ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒನೆಯ ಪ್ರಕರಣ- ಸು೦ದರ.ಭವನ. 14 MMommm ಅಳುತ್ತ ಕುಳಿತಿರಬಹುದು, ಅವಳು ನನ್ನನ್ನು ತನ್ನ ಜೀವದಂತ ಜೋಕಿಸುತ್ತಾಳೆ, ೫ ಹೀಗನ್ನುತ್ತಿರಲಿಕ್ಕೆ, ಅವನ ಕಣ್ಣಿನ ಮುಂದೆ ಯಮುನೆಯ ಪ್ರಶಾಂತ-ಪವಿತ್ರ ಮೂರ್ತಿಯು ಕಾಣಿಸಹತ್ತಿತು. ಆಗಲೇ ಅವನ ಕಣ್ಣುಗಳು ಕಣ್ಣೀರಿನಿಂದ ತುಂಬಿ ಬಂದವು, ಆಗ ರಾಮರಾಯನು:- ಆ ಬಗ್ಗೆ ತಾವು ಏನೂ ಕಾಳಜಿಯನ್ನು ಮಾಡ ಬಾರದು. ಈಗಲೇ ನಿಮ್ಮ ಮನೆಗೆ ಮನುಷ್ಯನನ್ನು ಕಳಿಸಿ ನಿಮ್ಮ ಕ್ಷೇಮವಾರ್ತೆಯನ್ನು ತಿಳಿಸುತ್ತೇನೆ. ಈಗ ಸ್ವಲ್ಪ ವೇಳೆಯಲ್ಲಿ ಡಾಕ್ಟರರೂ ಬಂದಾರು. ಅವರು ನಿಮಗೆ ಹೋಗ ಲಿಕ್ಕೆ ಅಪ್ಪಣೆ ಕೊಟ್ಟರೆ ಆಗ ವಿಚಾರಮಾಡಿದರಾದೀತು. ” ಎಂದನ್ನಲು ಇಲ್ಲಿಯ ತನಕ ಸುಮ್ಮನಿದ್ದ ಮಧುರೆಯು:-( ಡಾಕ್ಟರರು ಹೋಗಲಿಕ್ಕೆ ಅಡ್ಡಿಯಿಲ್ಲವೆಂದು ಹೇಳಿದರೂ ನಾವು ಇಂದು ಹೋಗಗೊಡುವದಿಲ್ಲ. ನಾಳೆ ಬೇಕಾದರೆ ಅವರು ಹೋಗಲಿ, ಏನೇ ದಿವ್ಯಸುಂದರಿ? ” ಎಂದಳು. ಆಗ ದಿವ್ಯಸುಂದರಿಯು ನಗುತ್ತ:- ( ಹೌದು, ನನ್ನ ಮನಸ್ಸಿನೊಳಗೂ ಅದೇ ಅದೆ. ಅಣ್ಣಾ, ನೀನು ಮೊದಲು ಇವರ ಮನೆಗೆ ಸುದ್ದಿಯನ್ನು ಕಳುಹಿಸು, ಅಂದರೆ ಇವರ ಚಿಂತೆಯು ಕಡಿಮೆಯಾಗುವದು. " ಎಂದನ್ನಲು ಕೂಡಲೆ ರಾಮರಾಮಯನು ಎದ್ದು ಹೊರಗೆ ಹೋಗಿ ವಿನಾಯಕನ ಅಣ್ಣನ ಕಡೆಗೆ ಒಂದು ಸಣ್ಣ ಚೀಟಿಯನ್ನು ಬರೆದು ಕಳುಹಿಸಿದನು. ಕೇವಲ ಅದೃಷ್ಟಚಮತ್ಕೃತಿಯಿಂದ ವಿನಾಯಕನು ಈ ದೊಡ್ಡ ಶ್ರೀಮಂತರ ಬಂಗಲೆಗೆ ಯಾವ ರೀತಿಯಿಂದ ಮುಟ್ಟಿದನೆಂಬುವದು ನಮ್ಮ ವಾಚಕರಿಗೆ ತಿಳಿದದ್ದೇ ಅದೆ. ಯಾವ ಬಂಗಲೆಗೆ ಹೋಗಬೇಕೆಂದು ವಿನಾಯಕನು ಎಷ್ಟೋ ದಿವಸದಿಂದ ಯೋಗವನ್ನು ಹುಡುಕುತ್ತಿದ್ದನೋ, ಆ ಬಂಗಲೆಯಲ್ಲಿ ಈ ಪ್ರಕಾರ ಅನಾಯಾಸವಾಗಿ ತನ್ನ ಪ್ರವೇಶವಾದದ್ದರಿಂದ ಅವನಿಗೆ ಈಶ್ವರೀಯೋಜನೆಯ ಸಲುವಾಗಿ ಬಹಳ ಆಶ್ಚ ರ್ಯವಾಯಿತು. ಅವನು ಈಶ್ವರನಿಗೆ ಎಷ್ಟೋ ಸಾರೆ ಮನೋಮಯ ಪ್ರಣಾವ ಮಾಡಿದನು. ವಿನಾಯಕನು ಈಗಿದ್ದ ಬಂಗಲೆಯು ದಕ್ಷಿಣಹೈದರಾಬಾದದ ಪ್ರಸಿದ್ದ ಜಹಾಗೀರದಾರನಾದ ರಾಜಾಬಹಾದ್ದೂರ ಚಿಂತಾಮಣಿರಾಯ ಹರಿಹರ ದೇಶಪಾಂಡೆ ಇವನದಿದ್ದಿತು. ಇವನು ಎಷ್ಟೋ ದುಡ್ಡು ಸೂರಿಮಾಡಿ ರಾಜವಾಡೆಯಂತೆ ಈ ಬಂಗ ಲೆಯನ್ನು ಕಟ್ಟಿಸಿದ್ದನು. ಈ ಬಂಗಲೆಯ ಸುತ್ತು ಮುತ್ತು ಒಂದು ರಮ್ಯವಾದ ತೋಟ ವಿದ್ದಿತು. ಆ ತೋಟಕ್ಕೆ ಭವ್ಯವಾದ ಎರಡು ಬಾಗಿಲುಗಳಿದ್ದು, ಪ್ರತಿಯೊಂದು ಬಾಗಿ ಲಿನಲ್ಲಿ ಎರಡು ವಿದ್ಯುದ್ದೀಪಿಕೆಗಳಿದ್ದವು. ಬಂಗಲೆಯೊಳಗೆ ವರ್ಣಿಸುವದೇನು? ಎತ್ತ ನೋಡಿದರೂ ವಿದ್ಯುದ್ದೀಪಿಕೆಗಳ ಗರಗರ ತಿರುಗುವ ವಿದ್ಯುಲ್ಲತೆಯ ಬೀಸಣಿಕೆಗಳ ರಾಶಿಯೇ ಕಾಣಿಸುತ್ತಿದ್ದಿತು. ಈ ಬಂಗಲೆಗೆ ಐದು ಅಂತಸ್ತುಗಳಿದ್ದು ತರತರದ ಶಿಲೆ ಗಳಿಂದ ಕಟ್ಟಿದ್ದರಿಂದ ಅದು ಸರ್ವಾಂಗಸುಂದರವಾಗಿ ಶೋಭಿಸುತ್ತಿದ್ದಿತು. ಬಂಗ ಲೆಯ ಪ್ರವೇಶದ್ವಾರದ ಹತ್ತರ ಸಂಗಮವರೀ ಕಲ್ಲಿನ ಸುಂದರವಾದ ಒಂದು ಮಂಟ ಪವಿದ್ದು, ಪ್ರವೇಶದ್ವಾರದ ಒಳಗೆ ಒಂದು ದೊಡ್ಡ ದಿವಾಣಖಾನೆಯಿದ್ದಿತು. ಇದೇ