ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ, V/ / 2 ಮುಗಳುನಗೆಯೊಡನೆ ಹಸ್ತಾಂದೋಲನವಾಯಿತು. ದಿವ್ಯಸುಂದರಿಯೂ ಇದೇ ಕಿತ್ತ ಯನ್ನು ತೀಡಿದಳು. ವಿನಾಯಕನು ಎಷ ವರ್ಷ ಅಮೇರಿಕಾದಲ್ಲಿ ಇದ್ದವನಾದ ದ್ದರಿಂದ ಈ ಪದ್ಧತಿಯು ಅವನಿಗೆ ಹೊಸದೆಂಬುವಂತಿದ್ದಿಲ್ಲ; ಆದರೂ ಈ ಪದ್ಧತಿಯು ಇಲ್ಲಿಯೂ ಬಳಿಕೆಯಲ್ಲಿ ಬಂದದ್ದನ್ನು ನೋಡಿ ಆಶ್ಚರ್ಯವೆನಿಸಿತು. ವಿನಾಯಕನ ಹತ್ತರ ಕುಳಿತ ತರುಣ ಗೃಹಸ್ಥನ ಹೆಸರು ರಾಮರಾಯ. ಅವನು ವಿನಾಯಕನಿಗೆ ಈ ಮೊದಲೇ ತನ್ನ ಪರಿಚಯ ಮಾಡಿಕೊಟ್ಟಿದ್ದನು. ಆ ಇಬ್ಬರು ಸ್ತ್ರೀಯರು ವಿನಾಯಕನಿಗೆ ಪ್ರಕೃ ತಿಯು ಹೇಗದೆಯೆಂದು ಕೇಳಲು, ಅವನು ತನ್ನ ಸ್ವಾಭಾವಿಕ ಮಧುರಸ್ಸರದಿಂದ ಪ್ರಕೃತಿಯು ಚನ್ನಾಗಿರುವದೆಂದು ತಿಳಿಸಿದನು. ನಂತರ ರಾಮರಾಯನು ಒಬ್ಬ ಮನು ಷ್ಯನನ್ನು ಕರೆದು ಪ್ರಾತರ್ವಿಧಿಯ ಸಲುವಾಗಿ ವಿನಾಯಕನನ್ನು ಕರಕೊಂಡು ಹೋಗಲಿಕ್ಕೆ ಹೇಳಿದನು, ಮತ್ತು ಎರಡನೇ ಮನುಷ್ಯನಿಗೆ ಚಹಾದ ವ್ಯವಸ್ಥೆ ಮಾಡ ಲಿಕ್ಕೆ ಹೇಳಿದನು. ವಿನಾಯಕನು ಮುಖಮಾರ್ಜನ ಮಾಡಿ ಬಂದು ಕುಳಿತ ಕೂಡಲೆ | ಚಹಾಪಾರ್ಟಿಯು ನಡೆಯಿತು. ಚಹಾಪಾರ್ಟಿ ನಡೆದಾಗ ವಿನಾಯಕನು ತನ್ನ ಯೋಗ್ಯತೆ ಮೀರಿ ಆದರಸಾರವಾಯಿತೆಂದು ನಮ್ರತೆಯಿಂದ ಸೂಚಿಸಿದನು, ಚಹಾಪಾರ್ಟಿ ಯಾದ ಮೇಲೆ ಮಧುರಾ-ದಿವ್ಯಸುಂದರಿಯರು ವಿನಾಯಕನಿಗೆ ರಾತ್ರಿಯಲ್ಲಿ ಓಡಿ ಬಂದ ಕಾರಣವನ್ನು ಕೇಳಿದರು, ಆಗ ವಿನಾಯಕನು ನಡೆದ ಎಲ್ಲ ಸಂಗತಿಯನ್ನು ಸವಿಸ್ತಾರವಾಗಿ ಹೇಳಿದನು. ರಾಮರಾಯ-ಮಧುರೆ-ದಿವ್ಯಸುಂದರಿಯರ ಪರಿಚ ಯವು ಅನಾಯಾಸವಾಗಿ ಆದದ್ದರಿಂದಲೂ, ವೈಭವದಿಂದ ತನಗಿಂತ ಅವರ ಯೋಗ್ಯ ತೆಯು ಹೆಚ್ಚಿನದಿದ್ದದ್ದರಿಂದಲೂ ವಿನಾಯಕನು ತನಗೊದಗಿದ ಸಂಕಟ ಪ್ರಸಂಗ ವನ್ನು ಒಳ್ಳೆ ಚಾತುರ್ಯದಿಂದ ಹೇಳುತ್ತಿದ್ದನು. ಅವನು ಆ ಸಂಗತಿಯನ್ನು ಹೇಳುತ್ತಿ ರವಾಗ ಮಧ್ಯದಲ್ಲಿ ತನ್ನ ಚರಿತ್ರವನ್ನೂ ಹೇಳುತ್ತಿದ್ದನು. ಮೊದಲೇ ಅವನ ಮಧುರ ಸ್ವರಕ್ಕೂ ಸಾದಾವೃತ್ತಿಗೂ, ಈಶ್ವರದತ್ತ ಸೌಂದರ್ಯಕ್ಕೂ ಬೆರಗಾದ ಅವರು ಅವನ ಪೂರ್ವಾಪರ ಚರಿತ್ರವನ್ನು ಕೇಳಿ ಅವನ ಸಂಬಂಧವಾಗಿ ತುಂಬಾ ಆದರಬುದ್ದಿಯು ಳ್ಳವರಾದರು. ವಿನಾಯಕನ ಪೂರ್ವಾಪರ ಚರಿತ್ರವನ್ನು ಕೇಳಿ ಆ ಮೂವರಲ್ಲಿ ದಿವ್ಯ ಸುಂದರಿಯ ಮನಸ್ಸಿನ ಮೇಲೆ ಅವನ ಸಂಬಂಧವಾಗಿ ಏನೋ ಒಂದು ವಿಶೇಷ ಪರಿ ಣಾಮವುಂಟಾಯಿತು. ಅವನು ಮಾತಾಡುವಾಗ ಅವನನ್ನು ಅವಳು ಬೇರೊಂದು ವಿಶೇಷ ತರದ ದೃಷ್ಟಿಯಿಂದ ನಡುನಡುವೆ ನೋಡುತ್ತಿದ್ದಳು. ಅವಳಿಗೆ ಇಂದಿರೆಯ `ವಿಷಯವಾಗಿ ಖೇದವೆನಿಸಿತು. ವಿನಾಯಕನು ತಾನು ಹೇಳುವ ಸಂಗತಿಯನ್ನು ಮುಗಿಸು ವಾಗ ಅವರು ಮಾಡಿದ ಉಪಕಾರದ ಸಲುವಾಗಿ ಅಂತಃಕರಣಪೂರ್ವಕ ಕೃತಜ್ಞತೆ ಯನ್ನು ವ್ಯಕ್ತವಣಡಿ ರಾಮರಾಯನನ್ನು ಕುರಿತು:- ಈಗ ಮನೆಗೆ ಹೋಗಲಿಕ್ಕೆ ನನಗೆ ಅಪ್ಪಣೆಯನ್ನು ಕೊಟ್ಟರೆ ನನ್ನ ಮೇಲೆ ಬಹಳ ಉಪಕಾರವಾಗುತ್ತದೆ. ಅಣ್ಣನೂ, ಅತ್ತಿಗೆಯೂ ನನ್ನ ದಾರಿಯನ್ನು ನೋಡುತ್ತಿದ್ದಾರು, ಅತ್ತಿಗೆಯಂತೂ ಇಡೀ ರಾತ್ರಿ