ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨! ದಿವ್ಯಸು೦ದರಿ ಅಥವಾ ದೀರ್ಘ ಪ್ರಯತ್ನ, - -, - * ಯನ್ನು ತೆಗೆಯಬೇಕೆಂದು ಅವನು ವಿಚಾರಮಾಡಹತ್ತಿದನು. ಅವನು ಇದಿರೆಗೆ ಕೋಣೆಯ ಒಂದು ದಿಕ್ಕಿಗೆ ಬೊಟ್ಟು ತೋರಿಸಿ ( ಈ ಭಾಗಕ್ಕೆ ಕೋಣೆಯ ಆಚೇಕಡೆಗೆ ಏನದೆ ? ” ಎಂದು ಕೇಳಿದನು. ಇಂದಿರೆಯು ಆ ಕಡೆಗೆ ಒಂದು ಸಣ್ಣ ಕೋಣೆಯ ಭಾಗವು ಬಂದಿದೆ. ಆ ಕೋಣೆಗೆ ಅಭ್ಯವಿದ್ದು ಅದು ತೋಟದ ಹಿಂದಿನ ಭಾಗಕ್ಕೆ ಹೋಗಿದೆ.” ಎಂದಳು. ಇಂದಿರೆಯ ಈ ಶಬ್ದವನ್ನು ಕೇಳಿಯಂತೂ ವಿನಾಯಕನಿಗೆ ಬಹಳೇ ಸಮಾಧಾನವಾಯಿತು. ಅವನು ಇಂದಿರೆಯ ಪಲಂಗವನ್ನು ಸ್ವಲ್ಪ ಆಚೇ। ಕಡೆಗೆ ಎಳಕೊಂಡು ಅದರ ಮೇಲೆ ಒಂದು ಖುರ್ಚಿಯನ್ನಿಟ್ಟನು, ಮತ್ತು ಬೊಕ್ಕಣ ದೊಳಗಿಂದ ಚಾಕುವನ್ನು ತೆಗೆದು ಅದರ ತುದಿಯಿಂದ ಅವನು ಛತ್ತಿನ ಹಲಿಗೆಯ ಸ್ಕೂವನ್ನು ಸಡಿಲು ಮಾಡಹತ್ತಿದನು. ಹಲಿಗೆಯು ತೆಳ್ಳಗಿದ್ದು ಸ್ಕೂವು ಸಣ್ಣದಿದ್ದು ದರಿಂದ ಚಾಕುವಿನ ಸಹಾಯದಿಂದ ಆ ಹಲಿಗೆಯು ಕಡೆಗೆ ಬಂದಿತು. ಆಗ ಅದರ ಮೇಲೆ ಹಂಚುಗಳು ಕಾಣಿಸಹತ್ತಿದವು, ಖುರ್ಚೆಯ ಮೇಲೆ ನಿಂತುಕೊಂಡು ವಿನಾ ಯಕನು ಒಂದು ಹಂಚನ್ನು ತಲೆಯಿಂದ ಮೇಲಕ್ಕೆತ್ತುವ ಪ್ರಯತ್ನ ಮಾಡಿದನು. ಆ ಹಂಚುಗಳು ಒಳ್ಳೆ ಗಟ್ಟಿಯಾಗಿ ಕೂಡ್ರಿಸಿದ್ದವು. ವಿನಾಯಕನು ಮೊದಲೇ ಶಕ್ತಿ ಸಂಪನ್ನನು, ಅದರಲ್ಲಿ ಈಗ ಸಮಯವಿದ್ದದ್ದರಿಂದ ಅವನ ಶಕ್ತಿಯು ದ್ವಿಗುಣಿತವಾಯಿತು. ಅವನು ತಲೆಯಿಂದ ೨-೩ ಸಾರೆ ಆಘಾತ ಕೊಟ್ಟ ಕೂಡಲೆ ಒಂದು ಹಂಚು ಮೇಲಕ್ಕೆ ದ್ವಿತು. ಆಗ ಅದನ್ನು ಓರೆಮಾಡಿ ಆಕಾಶದೊಳಗಿನ ತಾರಾಮಂಡಲದ ದರ್ಶನ ತಕ್ಕೊಂ ಡನು. ಆ ವೇಳೆಯಲ್ಲಿ ಅವನಿಗೆ ಆದ ಆನಂದವು ಅವರ್ಣನೀಯವಾಗಿದ್ದಿತು. ಮಧ್ಯ ದಲ್ಲಿಯ ಒಂದು ಹಂಚು ಬದಿಗಾದದ್ದರಿಂದ ಎಡಬಲದ ಹಂಚುಗಳೂ ಬದಿಗಾದವು. ಆಗ ಅವನು ಮತ್ತೊಂದು ಹಂಚು ತೆಗೆಯಲಾಗಿ ಅವನಿಗೆ ಸಾಕಷ್ಟು ಹಾದಿಯಾಯಿತು. ಇಷ್ಟಾಗಲಿಕ್ಕೆ ಒಂದೂವರಿ ಹೊಡೆಯಿತು. ಹೋಗಲಿಕ್ಕೆ ಮಾರ್ಗವಾದಕೂಡಲೆ ಅವನ ತಲೆಯಲ್ಲಿ ಮತ್ತೊಂದು ಕಲ್ಪನೆಯು ಹುಟ್ಟಿತು. ಆಗ ಅವನು ಇಂದಿರೆಯನ್ನು ಕುರಿತು:- ನಿಮ್ಮಲ್ಲಿ ಒಂದು ಚಲೋ ಕುಡಗೋಲು ಅದೆಯೇನು ? ” ಎಂದನು. ಆಗ ಇಂದಿರೆಯು ( ಅದೆ ” ಎಂದನ್ನುತ್ತ ತನ್ನ ಪಲಂಗದ ಮೇಲಿನ ಗಾದಿಯ ಬುಡ ದಲ್ಲಿದ್ದ ತೀಕ್ಷ್ಯಧಾರೆಯ ಥಳಥಳ ಹೊಳೆಯುವ ಒಂದು ಸಣ್ಣ ಕತ್ತಿಯನ್ನು ವಿನಾಯ ಕನ ಕೈಯಲ್ಲಿ ಕೊಟ್ಟಳು. ಆ ಕತ್ತಿಯು ವಿಲಾಯತಿಯದಿದ್ದು ಬಹಳ ಹದನವಾಗಿ ದ್ವಿತು. ಆ ಕತ್ತಿಯನ್ನು ನೋಡಿದ ಕೂಡಲೆ ಅವನಿಗೆ ಬೇರೊಂದು ಸಂಶಯವು ಬಂದು ಇಂದಿರೆಗೆ:- ಇಂಥ ತೀಕ್ಷ್ಯ ಧಾರೆಯ ಕತ್ತಿಯನ್ನು ನೀವು ಯಾತರಸಲುವಾಗಿ ಇಟ್ಟು ಕೊಂಡಿರುವಿರಿ?” ಎಂದು ಕೇಳಲು ಅದಕ್ಕೆ ಇಂದಿರೆಯು ಉತ್ತರವನ್ನು ಕೊಡದೆ ತಾನು ಉಟ್ಟು ಕೊಂಡ ಸಲದ ಸೆರಗಿನಿಂದ ಮುಖವನ್ನು ಮರೆಮಾಡಿಕೊಂಡು ಅಳ ಹತ್ತಿದಳು.