಿ ಗಿಸಿದ್ದು, ಡಾಕ್ಟರನ ಉಪಚಾರ ನಡೆದಿರುವದಾಗಿ ವಿನಾಯಕನಿಗೆ ತೋರಿತು. ಅವನು ಮೇಲಿನ ಪ್ರಶ್ನ ವನ್ನು ಎಷ್ಟು ಕಳಕಳಿಯಿಂದ ಮಾಡಿದ್ದಾನೆಂಬುವದನ್ನು ಬೇರೆ ಹೇಳ ಬೇಕಾಗಿಲ್ಲ. ಆ ಪ್ರಶ್ನ ಕ್ಕೆ ಉತ್ತರವನ್ನು ಕೊಡುವಾಗ ಗೋಪಾಳರಾಯನ ಮುಖ ಮುದ್ರೆಯ ಮೇಲೆ ಹರ್ಷರೇಖೆಯು ಕಾಣಿಸಿತು. ಅವನು ಆಗ:-( ನಿಲ್ಲಿರಿ. ತಾವು ಸ್ವಸ್ಥ ಕೂಡ್ರಿರಿ. ಈ ಪ್ರಶ್ನ ಕ್ಕೆ ಉತ್ತರವನ್ನು ಶಾಮರಾಯರು ಕೊಡುತ್ತಾರೆ. ” ಎಂದ ನ್ನು ತ ದಿವಾಣಖಾನೆಯ ಬಾಗಿಲನ್ನು ಗಟ್ಟಿಯಾಗಿ ಹಾಕಿಕೊಂಡು ಹೊರಟುಹೋದ ನು. ಇದನ್ನೆಲ್ಲ ನೋಡಿ ವಿನಾಯಕನು ಆಶ್ಚರ್ಯಚಕಿತನಾದನು. ಅವನಿಗೆ ಇದೇನು ಗೊಂದಲವೆಂಬುವದು ತಿಳಿಯಲಿಲ್ಲ. ಅವನು ಆ ಸಂಬಂಧವಾಗಿ ವಿಚಾರ ಮಾಡುತ್ತಿ ರುವಷ್ಟರಲ್ಲಿ ದಿವಾಣಖಾನೆಯ ಬಾಗಿಲು ತೆರೆದು, ಇಬ್ಬರು ಒಳಗೆ ಬಂದರು. ಅವರಲ್ಲಿ ಒಬ್ಬನು ನಮ್ಮ ವಾಚಕರಿಗೆ ಪರಿಚಯವಿದ್ದ ಗೋಪಾಳರಾಯನು, ಇನ್ನೊಬ್ಬನು ಶಾಮರಾಯನು, ಒಳಗೆ ಬರುವಾಗ ಶಾಮರಾಯನು ಬಾಗಿಲು ಹಾಕಿಕೊಳ್ಳು ವದರ ಸಲುವಾಗಿ ತಕ್ಕ ವ್ಯವಸ್ಥೆಯನ್ನು ಮಾಡಿ ಬಂದಿದ್ದನು. ಶಾಮರಾಯನು ಬಂದ ಕೂಡಲೆ ವಿನಾಯಕನು ಶಾಮರಾಯನನ್ನು ಕುರಿತು:- ನಮ್ಮ ಅಣ್ಣನೆಲ್ಲಿ? ಇನ್ನೂ ನನಗೆ ಯಾಕೆ ಆತನ ದರ್ಶನ ಮಾಡಿಸುವದಿಲ್ಲ ? ” ಎಂದನು. ಒಂದು ಸಾದಾ ಖುರ್ಚಿಯನ್ನು ಎಳಕೊಂಡು ಶಾಮರಾಯನು ವಿನಾಯಕನ ಹತ್ತರ ಕುಳಿತು ಅಂದದ್ದೇನಂದರೆ:-( ಈ ಗೋಪಾಳನು ನಿಮಗೆ ಸುಳ್ಳು ಹೇಳಿದನು. ಈ ಬಗ್ಗೆ ನನ್ನನ್ನು ಕ್ಷಮಿಸಿರಿ. ನಿಮ್ಮ ಅಣ್ಣಂದಿರಿಗೆ ಅಪಾರಿ ಮೊದಲಾದದ್ದೇನೂ ಇಲ್ಲ. ಇವನು ನಿಮ್ಮ ಅಣ್ಣಂದಿರ ಸಂಬಂಧವಾಗಿ ಹೇಳಿದ ಸಂಗತಿಯೆಲ್ಲ ಸುಳ್ಳಿರುವದು. ನನಗೆ ಈ ಸಂಬಂಧವಾಗಿ ಬಹಳ ಕೆಡಕೆನಿಸಿತು, ನಾನು ನಿಮ್ಮನ್ನ ಪೈ ಕರಕೊಂಡು ಬರಲಿಕ್ಕೆ ಹೇಳಿದ್ದೆನು. ಇರಲಿ, ನೀವು ಬಂದದ್ದಕ್ಕೆ ನಿಮ್ಮ ಆಭಾರವನ್ನು ಎಷ್ಟು ಮನ್ನಿಸಿದರೂ ಸ್ವಲ್ಪ ಸರಿ. ” 'ಶಾಮರಾಯನ ಮಾತನ್ನು ಕೇಳಿ ವಿನಾಯಕನಿಗೆ ಅವರಿಬ್ಬರ ಸಂಬಂಧವಾಗಿ ಬಹಳ ಸಿಟ್ಟು ಬಂದಿತು, ಆದರೂ ಅಣ್ಣನ ಖೇದಕಾರಕ ವಾರ್ತೆಯು ಅಸತ್ಯವಾದ ಟ್ವೆಂಬುವದನ್ನು ಕೇಳಿ ಒಂದು ರೀತಿಯಿಂದ ಅವನಿಗೆ ಆನಂದವಾದದ್ದರಿಂದ ಅವನು